Advertisement

CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!

11:17 PM May 07, 2024 | Team Udayavani |

ನವದೆಹಲಿ: ಇನ್ನು ಮುಂದೆ ಪ್ರತಿ ಸೋಮವಾರ ಮಡಿಕೆಗಳಿರುವ, ಇಸ್ತ್ರಿ ಮಾಡದ ವಸ್ತ್ರ ಧರಿಸಿಕೊಂಡು ಕಚೇರಿಗೆ ಬನ್ನಿ ಎಂದು ತನ್ನೆಲ್ಲ ಸಿಬ್ಬಂದಿಗೆ ಸಂಶೋಧನಾ ಸಂಸ್ಥೆ ಸಿಎಸ್‌ಐಆರ್‌ (ಕೌನ್ಸಿಲ್‌ ಆಫ್ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌) ಹೇಳಿದೆ.

Advertisement

ಅಚ್ಚರಿಯಾದರೂ ಇದು ಸತ್ಯ. ಜಾಗತಿಕ ಪ್ರತಿಕೂಲ ಹವಾಮಾನದ ವಿರುದ್ಧ ಹೋರಾಟ ಮತ್ತು ವಿದ್ಯುತ್‌ ಉಳಿತಾಯದ ಉದ್ದೇಶದಿಂದ ಸಂಸ್ಥೆ ವಾಹ್‌ (ರಿಂಕಲ್ಸ್‌ ಅಚ್ಚೇ ಹೈ) ಎಂಬ ಅಭಿಯಾನ ಆರಂಭಿಸಿದೆ. ಅದರಂತೆ, ಇಸ್ತ್ರಿ ಮಾಡದ ವಸ್ತ್ರವನ್ನು ವಾರಕ್ಕೊಮ್ಮೆ ಧರಿಸಿ, ವಿದ್ಯುತ್‌ ಉಳಿಸಲು ಸಾಂಕೇತಿಕ ಪ್ರೇರಣೆ ನೀಡಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next