ಬೆಂಗಳೂರು: ಖ್ಯಾತ ಹೋಮಿಯೋ ಕೇರ್ ಇಂಟರ್‌ನ್ಯಾಷನಲ್ ಸಂಸ್ಥೆ ವತಿಯಿಂದ ಕೋಟಿ ನಗೆ ಮತ್ತು ಕಾಯಿಲೆ ದೂರ ಮಾಡೋಣ ಬನ್ನಿ (ಕ್ರೋರ್ ಸ್ಮೈಲ್ಸ್ ಆ್ಯಂಡ್ ಸ್ಟಿಲ್ ಕೌಂಟಿಂಗ್) ಎಂಬ ವಿಶೇಷ ಲೋಗೋ ಬಿಡುಗಡೆ ಮಾಡಲಾಯಿತು.
ಬುಧವಾರ ಜಯನಗರದ 5ನೇ ಬ್ಲಾಕ್‌ನಲ್ಲಿರುವ ಹೋಮಿಯೋಕೇರ್ ಇಂಟರ್‌ನ್ಯಾಷನಲ್ ಶಾಖೆಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಶ್ರೀಕಾಂತ್ ಮೊರ್ಲವಾರ್, ಬಿಬಿಎಂಪಿ ಸದಸ್ಯ ನಾಗರಾಜ್, ಮಾಜಿ ಸದಸ್ಯ ಬಿ. ಸೋಮಶೇಖರ್ ಇತರರು ಸೇರಿ ಲೋಗೋ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್ ಮೊರ್ಲವಾರ್ ಮಾತನಾಡಿ ವಿಶ್ವದ ಪ್ರಥಮ ಕಾನೂನಾತ್ಮಕ ಹೋಮಿಯೋಪತಿ ಇದಾಗಿದೆ. ಇದಕ್ಕಾಗಿ 35 ವರ್ಷಗಳಿಂದ ನಿರಂತರ ಅಧ್ಯಯನ, ಪ್ರಾಮಾಣಿಕ ಪ್ರಯತ್ನ ಹಾಗೂ ಸಂಶೋಧನೆ ನಡೆಸಿ ಕಾನೂನಾತ್ಮಕ ಹೋಮಿಯೋಪತಿ ಮತ್ತು ಅನುವಂಶಿಕ ಹೋಮಿಯೋಪತಿ ಪದ್ಧತಿಯನ್ನು ರೂಪಿಸಿದ್ದೇವೆ. ಈ ಚಿಕಿತ್ಸೆಯಲ್ಲಿ ಬಹಳಷ್ಟು ಆಧುನಿಕ ಸೂತ್ರಗಳನ್ನು ಅಳವಡಿಸಿದ್ದೇವೆ.
ವಾಸಿ ಮಾಡಲಾಗದ ಕಾಯಿಲೆಗಳಾದ ಹೈಪೋಥೈರಾಯ್ಡ, ಮಧುಮೇಹ, ಬಂಜೆತನ, ಹಾರ್ಮೋನ್ ಸಂಬಂಧಿತ ಕಾಯಿಲೆ, ಸಂಧಿವಾತ, ಬೆನ್ನುಹುರಿ ಸಮಸ್ಯೆ, ಮಂಡಿನೋವು, ಸೋರಿ ಯಾಸಿಸ್, ವಿಟಿಲಿಗೊ ಮುಂತಾದ ಶಸ್ತ್ರಚಿಕಿತ್ಸಾ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ಇಲ್ಲದೆ ಹೋಮಿಯೋಪತಿಯಲ್ಲಿ ಗುಣಪಡಿಸುತ್ತೇವೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ 300ಕ್ಕೂ ಅಧಿಕ ವೈದ್ಯರು ಹಾಗೂ ಕ್ಲಿನಿಕ್‌ಗಳು ಒದಗಿಸುತ್ತಿರುವ ಅತ್ಯುತ್ತಮ ಸೇವೆಗಳಿಂದ ರೋಗಿಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ ಎಂದರು.
ಬೀದರ್‌ನಲ್ಲಿ ಶಾಖೆ: ದಕ್ಷಿಣ ಭಾರತದಲ್ಲಿ 50ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ನಾವು ಕರ್ನಾಟಕವೊಂದರಲ್ಲೇ 17 ಶಾಖೆಗಳನ್ನು ತೆರೆದಿದ್ದೇವೆ. ಇಂದು ರಾಜ್ಯದ ಬೀದರ್ ಜನತೆಗೂ ಹೋಮಿಯೋ ಇಂಟರ್‌ನ್ಯಾಷನಲ್ ಸೇವೆ ಸಿಗಲಿದೆ. ಅಲ್ಲೂ ಒಂದು ಕ್ಲಿನಿಕನ್ನು ತೆರೆಯಲಾಗಿದೆ.
ಈ ಸಂಭ್ರಮಾಚರಣೆ ಪ್ರಯುಕ್ತ ಇಂದು ಚಿಕಿತ್ಸೆಗಾಗಿ ನೋಂದಾಯಿಸಿ ಕೊಳ್ಳುವ ರೋಗಿಗಳಿಗೆ ಶೇ.30 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದು ಆರು ವಾರಗಳ ಕಾಲ ಎಲ್ಲ ಶಾಖೆಗಳಲ್ಲೂ ಲಭ್ಯವಾಗಲಿದೆ. ಒಟ್ಟಾರೆ, ನಮ್ಮ ಮುಖ್ಯ ಉದ್ದೇಶ ಗುಣಪಡಿಸಲಾಗದ ಕಾಯಿಲೆಗಳಿಗೆ ಹಾಗೂ ಮಕ್ಕಳಿಲ್ಲದವರ ಪಾಲಿಗೆ ಹೋಮಿಯೋಪತಿ ಮೂಲಕ ಪರಿಹಾರ ಕಲ್ಪಿಸುವುದಾಗಿದೆ ಎಂದು ನುಡಿದರು.