Advertisement

ಸಿಎಂ ಸಿದ್ದರಾಮಯ್ಯ ಮತ್ತು ಕಾಗೆ! : ಮತ್ತೆ ಮಾಧ್ಯಮಗಳಲ್ಲಿ ಭಾರೀ ಚರ್ಚೆ

11:50 AM Jan 20, 2017 | |

ಮಂಜೇಶ್ವರ: ಸುಡುಬಿಸಿಲಿನಲ್ಲಿ ತೆರೆದ ವೇದಿಕೆಯಲ್ಲಿ ನಡೆದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ “ಗಿಳಿವಿಂಡು’ ಉದ್ಘಾಟನೆ ಸಮಾರಂಭದ ಸಂದರ್ಭ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧೋತಿಯ ಮೇಲೆ ಕಾಗೆಯ ಹಿಕ್ಕೆ ಬಿದ್ದು ಮುಜುಗರಕ್ಕೆ ಕಾರಣವಾಯಿತು. ಈ ಬಗ್ಗೆ ಕನ್ನಡದ ಪ್ರಮುಖ ಸುದ್ದಿ ಮಾದ್ಯಮಗಳಲ್ಲಿ ಶುಕ್ರವಾರ ಭಾರೀ ಚರ್ಚೆ ನಡೆಯುತ್ತಿದೆ. ಜ್ಯೋತಿಷಿಗಳು, ಧರ್ಮ ಪಂಡಿತರು, ಶಕುನ ಶಾಸ್ತ್ರ ಪಂಡಿತರು ಭಾರೀ ಚರ್ಚೆ ನಡೆಸುತ್ತಿದ್ದಾರೆ. 

Advertisement

ತೆರೆದ ವೇದಿಕೆಯ ಹಿಂಬದಿಯಲ್ಲಿ ಒಣಗಿದ ಮರದಲ್ಲಿ ಕುಳಿತಿದ್ದ ಕಾಗೆಯ ಹಿಕ್ಕೆ ಮುಖ್ಯಮಂತ್ರಿಗಳ ಧೋತಿಯ ಮೇಲೆ ಬಿತ್ತು. ಈ ಸಂದರ್ಭ ವೇದಿಕೆಯಲ್ಲಿದ್ದ ಪ್ರಮುಖರು ಕಾಗೆಯ ಹಿಕ್ಕೆ ಬಿದ್ದ ಮರವನ್ನು ವೀಕ್ಷಿಸುತ್ತಿದ್ದರೆ, ಪ್ರಮುಖರೊಬ್ಬರು ಮುಖ್ಯಮಂತ್ರಿಗಳ ಧೋತಿಯ ಮೇಲಿನಿಂದ ಹಿಕ್ಕೆಯನ್ನು ಸ್ವತ್ಛಗೊಳಿಸಿದರು. 

ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಥೂ.. ಅಂತವೆನ್ನೆಲ್ಲಾ ನಂಬುತ್ತಾರೇನ್ರಿ… ಮರದ ಕೆಳಗೆ ಕೂತಾಗ ಯಾವುದೋ ಪಕ್ಷಿ ಹಿಕ್ಕೆ ಹಾಕ್ತು… ಕಾಗೆ..‌ ಗೂಬೆ.. ಗುಬ್ಬಿ.. ಹಿಕ್ಕೆ ಹಾಕಿದ್ದಕ್ಕೆ ಏನೇನೋ ಆಗುತ್ತೆ ಅಂತ ನಂಬುತ್ತಾರಾ….ಎಂದಿದ್ದಾರೆ. 

ಈ ಹಿಂದೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ ಮರಿ ಕುಳಿತಿದ್ದುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಕಾರನ್ನೇ ಬದಲಿಸಿದ್ದು ಸೇರಿದಂತೆ ಹಲವು ಬೆಳವಣಿಗೆಗಳು ನಡೆದಿದ್ದವು. ಘಟನೆ ನಡೆದ ಕೆಲ ದಿನಗಳ ಬಳಿಕ ಕಾಕತಾಳೀಯವೋ ಎಂಬಂತೆ ಮುಖ್ಯಮಂತ್ರಿಗಳ ಪುತ್ರ ರಾಕೇಶ್‌ ಅವರು ವಿಧಿವಶರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next