ಮದ್ದೂರು: ರೈತರ ಅನುಕೂಲಕ್ಕಾಗಿಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನು ಸದುಪ ಯೋಗ ಮಾಡಿಕೊಂಡು ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ರೈತರ ಬೆಳೆ ಸಮೀಕ್ಷೆ ಕಾರ್ಯಕ್ರಮದ ಕರಪತ್ರ ಬಿಡು ಗಡೆ ಹಾಗೂ ಜಾಗೃತಿಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳೆ ಸಮೀಕ್ಷೆ ಆರಂಭ: ತಾಲೂಕಿನಲ್ಲಿ ರೈತರ ಬೆಳೆ ಸಮೀಕ್ಷೆ ಆರಂಭವಾಗುತ್ತಿದೆ. ರೈತರು ತಮ್ಮ ಸ್ವಂತ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಿದೆ. ಇದರಿಂದ ಸರ್ಕಾರ ರೈತರ ಬೆಳೆ ಸಮೀಕ್ಷೆ ಎಂಬ ಪದ್ಧತಿಯನ್ನು ಜಾರಿಗೊಳಿ ಸಿದ್ದು, ತಮ್ಮ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಮೊಬೈಲ್ ಆಫ್ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಿರ್ಲಕ್ಷ್ಯ ಬೇಡ: ಬೆಳೆ ಸಮೀಕ್ಷೆಯನ್ನು ನೋಂದಾಯಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿಯಾದಂತಹ ಸಂದರ್ಭಗಳಲ್ಲಿ ಸರ್ಕಾರದಿಂದ ಪರಿಹಾರದ ಹಣ ಸಿಗಲಿದೆ. ರೈತರು ನಿರ್ಲಕ್ಷ್ಯವಹಿಸದೇ ಸರ್ಕಾರ ಜಾರಿಗೊಳಿಸಿರುವ ಪದ್ಧತಿಯನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಮಾಡುವಂತೆ ಮನವಿ ಮಾಡಿದರು.
ತಹಶೀಲ್ದಾರ್ ವಿಜಯಕುಮಾರ್, ತಾಪಂ ಸದಸ್ಯರಾದ ಮರಿಯಪ್ಪ, ಸುಮ ಕರಿಯಪ್ಪ, ಕೃಷಿ ಅಧಿಕಾರಿ ಮಂಜು, ಮುಖಂಡ ಮಾದನಾಯಕನಹಳ್ಳಿ ರಾಜಣ್ಣ ಹಾಜರಿದ್ದರು.