Advertisement

ಬೆಳೆ ನಷ್ಟ: ಗದ್ದೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೈತ

12:41 PM Jun 18, 2018 | |

ಮೈಸೂರು: ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಜಲಾಶಯಗಳ ಭರ್ತಿಗೆ ಕಾರಣವಾದರೆ, ಮತ್ತೂಂದೆಡೆ ರೈತರು ಬೆಳೆದ ಬೆಳೆಗಳು ವರುಣನ ಅಬ್ಬರಕ್ಕೆ ನಾಶವಾಗುವ ಮೂಲಕ ಅನ್ನದಾತನ ಬದುಕು ಬೀದಿಗೆ ಬಂದಂತಾಗಿದೆ. ಜಿಲ್ಲೆಯಲ್ಲಿ ಸುರಿದ ಮಳೆಯ ಆರ್ಭಟಕ್ಕೆ ಉಂಟಾದ ಅನಾಹುತದ ಪರಿಣಾಮ ಜಿಲ್ಲೆಯ ರೈತನೊಬ್ಬ ಆತ್ಮಹತ್ಯೆ ದಾರಿ ಹಿಡಿದಿದ್ದ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ. 

Advertisement

ನಂಜನಗೂಡು ತಾಲೂಕಿನ ಕುಪ್ಪರಹಳ್ಳಿ ಗ್ರಾಮದ ನಿವಾಸಿ ಬಸವಯ್ಯ ಆತ್ಮಹತ್ಯೆಗೆ ಯತ್ನಿಸಿದ ರೈತ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಜಿಲ್ಲೆಯ ಕಬಿನಿ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿಗೆ ಅಂದಾಜು 38 ಸಾವಿರ ಕ್ಯೂಸೆಕ್‌ ನೀರು ಬಿಡಲಾಗಿತ್ತು.

ಹೀಗಾಗಿ ನದಿ ನೀರಿನ ಪ್ರಮಾಣ ಅಪಾಯದ ಮಟ್ಟವನ್ನು ಮೀರಿ ಮೈದುಂಬಿಗೊಂಡು ಹರಿಯಲು ಪ್ರಾರಂಭಿಸಿದ್ದು, ಇದರ ಪರಿಣಾಮ ನದಿಯ ಅಕ್ಕಪಕ್ಕದ ಗದ್ದೆಗಳು ಸಹ ನೀರಿನಲ್ಲಿ ಜಾಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ರೈತ ಬಸವಯ್ಯ ಅವರ ಗದ್ದೆಯಲ್ಲಿ ಬೆಳೆದಿದ್ದ ಭತ್ತ ಸಹ ನೀರು ಪಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಗೆ ಕಾರಣವಾಗಿದೆ. 

ಗದ್ದೆಯಲ್ಲಿ ಬೆಳೆದಿದ್ದ ಬೆಳೆಯನ್ನು ಮಾರಾಟ ಮಾಡಿ ತನ್ನ ನಾಲ್ಕು ಲಕ್ಷ ರೂ. ಸಾಲವನ್ನು ತೀರಿಸುವ ಆಶಾಭಾವನೆ ಬಸವಯ್ಯ ಅವರದ್ದಾಗಿತ್ತು. ಆದರೆ ಏಕಾಏಕಿ ಸುರಿದ ಮಳೆಯಿಂದಾಗಿ ಗದ್ದೆಯಲ್ಲಿ ಬೆಳೆದು ನಿಂತಿದ್ದ ಬೆಳೆ ನಾಶವಾದ ಕಾರಣಕ್ಕೆ ಮನನೊಂದ ಬಸವಯ್ಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅದರಂತೆ ತನ್ನ ಗದ್ದೆಯಲ್ಲಿ ಬೆಳೆದು ನಿಂತಿದ್ದ ಬೆಳೆ ನೀರುಪಾಲಾಗಿರುವಂತೆ ತಾನು ಸಹ ಅದೇ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಅದೃಷ್ಟವಾಶಾತ್‌ ಇದನ್ನು ಗಮನಿಸಿದ ಆತನ ಮಕ್ಕಳು ಕೂಡಲೇ ರಕ್ಷಿಸಿ, ಸಮಾಧಾನಪಡಿಸಿದ್ದಾರೆ.

Advertisement

ಈ ನಡುವೆ ರೈತ ಬಸವಯ್ಯ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಅಕಾರಿಗಳು, ಗ್ರಾಮಕ್ಕೆ ಹಾಗೂ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಅದೇ ರೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬಸವಯ್ಯ ನಿವಾಸಕ್ಕೂ ಭೇಟಿ ನೀಡಿದ ಮೈಸೂರು ಉಪವಿಭಾಗಕಾರಿ ಶಿವೇಗೌಡ, ಬೆಳೆ ನಷ್ಟದ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next