ಬಂಗಾರಪೇಟೆ: ಕಾಮಸಮುದ್ರ ಹೋಬಳಿಯ ದೋಣಿ ಮಡಗು ಪಂಚಾಯತಿಯ ಮಲ್ಲೇಶನ ಪಾಳ್ಯದ ಕುಗ್ರಾಮ ದಲ್ಲಿ ಭಾನುವಾರ ನಾಲ್ಕು ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸಿದೆ.
ಆಂಧ್ರ ಮತ್ತು ತಮಿಳುನಾಡಿನ ಗಡಿ ಭಾಗದಲ್ಲಿರುವ ಈ ಗ್ರಾಮವು ಕಾಡಿನ ಭಾಗಕ್ಕೆ ಅಂಟಿಕೊಂಡಿರುವ ಕಾರಣ ಈ ಭಾಗದ ಗ್ರಾಮಗಳಲ್ಲಿ ನಿರಂತರವಾಗಿ ಕಾಡಾನೆಗಳು ಆಹಾರ ಹುಡುಕಿಕೊಂಡು ರೈತರ ಹೊಲಕ್ಕೆ ನುಗ್ಗಿ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಕಳೆದ ತಿಂಗಳು ಇದೇ ಗ್ರಾಮದ ತಿಮ್ಮ ರಾಯಪ್ಪ ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟಿದ್ದರು.
ಈ ಗ್ರಾಮದ ರೈತರು ಆನೆಯ ನಿರಂತರ ದಾಳಿಯಿಂದ ಹೈರಾಣಾಗಿ ಶಾಶ್ವತ ಪರಿಹಾಕ್ಕಾಗಿ ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ. ಈ ಗ್ರಾಮದ ಆನೆ ದಾಳಿಯಿಂದ ಬೆಳೆ ನಾಶ ಹೊಂದಿದ ರೈತ ಸುರೇಶ್ ಮಾತನಾಡಿ, ನಾಲ್ಕು ಆನೆಗಳು ನಮ್ಮ ಹೊಲಗೆಳಿಗೆ ದಾಳಿ ಮಾಡಿ ಒಂದೂವರೆ ಎಕರೆಯಲ್ಲಿ ಬೆಳೆದಿ ರುವ ರಾಗಿ, ಅರ್ಧ ಎಕರೆಯಲ್ಲಿ ಬೆಳೆದಿರುವ ಹುರುಳಿ ಪಪ್ಪಯ ಮತ್ತು ಬಾಳೆಗಿಡಗಳನ್ನು ನಾಶ ಮಾಡಿವೆ. ನೀರಾ ವರಿಗೆ ಬಳಸಿರುವ ನೀರಿನ ಪೈಪುಗಳನ್ನು ನಾಶ ಮಾಡಿ ಸಾವಿರಾರು ರೂ. ನಷ್ಟ ಉಂಟು ಮಾಡಿದೆ.
ಇದನ್ನೂ ಓದಿ:“ಸೊಸೈಟಿಯ ಅಭಿವೃದ್ಧಿಗೆ ಎಲ್ಲರ ಸಹಕಾರ ಸದಾ ಇರಲಿ”
ಇದೇ ರೀತಿ ಪದೇ ಪದೆ ಆಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದು ಹೊರಡು ತ್ತಾರೆ. ಇದುವರೆಗೂ ನಮಗೆ ಬೆಳೆ ನಷ್ಟದ ಪರಿಹಾರ ನೀಡಿಲ್ಲ ಎಂದರು. ರಾತ್ರಿ ಸಮಯದಲ್ಲಿ ಹೊಲಗಳಿಗೆ ಹೋಗಲೂ ಭಯವಾಗುತ್ತಿದೆ. ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರ ಕಾಡಾನೆಗಳ ಹಾವಳಿ ತಡೆದು ಶಾಶ್ವತ ಪರಿಹಾರ ಒದಗಿಸ ಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತರಾದ ಮುನಿಯಪ್ಪ, ಲೋಕೇಶ್, ರಾಜು, ರಾಜು ಎಂ, ರಾಜಪ್ಪ ಹಾಜರಿದ್ದರು.