ಮಧುಗಿರಿ: ಕಳೆದ ಬಾರಿ ಮಧುಗಿರಿಯಲ್ಲಿ ಪ್ರಥಮಬಾರಿಗೆ ರಾಗಿ ಖರೀದಿ ಕೇಂದ್ರ ತೆರದ ಪರಿಣಾಮ ಸಾವಿರಾರು ರೈತರು ನಷ್ಟದಿಂದ ಪಾರಾಗಿದ್ದರು. ಆದರೆ ಈ ಬಾರಿ ಇಂಥ ಬೆಂಬಲ ಬೆಲೆ ನೀಡುವ ರಾಗಿ ಅಥವಾ ಇತರೆ ಬೆಳೆಯನ್ನು ಖರೀದಿ ಕೇಂದ್ರವನ್ನು ಸರ್ಕಾರ ತೆರೆಯಲು ಮುಂದಾಗಬೇಕಿದೆ.
ಸರ್ಕಾರಈಗಾಗಲೇಜಾರಿಗೆ ತರಲುಹೊರಟಿರುವ ಭೂ ಸುಧಾರಣೆ, ಎಪಿಎಂಸಿ, ಬೀಜ ಹಾಗೂ ವಿದ್ಯುತ್ ಕಾಯ್ದೆಯಿಂದ ರೈತರು ಭಯಭೀತರಾಗಿದ್ದು, ರೈತ ರಿಂದ ಹೋರಾಟ ನಡೆಯುತ್ತಿದೆ. ಈ ಬಾರಿ ಉತ್ತಮಮಳೆಯಿಂದಾಗಿ ಬಯಲುಸೀಮೆಯ ರೈತರು ಉತ್ತಮಬೆಳೆಯ ನಿರೀಕ್ಷೆಯಲ್ಲಿದ್ದರು.
ರೈತ ನೆರವಿಗೆ ಬರಬೇಕು: ಆದರೆ ಅತಿವೃಷ್ಟಿಯಿಂದಬಯಲು ಸೀಮೆ ಬೆಳೆಗಳಾದ ರಾಗಿ, ಶೇಂಗಾ ಭೂಮಿಯಲ್ಲೆ ಮೊಳಕೆಯೊಡೆಯಲು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು. ಈಗಾಗಲೇ ಮಧುಗಿರಿಯಲ್ಲಿ ಖಾಸಗಿ ವರ್ತಕರಿಂದ ಶೇಂಗಾ ಖರೀದಿಯು ನಡೆಯುತ್ತಿದ್ದು, ದಲ್ಲಾಳಿಗಳ ಕಾಟವೂ ಮುಂದುವರಿದಿದೆ. ಈ ಕಾರ್ಯ ದಿಂದ ರೈತರು ನಷ್ಟ ಅನುಭವಿಸುತ್ತಿದ್ದರೂ ಎಪಿಎಂಸಿಗೆ ಆಯ್ಕೆ ಯಾದ ಚುನಾಯಿತ ರೈತರು ಅತ್ತ ಕಡೆ ತಲೆ ಹಾಕುತ್ತಿಲ್ಲ.
ಈ ಬಾರಿ ಖರೀದಿ ಕೇಂದ್ರವಿಲ್ಲ: ಈ ಬಾರಿ ಖರೀದಿ ಕೇಂದ್ರವಿಲ್ಲವೆಂದು ಈಗಾಗಲೇ ಸಿಎಂ ಸ್ಪಷ್ಟಪಡಿಸಿದ್ದು, ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಚೆನ್ನಾ ನಾಯಕ್ ಮಾತ್ರಈ ಬಗ್ಗೆ ವರ್ಷಾಂತ್ಯದಲ್ಲಿ ಇಲಾಖೆ ತೀರ್ಮಾನ ಕೈ ಗೊಳ್ಳುವುದಾಗಿ ಹೇಳುತ್ತಾರೆ. ಆದರೆ ವಾಸ್ತವವಾಗಿ ಈ ಬಾರಿ ಎಲ್ಲೂ ರೈತರಿಂದ ಸರ್ಕಾರ ರೈತ ಬೆಳೆದ ಯಾವ ಬೆಳೆಯನ್ನೂ ಖರೀದಿ ಸುವುದಿಲ್ಲ ಎಂಬ ಮಾಹಿತಿಯಿದ್ದು ರೈತರಿಗೆ ಆತಂಕ ಉಂಟು ಮಾಡಿದೆ.ರೈತ ಸಂಘಆಕ್ರೋಶ:ಕಳೆದ ಬಾರಿ ಕ್ವಿಂಟಲ್‌ಗೆ3150ರೂ. ಬೆಂಬಲ ಬೆಲೆ ನೀಡಿ ರಾಗಿಯನ್ನು ಸರ್ಕಾರ ಖರೀದಿಸಿತ್ತು. ಇದರಿಂದಾಗಿ ರೈತರು ಸರಿಯಾದ ಬೆಲೆಸಿಕ್ಕ ಖುಷಿಯಲ್ಲಿದ್ದರು. ಆದರೆ ಈ ಬಾರಿ ಖರೀದಿ ಕೇಂದ್ರವನ್ನು ಸರ್ಕಾರ ಆರಂಭಿಸಿದರಿರುವುದು ರೈತ ವಿರೋಧಿಯಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಸಮುದಾಯ ಆಗ್ರಹ: ತಾಲೂಕಿನಲ್ಲಿ 16 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಕೃಷಿ ಮಾಡಿರುವ ರೈತರು ಪ್ರಮುಖ ಬೆಳೆಗಳಾದ ರಾಗಿ, ಶೇಂಗಾ, ಭತ್ತ,ಹತ್ತಿ, ಜೋಳ, ಬೆಳೆದಿದ್ದಾರೆ. ಇದು ಕಳೆದ ಬಾರಿಗಿಂತ ಹೆಚ್ಚಾಗಿದ್ದು, ಈಗ ನಿರಂತರ ಮಳೆಯಿಂದಾಗಿರೈತರು ಕಂಗಾಲಾಗಿದ್ದಾರೆ. ರೈತರೊಂದಿಗೆ ಚೆಲ್ಲಾಟವಾಡುವ ಮಳೆ ಎಂದೂ ರೈತರಿಗೆ ಸಮರ್ಥವಾಗಿ ಮಳೆ ಸುರಿಸಿಲ್ಲ. ಇಂಥ ಸಂದರ್ಭದಲ್ಲಿ ಖರೀದಿ ಕೇಂದ್ರವನ್ನು ತರೆಯದಿರುವ ಸರ್ಕಾರದ ನಿರ್ಧಾರ ಸರಿಯಾದ ಕ್ರಮವಲ್ಲ. ಕಳೆದ ಬಾರಿಯಂತೆ ರೈತರಿಗೆ ಖರೀದಿ ಕೇಂದ್ರ ತೆರೆಯುವಂತೆ ರೈತ ಸಮುದಾಯ ಒತ್ತಾಯಿಸುತ್ತಿದೆ.
ಕಳೆದ ಬಾರಿ 1,347ಕ್ವಿಂಟಲ್ ರಾಗಿ ಖರೀದಿ : ತಾಲೂಕಿನಲ್ಲಿ 1347 ಕ್ವಿಂಟಲ್ ರಾಗಿಯನ್ನುಖರೀದಿಸಿರುವ ಸರ್ಕಾರ 79 ರೈತರಖಾತೆಗಳಿಗೆ ಕ್ವಿಂಟಲ್‌ಗೆ 3150 ರೂ. ನಂತೆ ಒಟ್ಟು 42.43ಲಕ್ಷ ಹಣವನ್ನುಖಾತೆಗೆ ಹಾಕಿದ್ದು, ಯಾವುದೇ ಬಾಕಿಯಿಲ್ಲವೆಂದು ತಾಲೂಕು ಆಹಾರ ನಿರೀಕ್ಷಕ ಗಣೇಶ್‌ಮಾಹಿತಿ ನೀಡಿದ್ದಾರೆ. ಈ ಬಾರಿಬೆಂಬಲಬೆಲೆ ಹಾಗೂಖರೀದಿ ಕೇಂದ್ರದಬಗ್ಗೆ ಸರ್ಕಾರದಿಂದ ಯಾವುದೇ ಆದೇಶವಿಲ್ಲ. ಹಾಗಾಗಿ ಸರ್ಕಾರದ ನಿರ್ಧಾರದ ಮೇಲೆ ನಿಂತಿದ್ದು,ಸರ್ಕಾರದಿಂದ ಹಸಿರು ನಿಶಾನೆ ದೊರೆತರೆತಾಲೂಕಿನಲ್ಲೂಖರೀದಿ ಕೇಂದ್ರ ತೆರೆಯುವುದಾಗಿ ತಿಳಿಸಿದರು.
ಈಗಿನ ಸರ್ಕಾರ ರೈತರ ಮೇಲೆ ನಿರಂತರ ಬರೆ ಎಳೆಯುತ್ತಿದ್ದು, ಅದುಖರೀದಿ ಕೇಂದ್ರ ಹಾಗೂ ಬೆಂಬಲ ಬೆಲೆ ತಡೆಯುವ ತನಕ ಬಂದು ನಿಂತಿದೆ. ಅಕಾಲಿಕ ಮಳೆಯಿಂದಾಗಿ ರೈತರು ನಿರಂತರ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲೇ ಭೂ ಸುಧಾರಣೆ, ಎಪಿಎಂಸಿ ಹಾಗೂ ಬೀಜ ಕಾಯ್ದೆ ತಿದ್ದುಪಡಿಗೆ ಮುಂದಾಗಿ ರೈತರ ಜೀವನ ಕೊನೆಗೊಳಿಸಲು ಮುಂದಾಗಿದೆ. ಇನ್ನೂ ಬೆಂಬಲ ಬೆಲೆ,ಖರೀದಿ ಕೇಂದ್ರ ಆರಂಭಿಸದಿದ್ದರೆ ಸಣ್ಣ ರೈತರ ಪಾಡುಬೆಂಕಿಗೆ ಬಿದ್ದ ಹುಳುವಿನಂತಾಗುತ್ತದೆ. ಸರ್ಕಾರ ಬೇಗ ಬೆಂಬಲ ಬೆಲೆ ನೀಡಿ,ಖರೀದಿ ಕೇಂದ್ರ ಸ್ಥಾಪನೆಗೆ ಮುಂದಾಗಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ.
– ಆನಂದ ಪಟೇಲ್, ಅಧ್ಯಕ್ಷರು, ಜಿಲ್ಲಾ ರೈತಸಂಘ ಹಾಗೂ ಹಸಿರು ಸೇನೆ.
–ಮಧುಗಿರಿ ಸತೀಶ್