ಅಫಜಲಪುರ: ಮುಂಗಾರು ಹಿಂಗಾರು ಬೆಳೆಗಳು ಹಾನೀಗಿಡಾಗಿದ್ದರಿಂದ ಸರ್ಕಾರ ರೈತರಿಗೆ ಎಕರೆಗೆ 40 ಸಾವಿರ ಪರಿಹಾರ ನೀಡಬೇಕೆಂದು ರೈತ ಮುಖಂಡ ರಾಜು ಬಡದಾಳ ಆಗ್ರಹಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಕೊರೊನಾದಿಂದಾಗಿ ರೈತರು ಸಾಕಷ್ಟು ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಈಗ ಗಾಯದ ಮೇಲೆ ಬರೆ ಎಳೆದಂತೆ ಮಳೆ ಬಂದು ಮುಂಗಾರು ಹಿಂಗಾರು ಹಗಾಮಿನ ಬೆಳೆಗಳು ಹಾನಿಗೀಡಾಗಿವೆ. ಇದರಿಂದ ರೈತರು ತೀರಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಳೆ ಬೆಳೆದು ಮಾರಾಟವಾಗಿ ಹಣ ಕೈ ಸೇರುವ ಮುನ್ನವೇ ಹೀಗೆ ಪ್ರಕೃತಿ ವಿಕೋಪಕ್ಕೆ ಬೆಳೆಗಳು ಹಾಳಾಗಿದ್ದರಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.
ರೈತರ ಮನೆಗಳಲ್ಲಿ ಯಾವುದೇ ಸಮಾರಂಭಗಳು ನಡೆಯುತ್ತಿಲ್ಲ. ಮಕ್ಕಳಿಗೆ ಓದಿಸಲು ಹಣಕಾಸಿನ ಅಡಚಣೆಯಾಗುತ್ತಿದೆ. ಮಾಡಲು ಕೆಲಸಗಳು ಇಲ್ಲದೆ ಸಾಮಾನ್ಯ ಜೀವನ ನಡೆಸುವುದು ಕೂಡ ಕಷ್ಟವಾಗುತ್ತಿದೆ ಹೀಗಾಗಿ ಸರ್ಕಾರ ಬಡ ರೈತರ ನೋವನ್ನು ಕಡಿಮೆ ಮಾಡುವ ಕೆಲಸ ಎಕರೆಗೆ 40 ಸಾವಿರ ಪರಿಹಾರ ನೀಡುವ ಮೂಲಕ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುನೀಲ್ ಹೊಸಮನಿ, ಹಣಮಂತ್ರಾಯ ಬಿರಾದಾರ, ಭಾಗಣ್ಣ ಕುಂಬಾರ, ಕಂಠೆಪ್ಪ ಕೊಳ್ಳೂರ, ದಯಾನಂದ ಜಮಾದಾರ, ದೇವೀಂದ್ರ ಸಿಂಗೆ ಇದ್ದರು.