Advertisement

ಕ್ರೌಡ್‌ ಫ‌ಂಡಿಂಗ್ ‌ಸಿನಿಮಾ ನಿರ್ಮಾಣದತ್ತ ಕೋಡ್ಲು; ವರ್ಷಕ್ಕೆರಡು ಸಿನಿಮಾದ ಗುರಿ

11:16 AM Jul 24, 2020 | mahesh |

“ಮತ್ತೆ ಉದ್ಭವ’ ಚಿತ್ರದ ನಂತರ ಕನ್ನಡದ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಸದ್ದಿಲ್ಲದೆ ಮತ್ತೂಂದು ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಈ ಬಾರಿ ಕೋಡ್ಲು ರಾಮಕೃಷ್ಣ ಸಮಾನ ಮನಸ್ಕ ಸ್ನೇಹಿತರ ಜೊತೆ ಸೇರಿಕೊಂಡು ಸದಭಿರುಚಿ ಚಿತ್ರಗಳ ನಿರ್ಮಾಣಕ್ಕೆ ಹೊಸವೇದಿಕೆ ಸಿದ್ಧಪಡಿಸುತ್ತಿದ್ದಾರೆ. “ಜನನಿ ಕ್ರಿಯೇಷನ್ಸ್‌(ಎಲ್‌ಎಲ್‌ಪಿ)’ ಹೆಸರಿನಲ್ಲಿ ಪ್ರೊಡಕ್ಷನ್‌
ಕಂಪೆನಿಯನ್ನು ಆರಂಭಿಸಿರುವ ಕೋಡ್ಲು ರಾಮಕೃಷ್ಣ, ಈ ಬ್ಯಾನರ್‌ ಮೂಲಕ ಕನ್ನಡದ ಒಂದಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಂಡುವ ಯೋಚನೆಯಲ್ಲಿದ್ದಾರೆ.

Advertisement

ಈ ಬಗ್ಗೆ ಮಾತನಾಡುವ ಕೋಡ್ಲು ರಾಮಕೃಷ್ಣ, “ಸದ್ಯದ ಪರಿಸ್ಥಿತಿಯಲ್ಲಿ ಕನ್ನಡದಲ್ಲಿ ಹೆಚ್ಚು ಬಂಡವಾಳವನ್ನು ಹೂಡಿ ಸಿನಿಮಾಗಳನ್ನು ನಿರ್ಮಿಸಲು ಯಾರೂ ಮುಂದೆ ಬರುತ್ತಿಲ್ಲ. ಸಿನಿಮಾಕ್ಕೆ ಬಂಡವಾಳ ಹಾಕುವವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಪ್ರತಿಭಾವಂತರಿಗೆ ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ. ಇದೆಲ್ಲವನ್ನೂ ಗಮನಿಸಿ ನಾವೇ ಯಾಕೆ ಸಮಾನ ಮನಸ್ಕರು, ಸಿನಿಮಾಸಕ್ತರು ಸೇರಿ ಕ್ರೌಡ್‌ ಫ‌ಂಡಿಂಗ್‌ ಸಿನಿಮಾ ನಿರ್ಮಾಣ ಸಂಸ್ಥೆ ಶುರು ಮಾಡಬಾರದು ಎಂಬ ಯೋಚನೆ ಬಂತು. ಕೆಲ ವರ್ಷಗಳ ಹಿಂದೆಯೇ ಇಂಥದ್ದೊಂದು ಯೋಚನೆ
ಬಂದಿದ್ದರೂ, ಅದು ಕಾರ್ಯರೂಪಕ್ಕೆ ತರಲಾಗಿರಲಿಲ್ಲ. ಈ ಬಾರಿ ಕೊರೊನಾ ಲಾಕ್‌ಡೌನ್‌ ಅದನ್ನು ಕಾರ್ಯರೂಪಕ್ಕೆ ಬರುವಂತೆ ಮಾಡಿತು’ ಎನ್ನುತ್ತಾರೆ. ಇನ್ನು ಕೋಡ್ಲು ರಾಮಕೃಷ್ಣ ಅವರ ಈ ಪ್ರಯತ್ನಕ್ಕೆ ಅವರ ಒಂದಷ್ಟು ಸ್ನೇಹಿತರು, ಚಿತ್ರರಂಗದ ಮಂದಿ, ಎನ್‌ಆರ್‌ಐ, ಸಿನಿಮಾಸಕ್ತರು ಗಳು ಹೀಗೆ ಹಲವರು ಕೈ ಜೋಡಿಸುತ್ತಿದ್ದಾರಂತೆ. ಈ ಕುರಿತಂತೆ ಮಾತನಾಡುವ
ಕೋಡ್ಲು ರಾಮಕೃಷ್ಣ, “ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ರೌಡ್‌ ಫ‌ಂಡಿಂಗ್‌ ಮೂಲಕ ಸಿನಿಮಾ ಗಳನ್ನು ನಿರ್ಮಿಸುವ ಪ್ರಯತ್ನ ನಿಧಾನವಾಗಿ ಹೆಚ್ಚಾಗುತ್ತಿದೆ.

ನಮ್ಮ “ಜನನಿ ಕ್ರಿಯೇಷನ್ಸ್‌ ಎಲ್‌ಎಲ್‌ಪಿ’ ಒಂದು ರಿಜಿಸ್ಟರ್ ಕಂಪೆನಿಯಾಗಿದ್ದು, ಇದರಲ್ಲಿ ಸಿನಿಮಾ ನಿರ್ಮಾಪಕರು, ತಂತ್ರಜ್ಞರು, ಕಲಾವಿದರು, ಹೂಡಿಕೆದಾರರು ಹೀಗೆ ಎಲ್ಲರನ್ನೂ
ಜೊತೆಯಾಗಿ ಸೇರಿಸಿಕೊಂಡು ಒಳ್ಳೆಯ ಸಿನಿಮಾಗಳನ್ನು ನಿರ್ಮಿಸುವ ಯೋಜನೆಯಿದೆ. ಪ್ರತಿಯೊಬ್ಬರು ಇದರಲ್ಲಿ ಪಾಲುದಾರರಾಗಿರುತ್ತಾರೆ. ಅವರ ಹೂಡಿಕೆಗೆ ತಕ್ಕಂತೆ ರಿಟರ್ನ್ಸ್ ಕೂಡ
ಇರಲಿದೆ’ ಎನ್ನುತ್ತಾರೆ.

“ಆರಂಭದಲ್ಲಿ ಕಡಿಮೆ ಬಜೆಟ್‌ನಲ್ಲಿ ಸಿನಿಮಾ, ವೆಬ್‌ ಸೀರಿಸ್‌, ಶಾರ್ಟ್‌ ಫಿಲಂ, ಸೀರಿಯಲ್‌ ನಿರ್ಮಿಸುವ ಯೋಚನೆಯಿದೆ. ಕನ್ನಡದ ಜೊತೆಗೆ ಬೇರೆ ಭಾಷೆಗಳಿಗೂ ಇವು ಡಬ್ಬಿಂಗ್‌ ಆಗಬೇಕು. ಹಾಗಾಗಿ ಗುಣಮಟ್ಟದಲ್ಲಿ ಎಲ್ಲೂ ರಾಜಿಯಿಲ್ಲದೆ ಇವುಗಳು ತಯಾರಾಗುತ್ತವೆ. ಸದ್ಯಕ್ಕೆ ಥಿಯೇಟರ್‌ಗಳಲ್ಲಿ ಇವುಗಳ ಬಿಡುಗಡೆ ಸಾಧ್ಯವಾಗದಿರು ವುದರಿಂದ ಒಟಿಟಿ ಪ್ಲ್ರಾಟ್‌ಫಾರಂ ಮೂಲಕ ಇವುಗಳ ಬಿಡುಗಡೆ ಮಾಡಲು ಯೋಜಿಸಿದ್ದೇವೆ. ಈಗಾಗಲೇ ಒಂದೆರಡು ಕಥೆಗಳನ್ನು ಸಿನಿಮಾ ಮಾಡುವುದರ ಬಗ್ಗೆ ಪ್ಲಾನಿಂಗ್‌ ನಡೆಯುತ್ತಿದೆ. ಜೊತೆಗೆ ವೆಬ್‌ ಸೀರಿಸ್‌ಗೂ ಆದ್ಯತೆ
ಕೊಡುತ್ತಿದ್ದೇವೆ. ನಾನು ಇದರಲ್ಲಿ ಕ್ರಿಯೇಟಿವ್‌ ಹೆಡ್‌ ಆಗಿ ಪ್ರೊಡಕ್ಷನ್‌ ಎಕ್ಸಿಕ್ಯೂಟೀವ್‌ ಆಗಿ ಕಾರ್ಯ ನಿರ್ವಹಿಸು ತ್ತಿದ್ದೇನೆ. ಹೊಸ ಪ್ರತಿಭಾವಂತ ಯುವ ನಿರ್ದೇಶಕರಿಗೆ ಇಲ್ಲಿ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗು ವುದೆ’ ಎನ್ನುವುದು ಕೋಡ್ಲು ರಾಮಕೃಷ್ಣ ಮಾತು.

ಇನ್ನು ಈಗಾಗಲೇ ಕೋಡ್ಲು ರಾಮಕೃಷ್ಣ ಅವರ ಇಂಥದ್ದೊಂದು ಪ್ರಯತ್ನಕ್ಕೆ ಐವತ್ತಕ್ಕೂ ಹೆಚ್ಚು ಜನ ಸದಸ್ಯರು ಕೈ ಜೋಡಿಸಿದ್ದಾರಂತೆ. ಈ ವರ್ಷದ ಕೊನೆಯೊಳಗೆ ಕನಿಷ್ಟ ಎರಡು ಚಿತ್ರಗಳನ್ನಾದರೂ ಬಿಡುಗಡೆ ಮಾಡುವ ಯೋಚನೆಯಿದೆ ಎನ್ನುತ್ತಾರೆ ಕೋಡ್ಲು.

Advertisement
Advertisement

Udayavani is now on Telegram. Click here to join our channel and stay updated with the latest news.

Next