Advertisement

ಹುಲಿವೇಷ, ಟ್ಯಾಬ್ಲೊ ನೋಡಲು ಕಿಕ್ಕಿರಿದ ಜನ 

12:39 PM Oct 18, 2018 | |

ಎಕ್ಕಾರು: ದಸರಾ ಮಹೋತ್ಸವ ಸಮಿತಿ ಎಕ್ಕಾರು ವತಿಯಿಂದ ಇಲ್ಲಿನ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಿಂದ ಶ್ರೀ ಕುಂಭಕಂಠಿಣೀ ದೈವದ ಗೋಪುರದ ಬಳಿ ಪಾರ್ಥನೆಯೊಂದಿಗೆ 60ನೇ ವರ್ಷದ ದಸರಾ ಮಹೋತ್ಸವ ಮೆರವಣಿಗೆಯು ಶ್ರೀ ಕ್ಷೇತ್ರ ಕಟೀಲು ಶ್ರೀ ದೇವಿ ಸನ್ನಿಧಿಗೆ ಹೊರಟಿತು.

Advertisement

60ನೇ ವರ್ಷದ ದಸರಾ ಮೆರವಣಿಗೆ ಈ ಬಾರಿ ಅದ್ದೂರಿಯಾಗಿ ನಡೆದಿದೆ. ಸುಮಾರು 12 ಟ್ಯಾಬ್ಲೊಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಟ್ಯಾಬ್ಲೊಗಳಲ್ಲಿ ಮೋದಿ ಟ್ಯಾಬ್ಲೊ ನೋಡಲು ಜನರ ನೂಕುನುಗ್ಗಲು ಕಾಣಸಿಕ್ಕಿತು. ಬೆಂಗಾವಲು ರಕ್ಷಣಾ ಪಡೆಯೊಂದಿಗೆ ಕಪ್ಪು ಕಾರಿನಲ್ಲಿ ಆಗಮಿಸಿದ ಮೋದಿ, ಬಳಿಕ ಭಾಷಣ ಮಾತನಾಡುತ್ತಿದ್ದಂತೆ ಮೋದಿಯೇ ಬಂದಂತಾಯಿತು.

103 ಹುಲಿ ವೇಷಧಾರಿಗಳು ಈ ಬಾರಿಯ ವಿಶೇಷವಾಗಿದೆ. ಸಣ್ಣ ಮಕ್ಕಳ ಹುಲಿ ವೇಷ ಜತೆ ಹಿರಿಯರ ಹುಲಿವೇಷಗಳು, ಸಿಂಹಗಳ ಕುಣಿತ ಹೆಚ್ಚು ಅಕರ್ಷಣೆಯನ್ನು ಪಡೆಯಿತು. ಹೆಚ್ಚಿನವರು ಹರಕೆಯ ರೂಪದಲ್ಲಿ ಈ ವೇಷವನ್ನು ಹಾಕಿದ್ದರು.

ವ್ರತಧಾರಿಯಾಗಿ ಹುಲಿ ವೇಷ ಹಾಕುವವರು ಬೆಳಗ್ಗೆ ಬಂದಿದ್ದು, 20 ಮಂದಿಯಷ್ಟು ಪೈಂಟರ್‌ಗಳು ಹುಲಿ ವೇಷದ ಬಣ್ಣಗಳನ್ನು ಹಾಕುವಲ್ಲಿ ಮಗ್ನರಾಗಿದ್ದರು. ಜನಪದ ಶೈಲಿಯ ಟ್ಯಾಬ್ಲೊಗಳು ಜನರನ್ನು ಆಕರ್ಷಿಸಿದವು. ಎಕ್ಕಾರಿನಿಂದ ಕಟೀಲಿನವರೆಗೆ ಮೆರವಣಿಗೆಯಲ್ಲಿ ಬೊಂಬೆ, ಚೆಂಡೆ, ಡೋಲು, ವೀರಗಾಸೆ, ಭಜನೆ, ಸಮವಸ್ತ್ರ ಧರಿಸಿದ ಯುವತಿ, ಯುವಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next