ನವದೆಹಲಿ: ಕ್ರಿಪ್ಟೋಕರೆನ್ಸಿಯಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ಗವರ್ನರ್ ಶಕ್ತಿಕಾಂತ್ ದಾಸ್ ಎಚ್ಚರಿಸಿದ್ದಾರೆ.
ದೇಶದಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಬೆನ್ನಲ್ಲೇ ಈ ಎಚ್ಚರಿಕೆ ಬಂದಿದೆ.
ಕ್ರಿಪ್ಟೋಕರೆನ್ಸಿಯು ಸ್ಥೂಲ ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆಯ ದೃಷ್ಟಿಕೋನದಿಂದ ಗಂಭೀರ ಕಾಳಜಿಯ ವಿಷಯವಾಗಿದೆ. ಅದರ ಮೇಲೆ ಹೂಡಿಕೆ ಮಾಡುವವರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ.
ಇದನ್ನೂ ಓದಿ:ಹೋಟೆಲ್ ರುವಾಂಡ : ಹಿಂಸೆಯ ಗಾಢತೆಯಲ್ಲೇ ಮಾನವೀಯತೆಯ ಬಣ್ಣ ಪ್ರದರ್ಶಿಸುವ ಸಿನಿಮಾ
ಅದಕ್ಕಾಗಿ ಹೂಡಿಕೆದಾರರ ಸಂಖ್ಯೆಯಲ್ಲೂ ಸುಳ್ಳು ವರದಿ ನೀಡಲಾಗುತ್ತಿದೆ. ಇದರ ವಿರುದ್ಧ ಕ್ರಮಕ್ಕಾಗಿ ನಾವು ಕೇಂದ್ರಕ್ಕೆ ಕೆಲವು ಸಲಹೆ ನೀಡಿದ್ದೇವೆ ಎಂದು ಶಕ್ತಿಕಾಂತ್ ಅವರು ತಿಳಿಸಿದ್ದಾರೆ.