Advertisement

ಬೆಳೆಯ ಪರಾಗಸರ್ಶಕ್ಕಾದ್ರೂ ಜೇನು ಸಾಕಿ

02:40 PM Jan 31, 2021 | Team Udayavani |

ಹುಳಿಯಾರು: ಜೇನು ಹುಳಗಳು ಗಿಡದಿಂದ ಗಿಡಕ್ಕೆ ಹಾರುತ್ತ ಪರಾಗಸ್ಪರ್ಶ ಮಾಡುವುದರಿಂದ ತೋಟದ ಬೆಳೆಗಳ ಇಳುವರಿ ಹೆಚ್ಚಲಿದೆ. ಹಾಗಾಗಿ ಜೇನು ತುಪ್ಪದ ಆದಾಯಕ್ಕಿಂತ ತಮ್ಮ ತೋಟದ ಆದಾಯ ಹೆಚ್ಚು ಮಾಡಿಕೊಳ್ಳಲು ಜೇನು ಸಾಕಿ ಎಂದು ಹುಳಿಯಾರು ಹೋಬಳಿಯ ಹವ್ಯಾಸಿ ಜೇನು ಕೃಷಿ ಪ್ರಚಾರಕ ತೊರೆಮನೆ ಪ್ರಭಾಕರ್‌ ಸಲಹೆ ನೀಡಿದರು.

Advertisement

ಹುಳಿಯಾರು ಸಮೀಪದ ಕೆ.ಸಿ.ಪಾಳ್ಯದಲ್ಲಿ ಜೇನು ಸಾಕಾಣಿಕೆಯ ಬಗ್ಗೆ ಮಾಹಿತಿ ನೀಡಿದ ಅವರು,ಹೆಜ್ಜೆàನು, ಕೋಲುಜೇನು, ತುಡುವೆ ಜೇನು ಹಾಗೂ ಸೊಳ್ಳೆ ಜೇನು ಹೀಗೆ ವಿವಿಧ ಜೇನು ಪ್ರಭೇದಗಳಿವೆ. ಇವುಗಳಲ್ಲಿ ಹೆಜ್ಜೆನು, ಕೋಲು ಜೇನು ಸಾಕಲು ಸಾಧ್ಯವಾಗುವುದಿಲ್ಲ. ತುಡುವೆ ಜೇನನ್ನು ಸಾಕಬಹುದು. ವಿವಿಧೆಡೆ ಜೇನು ಸಾಕಾಣಿಕೆಯ ತರಬೇತಿ ಸಹ ನೀಡಲಾಗುತ್ತದೆ. ತೋಟಗಾರಿಕೆ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಜೇನು ಪೆಟ್ಟಿಗೆ ಹಾಗೂ ಜೇನು ಕುಟುಂಬ ಕೊಡುತ್ತಾರೆ ಎಂದರು.

ಇದನ್ನೂ ಓದಿ:ಇಂತಹ ಕೆಟ್ಟ ಸರ್ಕಾರವನ್ನು ನೋಡಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಧ್ರುವನಾರಾಯಣ್ ವಾಗ್ದಾಳಿ

ಜೇನು ತುಪ್ಪಕ್ಕೆ ಭಾರಿ ಬೇಡಿಕೆ ಇದ್ದು 1 ಕೆ.ಜಿ.ಗೆ 400 ರೂ. ಗಳಿಂದ 600 ರೂ. ವರೆಗೆ ದರ ಇದೆ. ಇದರಿಂದ ರೈತರ ಆದಾಯ ಜಾಸ್ತಿಯಾಗಲಿದೆ. ಹಾಗಾಗಿ ಜೇನು ಕೃಷಿಯನ್ನು ಕೃಷಿಕರು ಉಪಕಸುಬಾಗಿ ಮಾಡಬಹುದಾಗಿದೆ. ಜೇನು ಸಾಕಾಣಿಕೆ ಮಾಡುವುದರಿಂದ ರೈತರ ಆದಾಯ ಜಾಸ್ತಿಯಾಗುವುದರ ಜತೆಗೆ ಪರಿಸರ ಉತ್ತಮವಾಗುತ್ತದೆ. ಜೇನು ಹುಳಗಳಲ್ಲಿ ರಾಣಿ ಹುಳ, ಗಂಡು ಹುಳ ಹಾಗೂ ಕೆಲಸದ ಹುಳ ಎಂದು ಒಟ್ಟು 3 ಜಾತಿಯ ಹುಳಗಳಿವೆ ಎಂದು ವಿವರಸಿದರು.  ಚನ್ನಬಸವಯ್ಯ, ಮೊಬೈಲ್‌ ಸನತ್‌, ಕೆ.ಬಿ.ಚಂದ್ರಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next