ಮುಂಬೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯ ಐಪಿಎಲ್ ಕೂಟದಲ್ಲಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಆಡಿದ ಆರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದುಕೊಂಡಿರುವ ರವೀಂದ್ರ ಜಡೇಜಾ ಬಳಗ ಇಂದು (ಎ.21) ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವಾಡುತ್ತಿದೆ.
ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನವೇ ಸಿಎಸ್ ಕೆ ಆಟಗಾರ ಡೆವೋನ್ ಕಾನ್ವೆ ತಂಡ ತೊರೆದಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಕಾನ್ವೇ ವಿವಾಹ.
ನ್ಯೂಜಿಲ್ಯಾಂಡ್ ಆಟಗಾರ ಡೆವೋನ್ ಕಾನ್ವೆ ಅವರ ವಿವಾಹ ಕಾರ್ಯಕ್ರಮ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಹೀಗಾಗಿ ಕಾನ್ವೆ ತಂಡದ ಬಯೋ ಬಬಲ್ ತೊರೆದಿದ್ದಾರೆ. ಇನ್ನು ಕನಿಷ್ಠ ಒಂದು ವಾರಗಳ ಕಾಲ ಸಿಎಸ್ ಕೆ ತಂಡಕ್ಕೆ ಕಾನ್ವೇ ಸೇವೆ ಸಿಗುವುದಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:‘ಓ ಮೈ ಲವ್’ ಹಾಡಿಗೆ ಮೆಚ್ಚುಗೆ; ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್
ಕ್ರಿಕ್ ಇನ್ಫೋ ವರದಿಯ ಪ್ರಕಾರ ಎಪ್ರಿಲ್ 24ರಂದು ಕಾನ್ವೆ ಮರಳಿ ಸಿಎಸ್ ಕೆ ಕ್ಯಾಂಪ್ ಸೇರಲಿದ್ದಾರೆ. ಆದರೆ ಕೋವಿಡ್ ನಿಯಾಮವಳಿಗಳ ಪ್ರಕಾರ ಅವರು ಮೂರು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ.
ಸಿಎಸ್ ಕೆ ತಂಡದ ಸದಸ್ಯರು ಡೆವೋನ್ ಕಾನ್ವೆ ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಮೆಗಾ ಹರಾಜಿನಲ್ಲಿ ಕಾನ್ವೆ ಅವರನ್ನು ಸಿಎಸ್ ಕೆ ತಂಡವು ಒಂದು ಕೋಟಿ ರೂ ಬೆಲೆಗೆ ಖರೀದಿ ಮಾಡಿತ್ತು. ಸಿಎಸ್ ಕೆ ಪರ ಕಾನ್ವೆ ಒಂದು ಪಂದ್ಯ ಮಾತ್ರ ಆಡಿದ್ದಾರೆ.