Advertisement

ಯಾರ್ಯಾರ ಹೇಳಿಕೆಗೆ ಪ್ರತಿಕ್ರಿಯಿಸಬೇಕಿಲ್ಲ : ಸಿ.ಟಿ ರವಿ

02:34 PM Jun 17, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ಹೆಚ್.ವಿಶ್ವನಾಥ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಯಾರ್ಯಾರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೊಡಬೇಕಿಲ್ಲ ನಾಯಕತ್ವ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ ಎಂದರು.

Advertisement

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನಮ್ಮ ಪಾರ್ಟಿಯಲ್ಲಿ ಪಾರ್ಲಿಮೆಂಟರಿ ಬೋರ್ಡ್ ಇದೆ.ಅವರು ನಿರ್ಧಾರ ಮಾಡಿದರೆ ಮುಗಿಯಿತು. ಯಾವುದೇ ತೀರ್ಮಾನ ಇದ್ದರೂ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಸ್ಪಷ್ಟ ಪಡಿಸಿದರು.

ಸುಖಾಸುಮ್ಮನೆ ಗೊಂದಲ ಮೂಡಿಸುವುದು ಸರಿಯಲ್ಲ. ಇದು ತಳಮಟ್ಟದ ಕಾರ್ಯಕರ್ತರಿಗೆ ಬೇರೆ ಮೆಸೇಜ್ ಹೋಗುತ್ತೆ. ನಮ್ಮ ಆದ್ಯತೆ ವ್ಯಕ್ತಿಗತವಾದುದಲ್ಲ.ಜನರ ಹಿತದ ಕಡೆ ನಮ್ಮ ಗಮ‌ನವಿರಬೇಕು, ಇದು ನಾನು ಕಲಿತ ಸಂಸ್ಕಾರ, ಸಂಸ್ಕೃತಿ ಎಂದರು.

ಇನ್ನು 17 ಜನರಿಂದ ಪಕ್ಷ ಹೀಗಾಯ್ತು ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, 17 ಜನ ಬಂದವರಿಂದಲೇ ನಮ್ಮ ಸರ್ಕಾರ ಬಂದಿದ್ದು ಎನ್ನುವ ದೃಷ್ಟಿಕೋನದಲ್ಲಿ ನಾನು ಹೇಳಿದ್ದೇನೆಂದು ಈಶ್ವರಪ್ಪನವರೇ ಹೇಳಿದ್ದಾರೆ. ಒಳಗೆ ಬಂದಮೇಲೆ ಎಲ್ಲರೂ ಒಂದೇ,ಅವರು ಬಂದಿದ್ದರಿಂದ ನಮಗೆ ಮೆಜಾರಿಟಿ ಸಿಕ್ಕಿದೆ. ಬಿಜೆಪಿಯ 104 ಶಾಸಕರನ್ನು ರಾಜ್ಯದ ಜನ ಗೆಲ್ಲಿಸಿದ್ದೂ ಸತ್ಯ. ಅವರು ಬಂದಿದ್ದಕ್ಕೆ ರಾಜಕೀಯ ಬೇಡ, ನಾವು ನಮ್ಮವರೆಂದೇ ಪರಿಗಣಿಸುತ್ತೇವೆ. ನನ್ನ ಸ್ವಾರ್ಥಕ್ಕಾಗಿ,ಅಧಿಕಾರಕ್ಕೆ ಬಳಕೆಯಲ್ಲ ಎಂದರು.

ಈಗ ಹೊರಗಿನವರು ಬಂದವರು ನಮ್ಮವರು. ಅಪ್ ಎಂಡ್ ಡೌನ್ ಇದ್ದೆ ಇರುತ್ತದೆ, ಹಾಗಂತ ಪಕ್ಷಕ್ಕೆ ಹಾನಿಯಾಗೋಕೆ ಬಿಡಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next