Advertisement

ಸೌದಿ ರಷ್ಯಾ ದರ ಸಮರ: 1991ರ ಬಳಿಕ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಕುಸಿತ

09:51 AM Mar 10, 2020 | Hari Prasad |

ಜಗತ್ತಿನ ಅತೀ ದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಜಗತ್ತಿನ ಎರಡನೇ ಅತೀ ದೊಡ್ಡ ತೈಲ ಉತ್ಪಾದಕ ರಾಷ್ಟ್ರ ರಷ್ಯಾ ಜೊತೆಗೆ ದರ ಸಮರಕ್ಕಿಳಿದಿರುವಂತೆಯೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಕುಸಿತವನ್ನು ಕಂಡಿದೆ.

Advertisement

ಸೌದಿಯು ತನ್ನ ಕಚ್ಛಾ ತೈಲ ಮಾರಾಟ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ್ದು ಮಾತ್ರವಲ್ಲದೇ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಛಾ ತೈಲವನ್ನು ಪೂರೈಸುತ್ತಿದೆ. ಆದರೆ ವಿಶ್ವವೆಲ್ಲಾ ಕೊರೋನಾ ಭೀತಿಗೆ ತತ್ತರಿಸಿರುವಾಗ ತೈಲ ಬೇಡಿಕೆಯಲ್ಲೂ ಕುಸಿತ ಉಂಟಾಗಿದ್ದು ಇವೆಲ್ಲದರ ಒಟ್ಟು ಪರಿಣಾಮ ಒಪೆಕ್ ನಲ್ಲಿ ಕಚ್ಛಾ ತೈಲದ ಬೆಲೆ 30% ಕುಸಿತಕ್ಕೆ ಕಾರಣವಾಗಿದೆ. ಮತ್ತು ಈ ಕನಿಷ್ಠ ದರ 1991ರ ಬಳಿಕ ಉಂಟಾಗಿರುವ ಕನಿಷ್ಠ ದರ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬ್ರೆಂಟ್ ಕಚ್ಛಾ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ 14.25 ಡಾಲರ್ ಗೆ ಕುಸಿತ ಕಂಡಿದೆ ಇದು ಒಟ್ಟಾರೆಯಾಗಿ 31.5% ಕುಸಿತ ಕಂಡಂತಾಗಿದೆ, ಇದೀಗ ಒಂದು ಬ್ಯಾರೆಲ್ ಕಚ್ಛಾ ತೈಲಕ್ಕೆ 31.02 ಡಾಲರ್ ದರ ನಿಗದಿಯಾಗಿದೆ. ಇದು, ಮೊದಲ ಗಲ್ಫ್ ಯುದ್ಧ ಪ್ರಾರಂಭಗೊಂಡಿದ್ದ 1991ರ ಜನವರಿ 17ರ ಬಳಿಕದ ಅತೀ ಕನಿಷ್ಠ ದರವಾಗಿದೆ. ಸದ್ಯಕ್ಕೆ ಒಂದು ಬ್ಯಾರೆಲ್ ಕಚ್ಛಾ ತೈಲದ ಬೆಲೆ 35.75 ಡಾಲರ್ ಗಳಲ್ಲಿ ನಡೆಯುತ್ತಿದೆ.

ಯು.ಎಸ್. ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್ (WTI) ಕಚ್ಛಾ ತೈಲ ಬೆಲೆಯಲ್ಲೂ ಭಾರೀ ಇಳಿಕೆ ಕಂಡುಬಂದಿದ್ದು 11.28 ಡಾಲರ್ ಗಳಷ್ಟು ಅಂದರೆ 27.4% ಕುಸಿತ ಕಂಡು ಪ್ರತೀ ಬ್ಯಾರೆಲ್ ಗೆ 30 ಡಾಲರ್ ದರ ನಿಗದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next