ಹೊಸದಿಲ್ಲಿ: ಕೋವಿಡ್ ಕಾರಣ ಜಗತ್ತಿನ ಎಲ್ಲಕಡೆ ಕಚ್ಚಾ ತೈಲದ ಬೆಲೆ ತೀವ್ರ ಇಳಿಕೆಯಾಗಿದೆ.
ಇದರ ಲಾಭವನ್ನು ಭಾರತ ಪಡೆದುಕೊಂಡಿದೆ. ಕುಸಿತದ ಪರಿಣಾಮ ಭಾರತ 25,000 ಕೋಟಿ ರೂ.ಗಳನ್ನು ಉಳಿತಾಯ ಮಾಡಿದೆ.
ಈ ವಿಚಾರವನ್ನು ಸ್ವತಃ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಕಚ್ಛಾತೈಲವನ್ನು ಆಮದು ಮಾಡಿಕೊಂಡಿರುವ ಭಾರತ, ದೇಶದ ಹಲವೆಡೆಗಳಲ್ಲಿರುವ ಭೂಗತ ತೈಲ ಸಂಗ್ರಹಾರಗಳಲ್ಲಿ ಅವುಗಳನ್ನು ಶೇಖರಿಸಿಟ್ಟುಕೊಂಡಿದೆ.
ಭಾರತ ಈ ಬೆಲೆ ಕುಸಿತವಾಗಿರುವ ವೇಳೆಯಲ್ಲಿ 90 ಲಕ್ಷ ಟನ್ ಕಚ್ಚಾತೈಲ ಖರೀದಿಸಿ,ಸುರಕ್ಷಿತ ಜಾಗದಲ್ಲಿ ಸಂರಕ್ಷಿಸಿದೆ.
ಇದು ಹೆಚ್ಚುವರಿ ಸಂಗ್ರಹಕ್ಕೆ ನೆರವಾಗಲಿದೆ. ಎಪ್ರಿಲ್ ಹೊತ್ತಿಗೆ ಭಾರತದ ಕಚ್ಚಾತೈಲ ಸಂಸ್ಕರಣೆ ಶೇ.28.8ರಷ್ಟು ಕುಸಿದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.