ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ವಿಲಕ್ಷಣ ಪ್ರಕರಣವೊಂದರಲ್ಲಿ, ಕೋಟ್ಯಧಿಪತಿ ಉದ್ಯಮಿಯ ಪತ್ನಿ ತನಗಿಂತ 13 ವರ್ಷ ಚಿಕ್ಕವನಾದ ಆಟೋ ರಿಕ್ಷಾ ಚಾಲಕನೊಂದಿಗೆ ಪರಾರಿಯಾಗಿದ್ದಾಳೆ.
ಅಕ್ಟೋಬರ್ 13 ರಂದು ಇಂದೋರ್‌ನ ಖಜ್ರಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ 47 ಲಕ್ಷ ರೂ.ಗಳನ್ನು ತೆಗೆದುಕೊಂಡು ಮಹಿಳೆ ಪರಾರಿಯಾಗಿದ್ದಾಳೆ ಎಂದು ದೂರಿನಲ್ಲಿ ಹೇಳಿಕೊಳ್ಳಲಾಗಿದೆ.
ಆಟೋ ರಿಕ್ಷಾ ಚಾಲಕ ಆಗಾಗ್ಗೆ ಆಕೆಯ ಮನೆಗೆ ಡ್ರಾಪ್ ಮಾಡುತ್ತಿದ್ದ ಎಂದು ವರದಿಗಳು ತಿಳಿಸಿವೆ. ಅಕ್ಟೋಬರ್ 13 ರಂದು ರಾತ್ರಿಯಾದರೂ ಪತ್ನಿ ಮನೆಗೆ ಬಾರದೇ ಇದ್ದಾಗ, ಪತಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ.
ಆಟೊರಿಕ್ಷಾ ಚಾಲಕನ ಹೆಸರು ಇಮ್ರಾನ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು 32 ವರ್ಷ ವಯಸ್ಸಿನವನೆಂದು ಹೇಳಲಾಗಿದೆ.ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, 45 ವರ್ಷದ ಮಹಿಳೆ ಹಾಗೂ ಆಟೋ ರಿಕ್ಷಾ ಚಾಲಕನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
ನಾಲ್ಕು ನಗರಗಳಿಗೆ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಖಾಂಡ್ವಾ, ಜವ್ರಾ, ಉಜ್ಜಯಿನಿ ಮತ್ತು ರತ್ಲಂನಲ್ಲಿ ಚಾಲಕ ಮತ್ತು ಆರೋಪಿ ಮಹಿಳೆಯ ಪತ್ತೆಗಾಗಿ ಪೊಲೀಸರ ತಂಡಗಳು ಹುಡುಕಾಟ ನಡೆಸಿದ್ದಾರೆ. ಮಾತ್ರವಲ್ಲದೆ, ಅಧಿಕಾರಿಗಳು ಇಮ್ರಾನ್ ನ ಸ್ನೇಹಿತನಾಗಿರುವ ಮತ್ತೊಬ್ಬ ವ್ಯಕ್ತಿಯ ಮನೆಯಿಂದ 33 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.