ಚಿಕ್ಕಮಗಳೂರು: ಮುನಿಯಪ್ಪನವರೇ ನಿಮ್ಮ ಅಕ್ಕಿ ಎಲ್ಲಿ? ಅನ್ನಭಾಗ್ಯದ ಅಕ್ಕಿ ಎಲ್ಲಿ ಕೊಟ್ಟಿದ್ದೀರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.
ಭಾರತ್ ಅಕ್ಕಿ ಕಳಪೆಯಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿ.ಟಿ.ರವಿ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರ ಕೊಡುವ ಅಕ್ಕಿಯನ್ನೇ ಕಡಿತ ಮಾಡಿದೆ. ನಿಮ್ಮ ಪ್ರಣಾಳಿಕೆಯಂತೆ10 ಕೆ.ಜಿ. ಅಕ್ಕಿ ಹೋಗಲಿ, 10 ಗ್ರಾಂ ಅಕ್ಕಿಯಾದರೂ ನೀಡಿದ್ರಾ, ಆಂದ್ರ, ತೆಲಂಗಾಣ ಜತೆ ಮಾತನಾಡುತ್ತೇವೆಂದು ಜನರ ಕಿವಿಗೆ ಹೂವು ಮುಡಿಸಿದ್ದೀರಾ ಎಂದರು.
ನೀವು ವಿರೋಧ ಪಕ್ಷದಲ್ಲಿದ್ದಾಗ ಕಿವಿಯಲ್ಲಿ ಹೂವು ಇಟ್ಟುಕೊಂಡು ಪ್ರತಿಭಟನೆ ಮಾಡಿದ್ರೀ, ಈಗ ಯಾರ ಕಿವಿಗೆ ಹೂವು ಮುಡಿಸುತ್ತೀದ್ದೀರಿ, ನಿಮಗೆ ಒಂದು ಕೆ.ಜಿ.ಅಕ್ಕಿ ಕೊಡುವ ಯೋಗ್ಯತೆ ಇಲ್ವಾ ಎಂದು ಪ್ರಶ್ನಿಸಿದರು.
ಕೇಂದ್ರ ಕೊಡುವ ಭಾರತ್ ಬ್ರಾಂಡ್ ಅಕ್ಕಿ 28 ರೂ.ಗೆ ಮಾರಾಟ ಮಾಡುತ್ತಿದೆ. ಕಾಳಸಂತೆ ಮತ್ತು ಮಧ್ಯವರ್ತಿಗಳ ನಿಯಂತ್ರಣಕ್ಕೆ ಭಾರತ್ ಬ್ರಾಂಡ್ ಬಂದಿದೆ. ಕಾಂಗ್ರೆಸ್ ಕಾಳ ಸಂತೆ ಕೋರರ ಪರ ಲಾಭಿ ಮಾಡುತ್ತಿದೆ. ಇಲ್ಲಿಯವರೆಗೂ ಒಬ್ಬ ಗ್ರಾಹಕ ಕಳಪೆ ಅಂದಿಲ್ಲ. ದೇಶದ ಎಲ್ಲಾ ಕಡೆ ಮಾರಾಟವಾಗುತ್ತಿದ್ದು ಎಲ್ಲೂ ದೂರು ಬಂದಿಲ್ಲ. ಹಾಗಾದರೇ ಮುನಿಯಪ್ಪ ಅವರ ಕಿವಿಗೆ ಹೇಗೆ ಬಂತು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಹೊಸಬರಿಗೆ ಟಿಕೆಟ್ ನೀಡಿ… ಚಿಕ್ಕಮಗಳೂರು-ಉಡುಪಿ ಬಿಜೆಪಿ ಕಾರ್ಯಕರ್ತರಿಂದ ಕೇಂದ್ರಕ್ಕೆ ಪತ್ರ