Advertisement
ಚಿಕ್ಕಮಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ಮಂತ್ರಿ ಸ್ಥಾನ ನನಗೆ ಸಿಕ್ಕಿರುವ ಅಧಿಕಾರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನನಗೆ ಸಿಕ್ಕಿರುವ ಜವಾಬ್ದಾರಿ ಈ ಎರಡರಲ್ಲಿ ಜವಾಬ್ದಾರಿಯ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಹಾಗಾಗಿ ಅಧಿಕಾರದ ವ್ಯಾಮೋಹ ಜವಾಬ್ದಾರಿಯ ಕೆಲಸಕ್ಕೆ ಹಿನ್ನೆಡೆ ಆಗಬಾರದು, ನನ್ನ ರಾಜಿನಾಮೆಯನ್ನು ಅಂಗೀಕರಿಸುವಂತೆ ನಿನ್ನೆ ಕೂಡ ಸಿಎಂ ಅವರಲ್ಲಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಆರ್.ಆರ್.ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಕಾಂಗ್ರೆಸ್ ಖಂಡಿತ ಸೋಲು ಅನುಭವಿಸುತ್ತದೆ . ಆರ್.ಆರ್.ನಗರ 25 ಸಾವಿರ, ಶಿರಾ 10 ಸಾವಿರಕ್ಕೂ ಅಧಿಕ ಮತಗಳಿಂದ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು, ಕಾಂಗ್ರೆಸ್ ಚುನಾವಣೆಯಲ್ಲಿ ಸೋತರೆ ಇವಿಎಂ ಮೇಲೆ ದೂರು ಹೊರೆಸುತ್ತಾರೆ, ಚುನಾವಣೆಯಲ್ಲಿ ಗೆದ್ರೆ ಜನಾದೇಶ, ಸೋತ್ರೆ ಇವಿಎಂ ಅಂತಾರೆ ಈ ರೀತಯ ಜನರನ್ನ ನೀವೆಲ್ಲೂ ನೋಡಲು ಸಾಧ್ಯವಿಲ್ಲ ಕಾಂಗ್ರೆಸ್ಸಿಗೆ ಇದೊಂದು ಕೆಟ್ಟ ಖಾಯಿಲೆ ಎಂದರು. ಇದನ್ನೂ ಓದಿ:ಗಿನ್ನಿಸ್ ದಾಖಲೆಯ ಮೂಲಕ ಜಿಲ್ಲೆಯ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಿದ ಸುರೇಶ್ ಯಾದವ್
Related Articles
ಡಿ.ಕೆ.ರವಿ ತಾಯಿ ಸೊಸೆ ಕುಸುಮಾಳನ್ನ ಗೆಲ್ಲಿಸಿ ಎಂಬ ಹೇಳಿಕೆಗೆ ಪ್ರತಿಕ್ರೀಯಿಸಿದ ಸಿಟಿ.ರವಿ ಅತ್ತೆ-ಸೊಸೆ ಜಗಳವಾಡಲಿ ಎಂದು ಹೇಳೂದು ಇಲ್ಲ, ಬಯಸೂದು ಇಲ್ಲ ಅತ್ತೆ-ಸೊಸೆ ತಾಯಿ ಮಕ್ಕಳಂತೆ ಚೆನ್ನಾಗಿರಲಿ, ನಮಗೆ ಯಾರ ಮೇಲೂ ವ್ಯಕ್ತಿಗತವಾದ ವಿರೋಧವೂ ಇಲ್ಲ , ದ್ವೇಷವೂ ಇಲ್ಲ ನಮ್ಮ ತಾತ್ವಿಕ ಹೋರಾಟ ಕಾಂಗ್ರೆಸ್, ಜೆಡಿಎಸ್ ವಿರುದ್ಧ. ನಾವು ನಮ್ಮ ಪಕ್ಷಗೆಲ್ಲಬೇಕೆಂದು ಬಯಸುತ್ತೇವೆ, ಅತ್ತೆ-ಸೊಸೆ ತಾಯಿ ಮಕ್ಕಳಂತೆ ಇರಬೇಕೆಂಬುದು ನಮ್ಮ ಬಯಕೆ ಮುಖ ನೋಡಲ್ಲ ಅಂತಿದ್ದೋರು ನೋಡುವಂತಾಗಿರೋದು ಸಂತೋಷದ ಸಂಗತಿ ಎಂದರು.
Advertisement
ಇದನ್ನೂ ಓದಿ:ಹಿರಿಯ ನಟ ಎಚ್.ಜಿ ಸೋಮಶೇಖರ್ ನಿಧನ
ಬಿಹಾರದಲ್ಲಿ ಬಿಜೆಪಿ ಸಿಂಗಲ್ ಲಾರ್ಜಸ್ಟ್ ಪಾರ್ಟಿ: ಬಿಹಾರದಲ್ಲಿ ಬಿಜೆಪಿ ಸಿಂಗಲ್ ಲಾರ್ಜಸ್ಟ್ ಪಾರ್ಟಿ ಎನ್ನಲಾಗುತ್ತಿದೆ, ಅಲ್ಲದೆ ಆತಂರಿಕ ವರದಿಯ ಪ್ರಕಾರ ನಿತೀಶ್ ನೇತೃತ್ವದ ಎನ್.ಡಿ.ಎ ಅಧಿಕಾರಕ್ಕೆ ಬರುತ್ತೆ ಎನ್ನುತ್ತಿದೆ, ಜನರಿಗೆ ಕೇಂದ್ರದ ಯೋಜನೆಯ ಲಾಭ ತಲುಪಿದೆ ಇದರಿಂದ ಸೈಲೆಂಟ್ ಓಟರ್ಸ್, ಮಹಿಳೆಯರು ಬಿಜೆಪಿಗೆ ಮತ ಹಾಕುತ್ತಾರೆ, ಗೂಂಡ ರಾಜ್ಯ ಕಂಡವರಿಗೆ ನಿತೀಶ್ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ, ಕೆಲಸ ಆಗ್ತಿರೋದು ಮತವಾಗಿ ಪರಿಣಮಿಸಲಿದೆ ಎಂದರು.