Advertisement
610 ಕುಟುಂಬಗಳಿವೆ
ಇದ್ದಾರೆ. ಒಟ್ಟು ಗ್ರಾಮದಲ್ಲಿ 2,241 ಮಂದಿ ಮತದಾರರು ಪಾಲ್ತಾಡಿ ಗ್ರಾಮದಲ್ಲಿದ್ದಾರೆ. ದ.ಕ. ಸಂಸದ ನಳಿನ್ ಕುಮಾರ್
ಕಟೀಲು ಅವರ ಹುಟ್ಟೂರು ಪಾಲ್ತಾಡಿ ಗ್ರಾಮದ ಕುಂಜಾಡಿಯಾಗಿದೆ. ವಿವಿಧ ಸೌಕರ್ಯಗಳಿವೆ
ಪಾಲ್ತಾಡಿ, ಅಂಕತ್ತಡ್ಕ, ಮಂಜುನಾಥ ನಗರದಲ್ಲಿ ಸ.ಹಿ.ಪ್ರಾ. ಶಾಲೆ, ಚೆನ್ನಾವರದಲ್ಲಿ ಕಿ.ಪ್ರಾ. ಶಾಲೆ ಇದೆ. ಮಂಜುನಾಥ ನಗರದಲ್ಲಿ ಸರಕಾರಿ ಪ್ರೌಢಶಾಲೆ ಹಾಗೂ
ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅಂಕತ್ತಡ್ಕ, ಮಂಜುನಾಥ ನಗರ, ಚೆನ್ನಾವರ, ಪಾಲ್ತಾಡಿ, ಉಪ್ಪಳಿಗೆಯಲ್ಲಿ ಅಂಗನವಾಡಿ ಕೇಂದ್ರಗಳಿವೆ. ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯೂ ಪಾಲ್ತಾಡಿಯ ಅಂಕತ್ತಡ್ಕದಲ್ಲಿ ಇದೆ. ಅಂಕತ್ತಡ್ಕದಲ್ಲಿ ಕೊಳ್ತಿಗೆ ಸಹಕಾರಿ ಸಂಘದ ಹಾಗೂ ಮಂಜುನಾಥನಗರದಲ್ಲಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ ಇದೆ. ಚೆನ್ನಾವರ, ಅಂಕತ್ತಡ್ಕದಲ್ಲಿ ಮಸೀದಿ, ಮದ್ರಸ ಇವೆ. ಮಂಜುನಾಥ ನಗರ, ಪಾದೆಬಂಬಿಲ, ಅಲ್ಯಾಡಿಯ ಭಜನ ಮಂದಿರಗಳಿವೆ. ಮಂಜುನಾಥ ನಗರದಲ್ಲಿ ಸುವರ್ಣ ಗ್ರಾಮ ಯೋಜನೆಯಲ್ಲಿ ನಿರ್ಮಾಣಗೊಂಡ ಸಮುದಾಯ ಭವನವೂ ಇದೆ. ದೇವಸ್ಥಾನ, ದೈವಸ್ಥಾನಗಳಿದೆ. ಬಂಬಿಲ ಮತ್ತು ಉಪ್ಪಳಿಗೆಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘವಿದೆ. ಯುವಕ ಮಂಡಲ, ಯುವತಿ ಮಂಡಲ ಸಹಿತ ವಿವಿಧ ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳೂ ಇವೆ. ಗ್ರಾ.ಪಂ.ಗೆ ಸೂಕ್ತವಾದ ನಿವೇಶನವೂ ಪಾಲ್ತಾಡಿ ಗ್ರಾಮದಲ್ಲಿದೆ. ಒಟ್ಟಿನಲ್ಲಿ ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಿ ಮಾಡಬೇಕೆನ್ನುವ ಬೇಡಿಕೆ ಪ್ರಬಲವಾಗಿದೆ.
Related Articles
Advertisement
ಕಡಬ ತಾಲೂಕಿನ ದೋಳ್ಪಾಡಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾ.ಪಂ. ಮಾಡಬೇಕೇಂಬ ಬೇಡಿಕೆಯನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದರು. ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾ.ಪಂ. ಆಗಿ ಮಾಡಬೇಕೆನ್ನುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಪ್ರಯತ್ನನಡೆಸಲಾಗುತ್ತಿದೆ. ಮುಂದಿನ ಬಾರಿಯಾದರೂ ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಿ ಮಾಡಬೇಕು ಎಂದು ಸವಣೂರು ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷ ಪಿ.ಎನ್. ಕಿಟ್ಟಣ್ಣ ರೈ ನಡುಕೂಟೇಲು ಹೇಳಿದ್ದಾರೆ.
7 ವರ್ಷಗಳಿಂದ ಪ್ರಸ್ತಾವಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಬೇಕೆಂಬ ನಿಟ್ಟಿನಲ್ಲಿ ಗ್ರಾ.ಪಂ. ಸಾಮಾನ್ಯ ಸಭೆ, ಗ್ರಾಮಸಭೆಗಳಲ್ಲಿ ಕಳೆದ 7 ವರ್ಷಗಳಿಂದ ಪ್ರಸ್ತಾವಿಸಿ, ಸರಕಾರಕ್ಕೂ ಮನವಿ ಸಲ್ಲಿಸಲಾಗಿದೆ. -ಸತೀಶ್ ಅಂಗಡಿಮೂಲೆ, ಸದಸ್ಯರು ಸವಣೂರು ಗ್ರಾ.ಪಂ. ಪ್ರಸಾವನೆ ಸಲ್ಲಿಸಲಾಗುವುದು
ಪಾಲ್ತಾಡಿ ಗ್ರಾಮವನ್ನು ಗ್ರಾ.ಪಂ. ಮಾಡುವ ನಿಟ್ಟಿನಲ್ಲಿ ವರದಿ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಎಂ.ಆರ್. ರವಿ ಕುಮಾರ್, ಜಿಲ್ಲಾಧಿಕಾರಿ, ದ.ಕ. ~ಪ್ರವೀಣ್ ಚೆನ್ನಾವರ