Advertisement
ನವರತ್ನಗಳು ಎಂದರೆ ವಜ್ರ, ನೀಲ, ಮಾಣಿಕ್ಯ, ಪುಷ್ಯರಾಗ, ಮುತ್ತು, ಹವಳ, ಮರಕತ, ವೈಢೂರ್ಯ, ಗೋಮೇಧಕ. ಇವು ಹಲವು ರೀತಿಯ ರಕ್ಷೆಯನ್ನು ಯುಕ್ತವಾಗಿ ಧರಿಸಿದಾಗ ನೀಡುತ್ತವೆ. ಈ ಹರಳುಗಳನ್ನು ಅನ್ಯವಾದವುಗಳು ನವರತ್ನಗಳೊಳಗೆ ಸಮಾವೇಶವಾಗುವುದಿಲ್ಲ. ಅನ್ಯ ಹರಳುಗಳು ನಮ್ಮ ಜೋತಿಷ್ಯ ಶಾಸ್ತ್ರ ನಿರೂಪಿಸಿದ ವಿಚಾರದಲ್ಲಿ ನಿರ್ದೇಶನಗೊಂಡ ಪರಿಣಾಮಗಳನ್ನು ಕೊಡಲಾರವು. ಯಾವ ಯಾವುದೋ ನಿರ್ಣಯಗಳಿಂದ, ಯಾರ ಹತ್ತಿರವೋ ಸಲಹೆಗಳನ್ನು ಪಡೆದ ಕಾರಣವಾಗಿ ಧರಿಸುತ್ತಾರೆ ಇದು ಸೂಕ್ತವಲ್ಲ.
ಕೊಡಲಾರರು. ನಮ್ಮ ಸೂಕ್ತಭಾವದ ವಿಶ್ಲೇ‚ಷಣೆಗಳು ಲಗ್ನಭಾವದ ಅಧಿಪತಿಯ ಬಲವನ್ನು ಪರಿಗ್ರಹಿಸಿ
ಸುಖ, ಭಾಗ್ಯ, ಲಾಭ, ಆಪತ್ತು, ಸಂಧಿ ಹಾಗೂ ಇತರ ಒಳಿತಿಗೆ ಸಂಬಂಧವಾಗಿ ಅವನು ಒದಗುವ ರೀತಿ
ಗ್ರಹಿಸಿ ಯಾವ ಹರಳು ಎಷ್ಟು ಕ್ಯಾರಟ್ ಎಂಬುದನ್ನು ತಿಳಿದು ಅನಿವಾರ್ಯತೆ ಇರುವ ರೀತಿಯಲ್ಲಿ ಸೂಕ್ತ
ಲೋಹದಲ್ಲಿ, ಸೂಕ್ತ ಸಮಯದಲ್ಲಿ ಧಾರಣ ಮಾಡಬೇಕು. ಇನ್ನು ಪ್ರತಿದಿನವೂ ಮಾಡಬೇಕಾದ ಕಿಂಚತ್
ಅನುಷ್ಠಾನಗಳನ್ನು ಮುಖ್ಯವಾಗಿಸಿಕೊಳ್ಳಬೇಕು. ಇವನ್ನೆಲ್ಲಾ ಬಿಟ್ಟು ರತ್ನಗಳನ್ನು ಧರಿಸುವುದು ನಿರೀಕ್ಷಿ$ತ
ಪರಿಣಾಮ ಒದಗಿಸದು. ಒಳ್ಳೆಯ ಪರಿಣಾಮ ಕೊಡುವ ಹರಳಾದರೂ ಚಂದ್ರ ಹಾಗೂ ಬುಧರ ವಿಷಮ
ಸ್ಥಿತಿ ಕಾರಣದಿಂದ ಉದ್ರೇಕ ಚಡಪಡಿಕೆಗೊಳಗಾಗುವ ಶಿಷ್ಠ ಸಾಲಿನ ಜನರು ಈ ರತ್ನಗಳನ್ನು ತೋರಿಸಿ ತೆಗೆದ ನೀರಲ್ಲಿ ಸ್ನಾನ ಪೂರೈಸಿ ದೈನಂದಿನ ದೈವಾರಾಧನೆಯನ್ನು ಪೂರೈಸುವುದು ಸೂಕ್ತ. ಚಂದ್ರ, ಬುಧರ ವಿಷಮ ಸ್ಥಿತ ಕಾರಣ
Related Articles
Advertisement
ಅನವಶ್ಯಕ ಹರಳುಗಳುಏಕಾಏಕಿ ನವರತ್ನಗಳನ್ನು ಧರಿಸುವುದು ಕಾರಣವಿರದೆ ಮನಸ್ಸಿಗೆ ಕಂಡ ಹಿತವೆನಿಸಿದ ಕಾರಣದಿಂದ
ಧರಿಸಲೇ ಬಾರದ ಹರಳುಗಳನ್ನು ಧರಿಸುವುದು ಸೂಕ್ತವಲ್ಲ. ಉದಾಹರಣೆಗೆ ಶನೈಶ್ಚರನ ಉತ್ತಮ
ಪ್ರಭಾವಗಳಿಂದ ಸಂಭ್ರಮಿಸಲ್ಪಡಬೇಕಾದ ವ್ಯಕ್ತಿ ಹವಳ ಧರಿಸಿದರೆ ಪರಿಣಾಮ ಏರುಪೇರಾಗಿ ಲಾಭಗಳ
ಬಗೆಗಿನ ದಾರಿ ಸ್ಥಗಿತಗೊಳ್ಳುತ್ತದೆ. ಶುಭಕ್ಕೆ ಧಕ್ಕೆ ಬರುತ್ತದೆ. ನವರತ್ನ ಧರಿಸಿ ಒದ್ದಾಡುವ ಮಂದಿ ಇದ್ದಾರೆ.
ಜನಪ್ರಿಯ ನಟಿಯೊಬ್ಬಳು ಕಾರಣವಿರದೆ ನವರತ್ನ ಧರಿಸಿ ಯಶಸ್ಸಿನ ಹಂತದಲ್ಲಿ ಹಿನ್ನಡೆ ಅನುಭವಿಸಬೇಕಾಗಿ ಬಂತು. ಇತ್ತೀಚೆಗೆ ತನ್ನ ವೈಫಲ್ಯದ ಕುರಿತಾಗಿ ಸೂಕ್ತವಾದ ತಿಳುವಳಿಕೆ ದೊರೆತ ಮೇಲೆ ಅಭೂತಪೂರ್ವ ಹಿಟ್‌ಗಳನ್ನು ಕೊಡಲು ಸಾಧ್ಯವಾಯಿತು. ಆ ಜನಪ್ರಿಯ ರಾಜಕಾರಣಿಯೊಬ್ಬರು ಅವಶ್ಯಕತೆಗೂ ಮುನ್ನವೇ ವೈಢೂರ್ಯ ಧರಿಸಿ ಕಾರಣವೇ ಇರದ ಸಮಸ್ಯೆಗೆ ಸಿಲುಕಿ ರಾಜೀನಾಮೆ ನೀಡಿದರು. ಅನಿವಾರ್ಯತೆಯ ರಾಹುಕೇತುಗಳ ವಿಚಾರದಲ್ಲಿ ಯಾವಾಗ, ಹೇಗೆ, ಎಷ್ಟು ಕಾಲ ಎಂಬುದನ್ನು ಗ್ರಹಿಸಿಕೊಂಡಾದ ಮೇಲೆಯೇ ಅವುಗಳಿಗೆ ಸೂಕ್ತವಾದ ಗೋಮೇಧಕವನ್ನೋ, ವೈಢೂರ್ಯವನ್ನೋ ಧರಿಸಬೇಕು. ಇಲ್ಲದಿದ್ದರೆ ಅನಾವಶ್ಯಕವಾದ ಕಾಲದಲ್ಲಿ ಕಿರಿಕಿರಿ ತಂದು ತೊಂದರೆಗೆ ಗುರಿ ಮಾಡುತ್ತದೆ. ವ್ಯಕ್ತಿತ್ವದ ಆಧಾರದ ಮೇಲೆ ನಿಗಾ ಇರಿಸಿ ಹರಳಿನ ಆಯ್ಕೆ ಹುಟ್ಟುಗುಣ ಘಟ್ಟ ಹತ್ತಿದರೂ ಹೋಗದು ಎಂಬ ಮಾತಿದೆ. ಹಾಗೆಯೇ ನಮ್ಮ ವ್ಯಕ್ತಿತ್ವದ ಆಳ, ಅಗಲ,
ಸೂಕ್ಷ್ಮತೆ ಹಾಗೂ ಸಾರ್ಥಕತೆಗಳನ್ನು ನಿಯಂತ್ರಿಸುವ ಗ್ರಹದ ಆಧಾರದ ಮೇಲೆ ಯಾವ ಹರಳು ಸೂಕ್ತ
ಎಂಬುದನ್ನು ನಿರ್ಧರಿಸಬೇಕು. ನಿರಂತರವಾದ ಧ್ಯಾನ, ತಪಸ್ಸು, ಯೋಗ ಸಿದ್ಧಿ ಆರಾಧನೆಗಳ ಮೂಲಕ
ಪರಿವ್ರಾಜಕರೋ, ಅವಧೂತರುಗಳೊ ಮಠಾಧಿಪತಿಗಳ್ಳೋ ನವರತ್ನಗಳಾದ ವಜ್ರ ವೈಢೂರ್ಯಗಳ
ಹರಳುಗಳನ್ನೆಲ್ಲಾ ಧರಿಸಬಹುದು. ಸಾಮಾನ್ಯರಿಗೆ ನಿರಂತರವಾದ ಅನುಷ್ಠಾನಗಳನ್ನು ರೂಢಿಸಿಕೊಳ್ಳುವುದು ವಸ್ತುಶಃ ದುಃಸಾಧ್ಯ. ಇನ್ನು ಜನನದ ಕಾಲ ಹಾಗೂ ಜನ್ಮ ಕುಂಡಲಿಯನ್ನು ಅನ್ವಯಿಸಿ ಶುಭಪ್ರದವಾದ ರತ್ನವನ್ನು ಧರಿಸುವುದರಿಂದ ವ್ಯಕ್ತಿತ್ವದಲ್ಲಿನ ವಿಕಸನ ಆರೋಗ್ಯದಲ್ಲಿರುವ ದಾಡ್ಯìತೆ ವರ್ಚಸ್ಸಿಗೊಂದು ಶೋಭೆ ಇತ್ಯಾದಿ ಇತ್ಯಾದಿ ಒದಗಿಬರಲು ಸಾಧ್ಯ. ಇದರಿಂದಾಗಿ ಕೆಲವುದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುವ ವಿಚಾರದಲ್ಲಿ ಹರಳು ಸಹಕರಿಸುತ್ತದೆ. ಕೀಳರಿಮೆಯಿಂದ ಬಳಲುವವರಿಗೆ ಇದು ಸಹಾಯಕ. ಹರಳುಗಳು ರಾಸಾಯನಿಕ ಗುಣಧರ್ಮ ವಿಶಿಷ್ಟವಾದ ಧಾತು ಸಂಯುಕ್ತಗಳ ಫಲವಾದ ಸಾಂದ್ರತೆಯಿಂದಾಗಿ ಪಂಚಭೂತಾತ್ಮಕವಾದ ಶರೀರಕ್ಕೆ ಶರೀರದ ನಿಯಂತ್ರಣದ ಗ್ರಹದ ಕಾರಣ ಒಗ್ಗೂಡಿಸಿಕೊಂಡು ಪರಿಣಾಮ ನೀಡುತ್ತದೆ. ಹರಳುಗಳ ಧಾರಣೆ ಮತ್ತು ಅನುಷ್ಠಾನ
ಯುಕ್ತವಾದ ಮರಗಳ ಅಡಿಯಲ್ಲಿ ಧ್ಯಾನಾಸಕ್ತರಾಗಿ ದೇವಾಲಯದಲ್ಲಿ ಧ್ಯಾನಾಸಕ್ತರಾಗುವುದು ಇಲ್ಲಾ ಮನೆಯ ದೈವ ಪೀಠದ ಎದುರೇ ಧ್ಯಾನ ಮಾಡುವುದು ಸೂಕ್ತ. ನಮ್ಮ ಸಂಸ್ಕೃತಿಯಲ್ಲಿ ಅರಳೀ ಮರ, ಬೇವಿನ ಮರಗಳು, ವಟವೃಕ್ಷ ಇತ್ಯಾದಿಗಳು ಸರ್ವಶ್ರೇಷ್ಠ. ಯೋಗಾಭ್ಯಾಸಗಳಿಂದ ಅರಿಷ್ಟಗಳನ್ನು ತರುವ ಆಹಾರಕ್ಕೆ ಕಾರಣವಾದ ತಾಪತ್ರಯಗಳು, ಹರಳಿನ ಕಾರಣದಿಂದ ನಡೆಸುವ ಅನುಷ್ಠಾನಗಳಿಂದಾಗಿ ಮಾಯವಾಗುತ್ತದೆ. ದೇವಸ್ಥಾನದಲ್ಲಿ ಧ್ಯಾನ, ಅನುಷ್ಠಾನಾದಿಗಳನ್ನು ಮಾಡುವುದಾದರೆ ಮೂಲಸ್ಥಾನದಲ್ಲಿ ಪರಿಶೋಭಿತವಾದ ಆಗಮ ಶಾಸ್ತ್ರದ ಆಧಾಯಗಳಿಂದ ಆಶ್ರಿತವಾದ ಅಷ್ಟಬಂಧ ಸಂಸ್ಥಾಪಿತ ದೇವಳಗಳಲ್ಲಿ ನಡೆಸಬೇಕು. ಮನೆಯಲ್ಲಿ ತುಳಸೀ ಗಿಡದ ಎದುರಿಗೂ ಅನುಷ್ಠಾನ ಯುಕ್ತವೇ ಆಗಿದೆ. ತುಳಸೀದಳ ಸೋಕಿದ ನೀರು ತೀರ್ಥಸೇವನೆಯಿಂದ ಹರಳುಗಳ ಪ್ರಭಾವದಲ್ಲಿ ಸಂವರ್ಧನೆ ಅಧಿಕವಾಗುತ್ತದೆ. ಅನುಷ್ಠಾನಗಳನ್ನು ನಿರ್ದಿಷ್ಟ ಲಯ ಹಾಗೂ ಏರಿಳಿತಗಳೊಂದಿಗೆ ಪಠಿಸುವುದರಿಂದಲೂ ಹರಳುಗಳ ಪ್ರಭಾವ ನಮ್ಮ ಪ್ರತಿ ಜೀವಕೋಶ¨ಮೇಲೆ ಸೂಕ್ತವಾಗಿ ಚಿಕಿತ್ಸಕ ಪ್ರಭಾವ ಹೊಮ್ಮಿಸಲು ಸರಳವಾಗುತ್ತದೆ. ರಕ್ತದೊತ್ತಡ, ಮಧುಮೇಹ, ಚರ್ಮವ್ಯಾಧಿಶ್ವಾಸಕೋಶ ಬಾಧೆ ಇತ್ಯಾದಿಗಳು ದೂರವಾಗಲು ನಿಶ್ಚಿತವಾದ ಸೂಕ್ಷ್ಮ ಸಂವೇದನೆ ನೀಡಲು ಕಾರಣವಾಗುತ್ತದೆ. ತ್ರಿಪುಂಢÅ, ಭಸ್ಮಧಾರಣ, ಗಂಧ ಚಂದನ ಕುಂಕುಮ ಅರಿಶಿಣ ಲೇಪಗಳು ಕೂಡಾ ಹರಳುಗಳ ಕ್ರಿಯಾಶೀಲತೆಯ ಜೊತೆಜೊತೆಗೇ ಎನ್ನುವುದು ಗಮನಾರ್ಹ. ಹರಳು ಇರುವ ಉಂಗುರವನ್ನು ಊಟದ ಸಂದರ್ಭದಲ್ಲಿ ಬಲಗೈಯಿಂದ ಎಡಗೈಗೆ ಹಸ್ತಾಂತರಿಸಿಕೊಳ್ಳುವುದು ಹೆಚ್ಚುಸೂಕ್ತ. ಅನುಷ್ಠಾನದ ಸಂದರ್ಭದಲ್ಲಿ ದೇವರೆದುರು ನೀಲಾಂಜನ ಹೊತ್ತಿಸಿದರೆ ಒಳಿತು. ಹರಳುಗಳನ್ನು ಯಾವ ಧಾತುವಿನಿಂದ ಪುಷ್ಟೀಕರಿಸಬೇಕು?
ಯಾವುದೋ ಹರಳನ್ನು, ಯಾವುದೋ ಲೋಹದಲ್ಲಿ ಕಟ್ಟಿಸಿ ಉಂಗುರ ಪದಕ ಮಾಡಿ ಧರಿಸಬಾರದು. ಬಂಗಾರ ಬೆಳ್ಳಿ ಪ್ಲಾಟಿನಂ, ತಾಮ್ರ, ಕಬ್ಬಿಣ/ಪಂಚಲೋಹದ ಮಿಶ್ರಣಗಳಲ್ಲೇ ಯಾವ ಹರಳಿಗೆ ಯಾವುದು ಎಂದು ಉಪಯೋಗಿಸಬೇಕು. ನೀಲವನ್ನು ಬೆಳ್ಳಿಯಲ್ಲಿ ಹಾಕುವುದೋ, ವೈಢೂರ್ಯವನ್ನು ಬಂಗಾರದಲ್ಲಿ ಕಟ್ಟಿಸುವುದೋ ಇತ್ಯಾದಿ. ತಪ್ಪು ಸರಿ ಯೋಚನೆಗಳಿರುತ್ತವೆ. ಹಾಕಬೇಕಾದ ಹರಳು ಯಾವ ಗ್ರಹಗಳಿಗೆ ಸಂಬಂಧಿಸಿವೆ ಎಂಬುದು ತಿಳಿದೇ ಲೋಹದ ಆಯ್ಕೆ ಆಗಬೇಕು. ಏನೋ ಒಂದನ್ನು ಆಯ್ಕೆ ಮಾಡಬಾರದು. ವಿಷಯ ಆಯ್ಕೆಗಿಂತ ಹರಳು ಧರಿಸದಿರುವುದೇ ಹೆಚ್ಚು ಪ್ರಯೋಜನಕಾರಿ. ಹಾಗೆಯೇ ರಾಶಿಯ ಮೇಲಿಂದ ಹರಳು ಧರಿಸುವ ದಾನ ಕೂಡಾ ವಿಧ್ಯುಕ್ತವಾದಲ್ಲಿ ರಾಶ್ಯಾಧಿಪತಿಯ ಜನನ ಸಂದರ್ಭದ ಕಾಲಗಣನೆಗೆ ಹೊಂದಿ ಹುಟ್ಟಿದ ವ್ಯಕ್ತಿಗೆ ಯಾವ ದಶಾ ಎಂದರಿತು ನಮ್ಮ ರಾಶಿಯ ಚಂದ್ರನ ಉಪಸ್ಥಿತಿ ಉಪಯೋಗಕ್ಕೆ ಬರುತ್ತದೆ. ಚಂದ್ರನು ಇರುವ ರಾಶಿ ನಮ್ಮ ಜನ್ಮ ರಾಶಿ. ಅಂದರೆ ಜನ್ಮರಾಶಿಯ ಅಧಿಪತಿಯನ್ನು ಲಕ್ಷಿಸಿಕೊಂಡು ಹರಳಿನ ನಿರ್ಧಾರ ಆಗಬಾರದು. ಅನ್ಯರಾಶಿಯ ಅಧಿಪತಿ ಒಬ್ಬ ವ್ಯಕ್ತಿಯ ಜಾತಕದಲ್ಲಿ ದುಷ್ಟನಾಗಿರುವ ಸಾಧ್ಯತೆ ಇರುತ್ತದೆ. ಅನಂತಶಾಸ್ತ್ರೀ