Advertisement

ಬೆಳೆ ಹಾನಿ ವರದಿಗೆ ಸೂಚನೆ: ಶೋಭಾ ಕರಂದ್ಲಾಜೆ

02:06 AM Nov 20, 2021 | Team Udayavani |

ಉಡುಪಿ: ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಲು ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಮಳೆಯ ಪ್ರಮಾಣ ಹೆಚ್ಚಿದೆ. ನಿರೀಕ್ಷೆ ಮಾಡದ ರೀತಿಯಲ್ಲಿ ಎಲ್ಲ ರಾಜ್ಯಗಳಲ್ಲಿ ಮಳೆಯಾಗುತ್ತಿದೆ, ಭತ್ತ, ರಾಗಿ, ಜೋಳ ಮೊದಲಾದ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗುತ್ತಿವೆ. ಭತ್ತ ಒಣಗಿಸಲಾಗದ ಪರಿಸ್ಥಿತಿ ಎದುರಾಗಿದೆ. ಕೃಷಿ ಮೂಲಸೌಕರ್ಯ ನಿಧಿಯಿಂದ ಅಗತ್ಯ ಯಂತ್ರೋಪಕಣ ಖರೀದಿಗೆ ಕೇಂದ್ರ ಸರಕಾರ ವ್ಯವಸ್ಥೆ ಮಾಡಲಿದೆ. ವೇರ್‌ ಹೌಸ್‌ ನಿರ್ಮಾಣಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು. ಹೊಸ ತಂತ್ರಜ್ಞಾನ ಬಳಸಿಕೊಳ್ಳಲು ರಾಜ್ಯ ಸರಕಾರಕ್ಕೆ ಸೂಚನೆ ಕೊಡಲಾಗಿದೆ ಎಂದರು.

ಬಿಟ್‌ ಕಾಯಿನ್‌ ಬಗ್ಗೆ ಎಲ್ಲ ರಾಷ್ಟ್ರಗಳು ಯೋಚಿಸಬೇಕಾಗಿದೆ. ಬಿಟ್‌ ಕಾಯಿನ್‌ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಮನಿ ಟ್ರಾಫಿಕಿಂಗ್‌ ಮತ್ತು ಭಯೋತ್ಪಾದನೆಗೆ ಈ ಹಣ ಬಳಕೆ ಆಗದಂತೆ ಎಚ್ಚರ ವಹಿಸಬೇಕು. ದೇಶದ್ರೋಹಿ ಗಳ ಕೈಗೆ ಬಿಟ್‌ ಕಾಯಿನ್‌ ವ್ಯವಸ್ಥೆ ಹೋಗಬಾರದು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಧಾನಿ ಮೋದಿ ಈ ಕುರಿತು ಮಾತನಾಡಿದ್ದಾರೆ. ಬಿಟ್‌ ಕಾಯಿನ್‌ ಕಣ್ಣಿಗೆ ಕಾಣಿಸದ ಹಣ. ಬಿಟ್‌ ಕಾಯಿನ್‌ ನಿಷೇಧ ಮಾಡಬೇಕೆ ಅಥಾವಾ ಕ್ರಮಬದ್ಧಗೊಳಿಸಬೇಕೆ ಎಂಬ ಬಗ್ಗೆ ಪ್ರಧಾನಿ ಮೋದಿ ಮುಂಚೂಣಿಯಲ್ಲಿ ನಿಂತು ಎಲ್ಲ ರಾಷ್ಟ್ರಗಳ ಪ್ರಮುಖರ ಜತೆ ಚರ್ಚೆ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಟೀಮ್‌ ಇಂಡಿಯಾ ಸರಣಿ ಜಯಭೇರಿ

ಯಾರೂ ಸಂಪರ್ಕಿಸಿಲ್ಲ
ಬೇರೆ ಬೇರೆ ಸಂದರ್ಭಗಳಲ್ಲಿ ಅಭಿವೃದ್ಧಿ ವಿಚಾರ ಹಾಗೂ ಸರಕಾರದ ಕಾರ್ಯಗಳ ಕುರಿತಾಗಿ ಹಲವರು ನನ್ನನ್ನು ಭೇಟಿ ಮಾಡುತ್ತಿರುತ್ತಾರೆ. ಆದರೆ ಬಿಜೆಪಿಗೆ ಸೇರುವ ವಿಚಾರವಾಗಿ ಜಿಲ್ಲೆಯ ಯಾವುದೇ ಕಾಂಗ್ರೆಸ್‌ ನಾಯಕರು ನನ್ನನ್ನು ಸಂಪರ್ಕಿಸಿಲ್ಲ ಎಂದು ಸುನಿಲ್‌ ಹೇಳಿದರು.

Advertisement

ಬಿಟ್‌ ಕಾಯಿನ್‌ ದೀಪಾವಳಿ ಬಳಿಕ ಹೊಡೆದ ಪಟಾಕಿ!
ಬಿಟ್‌ ಕಾಯಿನ್‌ ವಿಚಾರವಾಗಿ ಹಗ್ಗ ತೋರಿಸಿ ಹಾವು ಇದೆ ಎನ್ನುವ ಹುನ್ನಾರ ಕಾಂಗ್ರೆಸ್‌ನದು. ದೀಪಾವಳಿಯಲ್ಲಿ ಪಟಾಕಿ ಹೊಡೆಯಲು ಅವಕಾಶ ನೀಡಿಲ್ಲ ಎನ್ನುವ ಕಾರಣಕ್ಕೆ ದೀಪಾವಳಿಯ ಅನಂತರ ಪಟಾಕಿ ಹೊಡೆದಿದ್ದಾರೆ. ಇದು ಶಬ್ದ ಮಾಡಿದ್ದು ಬಿಟ್ಟರೆ ಬೇರೇನೂ ಇಲ್ಲ. ಬಿಟ್‌ ಕಾಯಿನ್‌ ಕಾಂಗ್ರೆಸ್‌ನ ಕಾಲು ಸುತ್ತಿಕೊಳ್ಳಲಿದೆ. ಅಧಿವೇಶನದಲ್ಲಿ ನಾವು ಇದಕ್ಕೆ ಸಮರ್ಥ ಉತ್ತರ ನೀಡಲಿದ್ದೇವೆ. ಬಿಟ್‌ ಕಾಯಿನ್‌ ವಿಷಯದಲ್ಲಿ ಯಾರ್ಯಾರು ಡ್ರಗ್ಸ್‌ ಪೆಡ್ಲರ್‌ಗಳು ಕಾಂಗ್ರೆಸ್‌ ಯುವ ನಾಯಕ ರೊಂದಿಗೆ ಇದ್ದಾರೆ ಎಂಬುದು ಗೊತ್ತಿದೆ. ಈ ಬಗ್ಗೆ ತನಿಖೆ ಮಾಡುತ್ತೇವೆ ಮತ್ತು ಯಾವುದನ್ನು ಮುಚ್ಚಿಡುವುದಿಲ್ಲ ಎಂದು ಸಚಿವ ವಿ. ಸುನಿಲ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next