Advertisement

ಬೆಳೆ ಪರಿಹಾರ ಹೆಚ್ಚುವರಿ ಹಣ 1135.49 ಕೊಟಿ ರೂ. ಬಿಡುಗಡೆ: ಆರ್ ಅಶೋಕ್

07:04 PM Feb 09, 2022 | Team Udayavani |

ಬೆಂಗಳೂರು: ಕಳೆದ ಅಧಿವೇಶನದಲ್ಲಿ ಘೋಷಣೆ ಮಾಡಿದಂತೆ ಬೆಳೆ ಪರಿಹಾರವಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದೆ.

Advertisement

ಬಿಡುಗಡೆ ಮಾಡಿ ಮಾತನಾಡಿದ ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಉಪಾಧ್ಯಕ್ಷ ಆರ್ ಅಶೋಕ್ “ರಾಜ್ಯದಲ್ಲಿ 2021 ನೇ ಸಾಲಿನಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಉಂಟಾದ ಪ್ರವಾಹದಿಂದ ಅಪಾರ ಬೆಳೆ ಹಾನಿ ಉಂಟಾಗಿತ್ತು. ಕೆಂದ್ರ‌ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿಯಾದ ದರದಲ್ಲಿ ಬೆಳೆಹಾನಿಗೆ ಇನ್‌ಪುಟ್ ಸಬ್ಸಿಡಿ ಮೊತ್ತವನ್ನು ದಾಖಲೆಯ ಸಮಯದಲ್ಲಿ ರಾಜ್ಯದ 18.02 ಲಕ್ಷ ರೈತರಿಗೆ 1252.89 ಕೋಟಿ ಇನ್‍ಪುಟ್ ಸಬ್ಸಿಡಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದರು.

ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸರ್ಕಾರ ಬೆಳೆಹಾನಿಗೆ ಹೆಚ್ಚಿನ ಆರ್ಥಿಕ ನೆರವನ್ನು ರೈತರಿಗೆ ನೀಡಬೇಕು, ಹಾಗಾಗಿ ಇನ್‌ಪುಟ್ ಸಬ್ಸಿಡಿ ಮೊತ್ತವನ್ನು ಪರಿಷ್ಕರಣೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಅದರಂತೆ ಇಂದು ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಹೆಚ್ಚುವರಿ ಪರಿಹಾರವಾಗಿ 1135.49 ಕೋಟಿ ಹಣವನ್ನು ಮುಂದಿನ 48 ಗಂಟೆಗಳ ಒಳಗಾಗಿ ಎಲ್ಲ ರೈತರ ಖಾತೆಗೆ ಕಂದಾಯ ಇಲಾಖೆ ಜಮಾ ಮಾಡುತ್ತದೆ. ಒಟ್ಟಾರೆ ಇವರೆಗೆ ಪ್ರವಾಹದಿಂದ ಉಂಟಾದ ಬೆಳೆ ಹಾನಿಗೆ 2388.39 ಕೋಟಿ ಹಣವನ್ನು ರೈತರಿಗೆ ನೀಡಲಾಗಿದೆ” ಎಂದು ಅಶೋಕ್ ಹೇಳಿದರು.

ಕೆಳಗಿನ ಎಲ್ಲವೂ ಪ್ರತಿ ಹೆಕ್ಟೇರ್ ಗೆ
ಮಳೆಯಾಶ್ರಿತ ಬೆಳೆ
ಮಾರ್ಗಸೂಚಿ ದರ – 6,800
ಹೆಚ್ಚುವರಿ ದರ – 6,800
ಪರಿಷ್ಕೃತ ದರ – 13,600

ನೀರಾವರಿ ಬೆಳೆ
ಮಾರ್ಗಸೂಚಿ ದರ – 13,500 ಹೆಚ್ಚುವರಿ ದರ – 11,500
ಪರಿಷ್ಕೃತ ದರ – 25,000

Advertisement

ಬಹುವಾರ್ಷಿಕ ಬೆಳೆ
ಮಾರ್ಗಸೂಚಿ ದರ – 18,000
ಹೆಚ್ಚುವರಿ ದರ – 10,000
ಪರಿಷ್ಕೃತ ದರ – 28,000

Advertisement

Udayavani is now on Telegram. Click here to join our channel and stay updated with the latest news.

Next