Advertisement

ಗಡಿ ಮೀರಿದ ಇತಿಹಾಸ ಪ್ರಭಾವ: ಪ್ರೊ|ಉಪಿಂದರ್‌

12:17 PM Dec 28, 2017 | Team Udayavani |

ಉಡುಪಿ: ಭಾರತವು ವಿಶೇಷವಾಗಿ ದಕ್ಷಿಣ ಭಾರತದ ಇತಿಹಾಸ ಏಷ್ಯಾ ಖಂಡ, ವಿಶೇಷವಾಗಿ ದಕ್ಷಿಣ ಏಷ್ಯಾ ಪ್ರದೇಶದ ಮೇಲೆ ಆಗಿದೆ. ಭಾರತದ ಪಂಚತಂತ್ರದ ಕತೆಗಳು ಅರಬ್‌ ರಾಷ್ಟ್ರಗಳಲ್ಲಿಯೂ ಕಂಡುಬರುತ್ತವೆ. ಪ್ರಾದೇಶಿಕ ಇತಿಹಾಸಗಳು ಹೀಗೆ ಗಡಿ ಮೀರಿ ಚಲಿಸುವುದು ಕಂಡುಬರುತ್ತದೆ ಎಂದುದಿಲ್ಲಿ ವಿ.ವಿ. ಇತಿಹಾಸ ಪ್ರಾಧ್ಯಾಪಕಿ, ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರ ಪುತ್ರಿ ಪ್ರೊ| ಉಪಿಂದರ್‌ ಸಿಂಗ್‌ ಹೇಳಿದರು.

Advertisement

ಮೈಸೂರು ಪ್ರಾಂತದ ಕುರಿತು ವಿಶೇಷ ಸಂಶೋಧನೆ ನಡೆಸಿದ, ಮೈಸೂರು ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿದ್ದ ಇತಿಹಾಸ ತಜ್ಞ ಪ್ರೊ| ಡಿ.ಎಸ್‌.ಅಚ್ಯುತ ರಾವ್‌ ಶತಮಾನೋತ್ಸವ ಪ್ರಯುಕ್ತ ಬುಧವಾರ ಮಣಿಪಾಲ ವಿ.ವಿ.ಯ ಮಣಿಪಾಲ್‌ ಸೆಂಟರ್‌ ಫಾರ್‌ ಫಿಲಾಸಫಿ ಆ್ಯಂಡ್‌ ಹ್ಯುಮ್ಯಾನಿಟೀಸ್‌ (ಎಂಸಿಪಿಎಚ್‌) ಗಂಗೂ ಬಾಯಿ ಹಾನಗಲ್‌ ಸಭಾಂಗಣದಲ್ಲಿ ಆಯೋಜಿಸಿದ ರಾಷ್ಟ್ರೀಯ ಇತಿಹಾಸ
ಸಮ್ಮೇ ಳನದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಪಂಚತಂತ್ರದ ಕತೆಗಳು ಪ್ರಾಣಿಗಳಿಂದ ಕೂಡಿದ್ದರೂ, ಸರಳವಾಗಿದ್ದರೂ ಇವು ಆಡಳಿತ, ರಾಜಕೀಯ ತಂತ್ರಗಾರಿಕೆಯನ್ನು ಹೊಂದಿ ಇಂದಿಗೂ ಪ್ರಸ್ತುತವೆನಿಸಿವೆ. ಇವು ಬುದ್ಧನ ಜಾತಕ ಕತೆಗಳಿಗಿಂತ ಭಿನ್ನವಾಗಿವೆ. ಇವು ಸುಮಾರು 200 ರೀತಿಗಳಲ್ಲಿ 50 ಭಾಷೆಗಳಲ್ಲಿ ಪ್ರಕಟವಾಗಿವೆ. ಇವು ಸೂಫಿ ಸಂತರ ಕತೆಗಳ ಮೇಲೂ, ಅರೆಬಿಯದ ಕತೆಗಳ ಮೇಲೂ ಪರಿಣಾಮ ಬೀರಿವೆ.

ಆಂಧ್ರಪ್ರದೇಶದ ನಾಗಾರ್ಜುನಕುಂಡ, ಅಮರಾವತಿಯ ಶಾಸನಗಳು ಶ್ರೀಲಂಕಾ, ಜಾವಾ, ಸುಮಾತ್ರಾ, ಕಾಂಬೋಡಿಯಾ ಮೊದಲಾದ ದೇಶಗಳ ಮೇಲೆ ಬೌದ್ಧ ಧರ್ಮದ ಪ್ರಭಾವ ಆಗಿರುವುದನ್ನು ತೋರಿಸು ತ್ತವೆ. ಕಾಳಿದಾಸ, ಭಾರವಿ, ಕೌಟಿಲ್ಯ, ದಂಡಿನ ಮೊದಲಾದವರ ಸಾಹಿತ್ಯ ಗಳ ಪ್ರಭಾವ ವಿದೇಶಗಳಲ್ಲಿಯೂ ಕಂಡು ಬಂದಿದೆ ಎಂದು ಪ್ರೊ| ಸಿಂಗ್‌ ಹೇಳಿದರು. 

ಅಚ್ಯುತರಾವ್‌ ಅವರ ವಸ್ತು ಪ್ರದರ್ಶನವನ್ನು ಮಣಿಪಾಲ ವಿ.ವಿ. ವಿಶ್ರಾಂತ ಕುಲಪತಿ ಡಾ| ಎಂ.ಎಸ್‌. ವಲಿಯತ್ತಾನ್‌
ಉದ್ಘಾ ಟಿಸಿದರು. ಎಂಸಿಪಿಎಚ್‌ ನಿರ್ದೇಶಕ ನಿಖೀಲ್‌ ಗೋವಿಂದ್‌ ಸ್ವಾಗತಿಸಿ ಶತಮಾನೋತ್ಸವ ಸಮಿತಿ ಸಂಚಾಲಕ ಡಿ.ಎ. ಪ್ರಸನ್ನ ಪ್ರಸ್ತಾವನೆಗೈದರು. ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಇತಿಹಾಸ ತಜ್ಞ ಡಾ| ಅ. ಸುಂದರ್‌ ಮೊದ  ಲಾದವರು ಉಪಸ್ಥಿತರಿದ್ದರು. ಸೃಜನಾ ಕಾಯ್ಕಿಣಿ ಕಾರ್ಯಕ್ರಮ ನಿರ್ವಹಿಸಿದರು.

ಪತ್ನಿಯರನ್ನು ಬಿಟ್ಟು ಶ್ವಾನವನ್ನು ಕರೆದೊಯ್ದ !
ಸ್ವಾತಂತ್ರ್ಯ ಸಿಕ್ಕಿದ ಬಳಿಕವೂ ಕಾಶ್ಮೀರ, ಹೈದರಾಬಾದ್‌, ಜುನಾಗಢ ಸಂಸ್ಥಾನಗಳು ಭಾರತದೊಂದಿಗೆ ವಿಲೀನವಾದ ಬಗೆ ಅಚ್ಚರಿ ತರುತ್ತದೆ. ಕಾಶ್ಮೀರದ ರಾಜ ಹಿಂದೂವಾಗಿದ್ದರೆ ಪ್ರಜೆಗಳು ಮುಸ್ಲಿಮರಾಗಿದ್ದರು. ಹೈದರಾಬಾದ್‌ ಮತ್ತು ಜುನಾಗಢ ಪ್ರಾಂತದಲ್ಲಿ ಪ್ರಜೆಗಳು ಹಿಂದೂಗಳಾಗಿದ್ದರೆ ರಾಜ ಮುಸ್ಲಿಮನಾಗಿದ್ದ. ಜಗತ್ತಿನ ಅತಿ ಶ್ರೀಮಂತನಾಗಿದ್ದ ನಿಜಾಮ ಹೈದರಾಬಾದ್‌ನಲ್ಲಿ ಸೇನೆ, ಅಂಚೆ, ಆಡಳಿತವನ್ನು ಸ್ವತಂತ್ರವಾಗಿ ಹೊಂದಿದ್ದ. ಭಾರತದ ಸೇನೆ ಮುನ್ನುಗ್ಗಿ ಇದನ್ನು ಭಾರತದೊಂದಿಗೆ  ವಿಲೀನಗೊಳಿಸಬೇಕಾಯಿತು. ಜುನಾಗಢದ ಮೇಲೆ ಸೇನೆ ಮುನ್ನುಗ್ಗಿದಾಗ ರಾಜ ಮಹಬತ್‌ ಖಾನ್‌ ತನ್ನದೇ ಖಾಸಗಿ ವಿಮಾನದಲ್ಲಿ ಪಾಕಿಸ್ಥಾನಕ್ಕೆ ಹಾರಿ ಹೋದ. ಆಗ ಆತ ನಾಯಿಯನ್ನು ಕರೆದೊಯ್ದಿದ್ದ. ಆತ ಬಹುಮಂದಿ ಪತ್ನಿಯರನ್ನು ಹೊಂದಿದ್ದ. ಪತ್ನಿಯರನ್ನು ಮಾತ್ರ ಕರೆದೊಯ್ಯಲಿಲ್ಲ ಎಂದು ಸಮ್ಮೇಳನವನ್ನು ಉದ್ಘಾಟಿಸಿದ ಮಣಿಪಾಲ ವಿ.ವಿ. ಕುಲಪತಿ ಡಾ| ಎಚ್‌. ವಿನೋದ ಭಟ್‌ ಹೇಳಿದರು. ಮುಂದೆ ಎಂಸಿಪಿಎಚ್‌ನಲ್ಲಿ ಅಚ್ಯುತ್‌ ರಾವ್‌ ಇತಿಹಾಸ ವಿಭಾಗ ತೆರೆಯುವುದಾಗಿ ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next