Advertisement

8,483 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ

06:50 PM Oct 17, 2020 | Suhan S |

ಚಿತ್ರದುರ್ಗ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿತೋಟಗಾರಿಕೆ ಹಾಗೂ ಕೃಷಿ ಬೆಳೆಸೇರಿದಂತೆ ಒಟ್ಟು 8483.59 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಮಾರ್ಗಸೂಚಿ ಪ್ರಕಾರ ರೂ.10.68 ಕೋಟಿ ಪರಿಹಾರ ಒದಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದ್ದಾರೆ.

Advertisement

ತೋಟಗಾರಿಕೆ ಬೆಳೆಯಲ್ಲಿ 7302.07 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಚಿತ್ರದುರ್ಗ ತಾಲೂಕಿನಲ್ಲಿ 3289, ಚಳ್ಳಕೆರೆ 2648, ಹಿರಿಯೂರು 1140, ಹೊಳಲ್ಕೆರೆ 201 ಹಾಗೂ ಮೊಳಕಾಲ್ಮೂರಿನಲ್ಲಿ 3.26 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಮಾರ್ಗಸೂಚಿಯಂತೆ ಸರ್ಕಾರದಿಂದ ರೂ. 9.87 ಕೋಟಿ ರೂ. ದೊರೆಯಬೇಕಿದೆ. ಕೃಷಿ ಬೆಳೆಗೆ ಸಂಬಂಧಿಸಿದಂತೆ 1181 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ಹಾನಿಯಾಗಿದೆ. ಮಾರ್ಗಸೂಚಿಯಂತೆ ರೂ. 80.66 ಲಕ್ಷ ಪರಿಹಾರ ನೀಡಬೇಕಿದೆ.

8 ಜೀವಹಾನಿ ಪ್ರಕರಣ: ಜಿಲ್ಲೆಯಲ್ಲಿ ಹೆಚ್ಚಿನ ಗಾಳಿ ಮಳೆಯಿಂದಾಗಿ, ಸಿಡಿಲು ಬಡಿದು, ಮಳೆ ನೀರಿನ ಹಳ್ಳದಲ್ಲಿ ಕೊಚ್ಚಿ ಹೋಗಿ, ಮಳೆಯಿಂದಾಗಿ ವಾಸದ ಮನೆ ಕುಸಿದಿರುವುದು ಸೇರಿದಂತೆ ಪ್ರಕೃತಿ ವಿಕೋಪದಿಂದಾಗಿ ಚಿತ್ರದುರ್ಗ 01, ಚಳ್ಳಕೆರೆ 01, ಹೊಸದುರ್ಗ 04 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 2 ಸೇರಿದಂತೆ ಜಿಲ್ಲೆಯಲ್ಲಿ 8 ಜೀವಹಾನಿ ಪ್ರಕರಣಗಳು ಸಂಭವಿಸಿವೆ. ಜೀವಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಇದುವರೆಗೂ ರೂ.25 ಲಕ್ಷ ಪರಿಹಾರ ನೀಡಲಾಗಿದೆ.

ಜಾನುವಾರುಗಳ ಹಾನಿ: ಪ್ರಕೃತಿ ವಿಕೋಪದಿಂದಾಗಿ 7 ದೊಡ್ಡ ಜಾನುವಾರುಗಳು ಹಾಗೂ 19 ಚಿಕ್ಕಜಾನುವಾರುಗಳುಹಾನಿಗೀಡಾಗಿವೆ. ದೊಡ್ಡ ಜಾನುವಾರುಗಳಹಾನಿಗೆ ಸಂಬಂಧಿಸಿದಂತೆ ಅಂದಾಜು 3.40 ಲಕ್ಷ ನಷ್ಟ ಸಂಭವಿಸಿದ್ದು, ಇದುವರೆಗೂರೂ. 1.96 ಲಕ್ಷ ಪರಿಹಾರ ನೀಡಲಾಗಿದೆ. ಚಿಕ್ಕಜಾನುವಾರುಗಳಿಗೆ ಸಂಬಂಧಿಸಿದಂತೆ ಅಂದಾಜು ರೂ.99 ಲಕ್ಷ ನಷ್ಟ ಸಂಭವಿಸಿದ್ದು, 65 ಲಕ್ಷ ಪರಿಹಾರ ಪಾವತಿಸಲಾಗಿದೆ.

409 ವಾಸದ ಮನೆಗಳ ಹಾನಿ: ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ 409 ಭಾಗಶಃ ವಾಸದ ಮನೆಗಳು ಹಾನಿಗೀಡಾಗಿವೆ. ತಾಲೂಕುವಾರು ವಿವರ ಇಂತಿದೆ. ಚಿತ್ರದುರ್ಗ 66, ಚಳ್ಳಕೆರೆ 117, ಹಿರಿಯೂರು 52, ಹೊಳಲ್ಕೆರೆ 67, ಹೊಸದುರ್ಗ 79 ಹಾಗೂ ಮೊಳಕಾಲ್ಮೂರಿನಲ್ಲಿ 28 ಮನೆಗಳು ಸೇರಿದಂತೆ ಒಟ್ಟು 409 ಮನೆಗಳು ಹಾನಿಯಾಗಿವೆ. ಇದರಿಂದ ಅಂದಾಜು ರೂ.43.60 ಲಕ್ಷನಷ್ಟು ಸಂಭವಿಸಿದೆ. ಮಾರ್ಗಸೂಚಿಯಂತೆ 21.26 ಲಕ್ಷವನ್ನು ಈಗಾಗಲೇ ಪರಿಹಾರ ಪಾವತಿಸಲಾಗಿದೆ. ಒಟ್ಟು ರೂ.48.87 ಲಕ್ಷ ಪರಿಹಾರ ನೀಡಲಾಗಿದೆ.

Advertisement

ಏಪ್ರಿಲ್‌ 1 ರಿಂದ ಈವರೆಗೆ ಪ್ರಕೃತಿ ವಿಕೋಪದಿಂದಾಗಿ ಉಂಟಾಗಿರುವ ಜೀವಹಾನಿ, ಜಾನುವಾರುಗಳ ಹಾನಿ, ವಾಸದ ಮನೆಗಳ ಹಾನಿ ಹಾಗೂ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಸಂಬಂ ಧಿಸಿದಂತೆ ಉಂಟಾಗಿರುವ ಹಾನಿ ಮತ್ತು ಪರಿಹಾರದ ಪಾವತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next