Advertisement
ಈ ಪಂದ್ಯದಲ್ಲಿ ಹಲವು ದಾಖಲೆ ಬರೆಯಲ್ಪಟ್ಟವು. ಅವುಗಳ ಮಾಹಿತಿ ಇಲ್ಲಿದೆ.
Related Articles
Advertisement
ಆರ್‌ಸಿಬಿ ಈ ಐಪಿಎಲ್‌ನಲ್ಲಿ 150ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದೆ. ಟಿ20 ಕ್ರಿಕೆಟ್‌ನ ಒಂದು ಆವೃತ್ತಿಯಲ್ಲಿ ತಂಡವೊಂದು ಬಾರಿಸಿದ ಅತ್ಯಧಿಕ ಸಿಕ್ಸರ್ ಇದು. 146 ಸಿಕ್ಸರ್ ಬಾರಿಸಿರುವ ಹೈದರಾಬಾದ್ ದ್ವಿತೀಯ ಸ್ಥಾನದಲ್ಲಿದೆ.
ಇದೇ ವೇಳೆ ವಿರಾಟ್ ಕೊಹ್ಲಿ ಅವರು 700 ಐಪಿಎಲ್ ಬೌಂಡರಿ ಬಾರಿಸಿದರು. ಶಿಖರ್ ಧವನ್ 768 ಐಪಿಎಲ್ ಬೌಂಡರಿ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈಗ 702 ಬೌಂಡರಿಗಳು ಮತ್ತು 271 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.
ಐಪಿಎಲ್ ನಲ್ಲಿ ಗೇಲ್ (357), ರೋಹಿತ್ ಶರ್ಮಾ (280), ಮತ್ತು ಎಬಿ ಡಿವಿಲಿಯರ್ಸ್ (251) ನಂತರ 250 ಐಪಿಎಲ್ ಸಿಕ್ಸರ್‌ಗಳನ್ನು ಪೂರೈಸಿದ ಆಟಗಾರ ಕೊಹ್ಲಿ.
ಮೇ 18ರಂದು ಮತ್ತೆ ಗೆದ್ದಆರ್‌ಸಿಬಿ
ಮೇ 18ರಂದು ಆರ್‌ಸಿಬಿ ತಾನಾಡಿದ ಪಂದ್ಯಗಳನ್ನು ಸೋತೇ ಇಲ್ಲ. ಈ ದಿನಾಂಕದಂದು ಅದರ ಸತತ ಗೆಲುವಿನ ಓಟ 5ಕ್ಕೇರಿದೆ. ಅಚ್ಚರಿಯೆಂದರೆ ಚೆನ್ನೈ ವಿರುದ್ಧವೇ 3ನೇ ಪಂದ್ಯ ಗೆದ್ದಿದೆ. ಇನ್ನೆರಡು ಗೆಲುವು ಪಂಜಾಬ್, ಹೈದ್ರಾಬಾದ್ ವಿರುದ್ಧ ದಾಖಲಾಗಿದೆ
ತುಳುಕಾಡಿದ ಚಿನ್ನಸ್ವಾಮಿ: 29680 ಪ್ರೇಕ್ಷಕರು
ಚಿನ್ನಸ್ವಾಮಿಯಲ್ಲಿ ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು- ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ನಿರ್ಣಾಯಕ ಪಂದ್ಯ ವೀಕ್ಷಿಸಲು ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಶನಿವಾರ ಒಟ್ಟು ಮೈದಾನದ ಬಹುತೇಕ ಆಸನಗಳು ತುಂಬಿಕೊಂಡಿದ್ದವು. ಹಾಜರಿದ್ದ ಒಟ್ಟು ಪ್ರೇಕ್ಷಕರ ಸಂಖ್ಯೆ 29680!