Advertisement

Chikkamagaluru: ಬೆಳೆ ನಾಶ; ಮನನೊಂದು ರೈತ ತನ್ನ ಹೊಲದಲ್ಲೇ ಆತ್ಮಹತ್ಯೆ

10:16 AM Aug 31, 2023 | Team Udayavani |

ಚಿಕ್ಕಮಗಳೂರು: ಮಳೆಯಿಲ್ಲದೆ ಈರುಳ್ಳಿ ಬೆಳೆ ನಾಶಗೊಂಡ ಹಿನ್ನೆಲೆ ತನ್ನ ಹೊಲದಲ್ಲೇ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ನಡೆದಿದೆ.

Advertisement

ಗಿರಿಯಾಪುರ ಗ್ರಾಮದ ಸತೀಶ್ (49) ನೇಣಿಗೆ ಶರಣಾದ ರೈತ ಎಂದು ಗುರುತಿಸಲಾಗಿದೆ.

ಮಳೆ ನಿರೀಕ್ಷೆಯಲ್ಲಿದ್ದ ರೈತ ಸತೀಶ್ ಸಾಲ ಮಾಡಿ ತನ್ನ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಮಳೆ ಬಾರದ ಹಿನ್ನೆಲೆ ಉಂಟಾದ ಬರಕ್ಕೆ ಈರುಳ್ಳಿ ಬೆಳೆ ಸಂಪೂರ್ಣ ಒಣಗಿ ಹೋಗಿವೆ. ಇದರಿಂದ ಮನನೊಂದು ತನ್ನ ಜಮೀನಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next