ವಿಜಯಪುರ:ಜಿಲ್ಲೆಯ ಭೀಮಾ ನದಿ ಪಾತ್ರ ಹಳ್ಳಿಗಳಲ್ಲಿ ಬೇವಿನ ಮರಗಳ ಎಲೆಗಳನ್ನು ತಿನ್ನುವ ವಿಚಿತ್ರ ಕೀಟಗಳು ಪತ್ತೆಯಾಗಿವೆ.
ಇದರಿಂದಾಗಿ ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದ್ದು ಈ ಕೀಟಗಳ ನಿಯಂತ್ರಣ ಹೇಗೆಂಬ ಚಿಂತೆಯಲ್ಲಿ ರೈತರು ಕಂಗಾಲಾಗಿದ್ದಾರೆ.
ಇಂಡಿ, ಚಡಚಣ ತಾಲೂಕುಗಳ ಲಚ್ಯಾಣ ಹಾಗೂ ಪಡನೂರು ಗ್ರಾಮಗಳ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ಈ ಕೀಟಗಳು ಕಾಣಿಸಿಕೊಂಡಿದ್ದು, ವಿಷಕಾರಕ ಬೇವಿನ ಮರದ ಎಲೆಗಳನ್ನು ತಿಂದು ಹಾಕುತ್ತಿವೆ.
ಈ ವಿಚಿತ್ರ ಕೀಟಗಳು, ಬೆಳೆದು ನಿಂತಿರುವ ಕಬ್ಬು ಹಾಗೂ ಲಿಂಬೆ, ದ್ರಾಕ್ಷಿ ಸೇರಿದಂತೆ ವಿವಿಧ ಬೆಳೆಗೆ ಹಾನಿ ಮಾಡುವ ಭೀತಿ ಕೂಡಾ ಇದೀಗ ಎದುರಾಗಿದೆ.
ತಕ್ಷಣವೇ ಜಿಲ್ಲಾಡಳಿತ ಹಾಗೂ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ಬೇವಿನ ಎಲೆ ಭಕ್ಷಕ ಕೀಟಗಳ ಹಾವಳಿ ನಿಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.