Advertisement
ಚೆನ್ನೈ ತಂಡದ ಅತ್ಯಂತ ಬಿಗಿಯಾದ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ 8 ವಿಕೆಟಿಗೆ ಕೇವಲ 106 ಮಾಡಿತು. ಇದು ಪ್ರಸಕ್ತ ಐಪಿಎಲ್‌ನಲ್ಲಿ ದಾಖಲಾದ ತಂಡವೊಂದರ ಕನಿಷ್ಠ ಮೊತ್ತ. ಇದನ್ನು ಸುಲಭದಲ್ಲಿ ಬೆನ್ನಟ್ಟಿದ ಧೋನಿ ಪಡೆ 15.4 ಓವರ್‌ಗಳಲ್ಲಿ 4 ವಿಕೆಟಿಗೆ 107 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಪಂಜಾಬ್ ಪವರ್ ಪ್ಲೇ ಮುಗಿಯುವಷ್ಟರಲ್ಲಿ 4 ಬಿಗ್ ವಿಕೆಟ್ ಕಳೆದುಕೊಂಡು ಭಾರೀ ಸಂಕಟಕ್ಕೆ ಸಿಲುಕಿತು. ಈ ಅವಧಿಯಲ್ಲಿ ಘಾತಕವಾಗಿ ಪರಿಣಮಿಸಿದ ಮಧ್ಯಮ ವೇಗಿ ದೀಪಕ್ ಚಹರ್ ಚೆನ್ನೈಗೆ ಕನಸಿನ ಆರಂಭ ಒದಗಿಸಿದರು.
Related Articles
Advertisement
ಮೂರನೇ ಓವರಿನಲ್ಲಿ ರವೀಂದ್ರ ಜಡೇಜ ಅವರ ಡೈರೆಕ್ಟ್ ಹಿಟ್ ನಾಯಕ ಕೆ.ಎಲ್. ರಾಹುಲ್ ಆಟವನ್ನು 5 ರನ್ನಿಗೆ ಕೊನೆಗೊಳಿಸಿತು. 5ನೇ ಓವರ್‌ನಲ್ಲಿ ಚಹರ್ ಅವಳಿ ಬೇಟೆಯಾಡಿ ಪಂಜಾಬ್‌ಗ ಬಲವಾದ ಪಂಚ್ ಕೊಟ್ಟರು. ವಿಂಡೀಸ್ ಕ್ರಿಕೆಟಿಗರಿಬ್ಬರೂ ಚಹರ್ ಮೋಡಿಗೆ ಸಿಲುಕಿದ್ದು ವಿಶೇಷ. ಎರಡನೇ ಎಸೆತದಲ್ಲಿ ಕ್ರಿಸ್ ಗೇಲ್ (10) ಜಡೇಜಾಗೆ ಕ್ಯಾಚಿತ್ತು ನಿರ್ಗಮಿಸಿದರೆ, 4ನೇ ಎಸೆತದಲ್ಲಿ ನಿಕೋಲಸ್ ಪೂರಣ್ ರನ್ ಗಳಿಸುವ ಮೊದಲೇ ಪೆವಿಲಿಯನ್ ಹಾದಿ ಹಿಡಿದರು. ಪೂರಣ್ ರಾಜಸ್ಥಾನ್ ಎದುರಿನ ಹಿಂದಿನ ಪಂದ್ಯದಲ್ಲೂ ಖಾತೆ ತೆರೆದಿರಲಿಲ್ಲ. ಅಲ್ಲಿ ಗೋಲ್ಡನ್ ಡಕ್ ಅವಮಾನಕ್ಕೆ ಸಿಲುಕಿದರೆ, ಇಲ್ಲಿ 2ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಸತತ 4ನೇ ಓವರ್ ದಾಳಿಗಿಳಿದ ದೀಪಕ್ ಚಹರ್ ಇಲ್ಲಿಯೂ ಭರ್ಜರಿ ಯಶಸ್ಸು ಸಾಧಿಸಿದರು.ಪಂಜಾಬ್ ಕಿಂಗ್ಸ್
ಕೆ.ಎಲ್ ರಾಹುಲ್ ರನೌಟ್ 5
ಮಾಯಾಂಕ್ ಅಗರ್ವಾಲ್ ಬಿ ಚಹರ್ 0
ಕ್ರಿಸ್ ಗೇಲ್ ಸಿ ಜಡೇಜ ಬಿ ಚಹರ್ 10
ದೀಪಕ್ ಹೂಡಾ ಸಿ ಡು ಪ್ಲೆಸಿಸ್ ಬಿ ಚಹರ್ 10
ಪೂರಣ್ ಸಿ ಠಾಕೂರ್ ಬಿ ಚಹರ್ 0
ಶಾರೂಖ್ ಖಾನ್ ಸಿ ಜಡೇಜ ಬಿ ಕರನ್ 47
ಜೇ ರಿಚರ್ಡ್‌ಸನ್ ಬಿ ಅಲಿ 15
ಎಂ. ಅಶ್ವಿನ್ ಸಿ ಡು ಪ್ಲೆಸಿಸ್ ಬಿ ಬ್ರಾವೊ 6
ಮೊಹಮ್ಮದ್ ಶಮಿ ಔಟಾಗದೆ 9
ರೀಲೆ ಮೆರೆಡಿತ್ ಔಟಾಗದೆ 0
ಇತರ 4
ಒಟ್ಟು (8 ವಿಕೆಟಿಗೆ) 106
ವಿಕೆಟ್ ಪತನ:1-1, 2-15, 3-19, 4-19, 5-26, 6-57, 7-87, 8-101.
ಬೌಲಿಂಗ್; ದೀಪಕ್ ಚಹರ್ 4-1-13-4
ಸ್ಯಾಮ್ ಕರನ್ 3-0-12-1
ಶಾದೂìಲ್ ಠಾಕೂರ್ 4-0-35-0
ರವೀಂದ್ರ ಜಡೇಜ 4-0-19-0
ಮೊಯಿನ್ ಅಲಿ 3-0-17-1
ಡ್ವೇನ್ ಬ್ರಾವೊ 2-0-10-1 ಚೆನ್ನೈ ಸೂಪರ್ ಕಿಂಗ್ಸ್
ಗಾಯಕ್ವಾಡ್ ಸಿ ಹೂಡಾ ಬಿ ಆರ್ಷದೀಪ್ 5
ಫಾ ಡು ಪ್ಲೆಸಿಸ್ ಔಟಾಗದೆ 36
ಮೊಯಿನ್ ಅಲಿ ಸಿ ಶಾರೂಖ್ ಬಿ ಅಶ್ವಿನ್ 46
ಸುರೇಶ್ ರೈನಾ ಸಿ ರಾಹುಲ್ ಬಿ ಶಮಿ 8
ಅಂಬಾಟಿ ರಾಯುಡು ಸಿ ಪೂರಣ್ ಬಿ ಶಮಿ 0
ಸ್ಯಾಮ್ ಕರನ್ ಔಟಾಗದೆ 5
ಇತರ 7
ಒಟ್ಟು (15.4 ಓವರ್‌ಗಳಲ್ಲಿ 4 ವಿಕೆಟಿಗೆ) 107
ವಿಕೆಟ್ ಪತನ:1-24, 2-90, 3-99, 4-99.
ಬೌಲಿಂಗ್;
ಮೊಹಮ್ಮದ್ ಶಮಿ 4-0-21-2
ಜೇ ರಿಚರ್ಡ್‌ಸನ್ 3-0-21-0
ಆರ್ಷದೀಪ್ ಸಿಂಗ್ 2-0-7-1
ರೀಲೆ ಮೆರೆಡಿತ್ 3.4-0-21-0
ಮುರುಗನ್ ಅಶ್ವಿನ್ 3-0-32-1