Advertisement

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆ

09:59 AM Mar 12, 2020 | Sriram |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಭಾರಿ ಇಳಿಕೆ ಆಗಿದ್ದರಿಂದ ಅದರ ಲಾಭ ದೇಶದ ಜನರಿಗೆ ಸಿಕ್ಕಿದೆ. ಪೆಟ್ರೋಲ್‌ ,ಡಿಸೇಲ್‌ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ. ಪೆಟ್ರೋಲ್‌ ಬೆಲೆ ಲೀಟರ್‌ಗೆ 2.69 ರೂ ಇಳಿಕೆ ಆಗಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ 2ರೂ. 33 ಪೈಸೆ ಇಳಿಕೆಯಾಗಿದೆ.

Advertisement

ರಾಷ್ಟ್ರ ರಾಜಧಾನಿಯಲ್ಲಿ ಈಗ ಒಂದು ಲೀಟರ್‌ ಪೆಟ್ರೋಲ…ಗೆ 70.29 ರೂ ಇದ್ದು, ಡೀಸೆಲ್‌ ಬೆಲೆ 63 ರೂ ಆಗಿದೆ. ಮಂಗಳವಾರ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ…ಗೆ 72.98 ರೂ ದರವಿತ್ತು. ಡೀಸೆಲ್‌ 65.34 ರೂ. ನಂತೆ ಮಾರಾಟವಾಗುತ್ತಿತ್ತು. ಬೆಂಗಳೂರಿನಲ್ಲಿ ಪೆಟ್ರೋಲ್‌ 72.70 ರೂ. ಪ್ರತಿ ಲೀ. ಮತ್ತು ಪ್ರತಿ ಲೀ ಡೀಸೆಲ್‌ಗೆ 65.16 ರೂ. ಆಗಲಿದೆ. ಇದೇ ವೇಳೆ ಡಾಲರ್‌ ಎದುರು ರೂಪಾಯಿ ತನ್ನ ಮೌಲ್ಯವನ್ನ ಹೆಚ್ಚಿಸಿಕೊಂಡಿದೆ. 74ರ ಆಸುಪಾಸಿನಲ್ಲಿದ್ದ ರೂಪಾಯಿ ಇಂದು 71ರೂ.ಗೆ ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next