Advertisement
ಶುಕ್ರವಾರದ ಶಾರ್ಜಾ ಮುಖಾಮುಖೀಯಲ್ಲಿ ವಿರಾಟ್ ಕೊಹ್ಲಿ-ದೇವದತ್ತ ಪಡಿಕ್ಕಲ್ ಅವರ ಅಬ್ಬರದ ಆಟ ಹಾಗೂ ಶತಕದ ಜತೆಯಾಟದ ಹೊರತಾಗಿಯೂ ಆರ್‌ಸಿಬಿ 6 ವಿಕೆಟಿಗೆ 156 ರನ್ನುಗಳ ಸಾಮಾನ್ಯ ಮೊತ್ತವನ್ನಷ್ಟೇ ಗಳಿಸಿತು. ಜವಾಬಿತ್ತ ಚೆನ್ನೈ18.1 ಓವರ್‌ಗಳಲ್ಲಿ 4 ವಿಕೆಟಿಗೆ 157 ರನ್ ಬಾರಿಸಿತು.
Related Articles
Advertisement
ಇದೇ ವೇಳೆ ಕೊಹ್ಲಿ ಚೆನ್ನೈ ವಿರುದ್ಧ 934 ರನ್ ಪೇರಿಸಿ ನೂತನ ದಾಖಲೆಯನ್ನೂ ಸ್ಥಾಪಿಸಿದರು. ಕೊಹ್ಲಿ ಐಪಿಎಲ್ ತಂಡವೊಂದರ ವಿರುದ್ಧ ಬಾರಿಸಿದ ಅತ್ಯಧಿಕ ರನ್ ಇದಾಗಿದೆ. ಡೆಲ್ಲಿ ವಿರುದ್ಧ ಕೊಹ್ಲಿ 933 ರನ್ ಹೊಡೆದಿದ್ದಾರೆ.
ಪವರ್ ಪ್ಲೇ ಬಳಿಕ ರವೀಂದ್ರ ಜಡೇಜ ಬೌಲಿಂಗ್ ದಾಳಿಗಿಳಿದರು. ಆದರೆ ಆರ್‌ಸಿಬಿ ಆರಂಭಿಕರನ್ನು ನಿಯಂತ್ರಿಸಲು ಅವರಿಂದ ಸಾಧ್ಯವಾಗಲಿಲ್ಲ. 10 ಓವರ್ ಮುಕ್ತಾಯಕ್ಕೆ ಸ್ಕೋರ್ ನೋಲಾಸ್ 90ಕ್ಕೆ ಏರಿತು.
ಶತಕದ ಜತೆಯಾಟ:
70 ಎಸೆತಗಳಲ್ಲಿ ಕೊಹ್ಲಿ-ಪಡಿಕ್ಕಲ್ ಶತಕದ ಜತೆಯಾಟ ಪೂರೈಸಿದರು. ಇದು ಕೊಹ್ಲಿ-ಪಡಿಕ್ಕಲ್ ಜೋಡಿ ದಾಖಲಿಸಿದ 2ನೇ ಸೆಂಚುರಿ ಪಾಟ್ನìರ್‌ಶಿಪ್. ಪ್ರಸಕ್ತ ಋತುವಿನ ರಾಜಸ್ಥಾನ್ ಎದುರಿನ ಪಂದ್ಯದಲ್ಲಿ ಇವರಿಬ್ಬರು ಸೇರಿ ಚೇಸಿಂಗ್ ವೇಳೆ ಅಜೇಯ 181 ರನ್ ಪೇರಿಸಿ 10 ವಿಕೆಟ್ ಗೆಲುವು ತಂದಿತ್ತಿದ್ದರು.
ಪಡಿಕ್ಕಲ್ ಮತ್ತು ಕೊಹ್ಲಿ ಬೆನ್ನು ಬೆನ್ನಿಗೆ ಅರ್ಧ ಶತಕ ಪೂರೈಸಿದರು. ಕೂಡಲೇ ಆರ್‌ಸಿಬಿ ಕಪ್ತಾನನ ವಿಕೆಟ್ ಕಿತ್ತ ಬ್ರಾವೊ ಚೆನ್ನೈಗೆ ಮೊದಲ ಯಶಸ್ಸು ತಂದಿತ್ತರು. ಕೊಹ್ಲಿ ಕೊಡುಗೆ 41 ಎಸೆತಗಳಿಂದ 53 ರನ್ (6 ಬೌಂಡರಿ, 1 ಸಿಕ್ಸರ್). ಪಡಿಕ್ಕಲ್ ಆಕ್ರಮಣಕಾರಿ ಆಟವನ್ನು ಮುಂದುವರಿಸಿ 50 ಎಸೆತಗಳಿಂದ 70 ರನ್ ಬಾರಿಸಿದರು (5 ಫೋರ್, 3 ಸಿಕ್ಸರ್). ಆದರೆ ಶಾದೂìಲ್ ಠಾಕೂರ್ ಸತತ ಎಸೆತಗಳಲ್ಲಿ ಎಬಿಡಿ (12) ಮತ್ತು ಪಡಿಕ್ಕಲ್ ವಿಕೆಟ್ ಕಿತ್ತು ದೊಡ್ಡ ಬೇಟೆಯಾಡಿದರು. ಡೆತ್ ಓವರ್‌ಗಳಲ್ಲಿ 5 ವಿಕೆಟ್ ಉರುಳಿಸಿದ ಚೆನ್ನೈ, ಕೇವಲ 38 ರನ್ ನೀಡಿ ಆರ್‌ಸಿಬಿಗೆ ದೊಡ್ಡ ಬ್ರೇಕ್ ಹಾಕಿತು.
ಸಿಂಗಾಪುರದ ಟಿಮ್ ಡೇವಿಡ್ ಐಪಿಎಲ್ ಪದಾರ್ಪಣೆ:
ಆರ್‌ಸಿಬಿ ಈ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿಕೊಂಡಿತು. ವೇಗಿ ಕೈಲ್ ಜಾಮೀಸನ್ ಬದಲು ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಟಿಮ್ ಡೇವಿಡ್, ಸಚಿನ್ ಬೇಬಿ ಬದಲು ನವದೀಪ್ ಸೈನಿ ಅವರನ್ನು ಸೇರಿಸಿಕೊಂಡಿತು. ಡೇವಿಡ್ ಸಿಂಗಾಪುರದ ಕ್ರಿಕೆಟಿಗ ನೆಂಬುದು ವಿಶೇಷ. ಇದರೊಂದಿಗೆ ಸಿಂಗಾಪುರದ ಆಟಗಾರನೋರ್ವನಿಗೆ ಮೊದಲ ಸಲ ಐಪಿಎಲ್ ಬಾಗಿಲು ತೆರೆಯಿತು.ಇದಕ್ಕೂ ಮುನ್ನ ಟಿಮ್ ಡೇವಿಡ್ 11 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಬಿಗ್ ಬಾಶ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ಥಾನ್ ಸೂಪರ್ ಲೀಗ್‌ನಲ್ಲೂ ಆಡಿರುವುದು ಇವರ ಹೆಗ್ಗಳಿಕೆ.