Advertisement

ಬೆಳೆ ಹಾನಿ ಪರಿಶೀಲಿಸಿದ ಎಂಎಲ್‌ಸಿ ವಿಜಯಸಿಂಗ್‌

04:39 PM Oct 22, 2020 | Suhan S |

ಬಸವಕಲ್ಯಾಣ: ತಾಲೂಕಾದ್ಯಂತ ಸತತವಾಗಿ ಸುರಿದ ಮಳೆಯಿಂದ ವಿವಿಧ ಗ್ರಾಮಗಳಲ್ಲಿ ಹಾಳಾಗಿರುವ ಬೆಳೆಗಳ ಬಗ್ಗೆ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಬುಧವಾರ ತಾಲೂಕಿನಲ್ಲಿಪ್ರವಾಸ ಕೈಗೊಳ್ಳುವ ಮೂಲಕ ಪರಿಶೀಲಿಸಿದರು.

Advertisement

ತಾಲೂಕಿನ ಲಾಡವಂತಿ, ಕೋಹಿನೂರ,ಕೋಹಿನೂರ ಪಹಾಡ್‌, ಖೇರ್ಡ (ಕೆ)ಗ್ರಾಮಗಳಿಗೆ ಭೇಟಿ ನೀಡಿದ ಅವರುರೈತರ ಗದ್ದೆಗಳಲ್ಲಿ ಮಳೆಯಿಂದ ಹಾಳಾದ ಸೋಯಾಬಿನ್‌, ಬಾಳೆ ತೋಟ ಮತ್ತು ಮಳೆಯಿಂದ ಹಾಳಾದ ರಸ್ತೆಗಳನ್ನು ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ಕೋಹಿನೂರ ಗ್ರಾಮದ ರೈತ ಗಂಪಣ್ಣ ಮೂಲಗೆ ಅವರು 2 ಎಕರೆಯಲ್ಲಿ ಬೆಳೆದ ಬಾಳೆ ಗಿಡಗಳು ಮಳೆಯಿಂದ ಸಂಪೂರ್ಣ ಹಾಳಾಗಿದ್ದು, ಸುಮಾರು 5 ಲಕ್ಷ ರೂ. ನನಗೆ  ನಷ್ಟವಾಗಿದೆ ಎಂದು ಎಂಎಲ್‌ಸಿ ಎದುರು ಅಳಲು ತೊಡಿಕೊಂಡರು.

ನಂತರ ಆಲಗೂಡ ಗ್ರಾಮಕ್ಕೆ ಭೇಟಿ ನೀಡಿದಾಗ ರೈತ ಸುನೀತಾಬಾಯಿ ಹಾಗೂ ಬಾಬು ಮಾರುತಿ ತಮ್ಮ ಹೊಲದ 2 ಎಕರೆಭೂಮಿಯಲ್ಲಿ ಬೆಳೆದ ಪಪ್ಪಾಯಿ ಮರಗಳು ಸಂಪೂರ್ಣವಾಗಿ ನೆಲಕ್ಕಚ್ಚಿದ್ದು, ಸುಮಾರು 8 ಲಕ್ಷ ರೂ. ನಷ್ಟವಾಗಿದೆ ಎಂದು ಎಂಎಲ್‌ಸಿ ವಿಜಯಸಿಂಗ್‌ ಅವರ ಗಮನಕ್ಕೆ ತಂದರು. ನಂತರ ಎಂಎಲ್‌ಸಿ ವಿಜಯಸಿಂಗ್‌ ಮಾತನಾಡಿ, ಸಂಬಂಧ ಪಟ್ಟ ಅಧಿಕಾರಿಗಳ ಜತೆಗೆ ಮಾತನಾಡಿ, ತಾಲೂಕಿನಲ್ಲಿ ಹಾನಿಯಾದ ಬೆಳೆಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರಕ್ಕೆ ಶೀಘ್ರ ರೈತರಿಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ನೀಲಕಂಠ ರಾಠೊಡ್‌, ರವಿ ಬುರಾಳೆ, ಅಮಾನತ್‌ಅಲಿ, ಡಿ.ಕೆ.ದಾವುದ್‌, ಸಂತೋಷ ಗುತ್ತೆದಾರ್‌, ಸಂಜಯಸಿಂಗ್‌ ಹಜಾರಿ, ಶರಣು ಆಲಗೂಡ, ಜಿ.ಪಂ ಸದಸ್ಯ ರಾಜಶೇಖರ ಮೇತ್ರೆ, ರಂಜಿತ್‌ ಗಾಯಕವಾಡ್‌, ಓಂಪಾಟೀಲ ಖಾನಾಪೂರ, ರಾಜು ಡೊಳ್ಳೆ, ಸುರೇಶ ನಾಟೆಕರ್‌, ಮಹಾದೇವ ಪೂಜಾರಿ, ಜೈದೀಪ್‌ ತೆಲಂಗೆ, ಮುಸ್ತಫಾ, ಸೋನು ಹಜಾರಿ, ಸಂತೋಷ ಪಾಟೀಲ, ಪಪ್ಪು ದಾನೆ, ಮಲ್ಲಿಕಾರ್ಜುನ ಬೊಕ್ಕೆ, ರಾಮ ಜಾಧವ್‌ ಸೇರಿದಂತೆ ಮತ್ತಿತರರು ಇದ್ದರು.

Advertisement

ಸೈನಿಕರಂತೆ ಶಿಸ್ತು-ಸಮಯ ಪಾಲನೆ ಬೆಳೆಸಿಕೊಳ್ಳಿ: ಮಹಾರಾಜ :

ಬೀದರ: ಸೈನಿಕರಂತೆ ಪ್ರತಿಯೊಬ್ಬರಲ್ಲಿ ಶಿಸ್ತು ಹಾಗೂ ಸಮಯ ಪಾಲನೆ ಜಾಗೃತಿ ಮೂಡಬೇಕು. ಇದರಿಂದ ದೇಶಾಭಿಮಾನ,ಆತ್ಮಾಭಿಮಾನ ಹೆಚ್ಚುತ್ತದೆ ಎಂದುರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀಜ್ಯೋತಿರ್ಮಯಾನಂದ ಮಹಾರಾಜ ಹೇಳಿದರು.

ನಗರದ ವಿವೇಕ ಭವನದಲ್ಲಿ ಬೀದರ ನಾಗರಿಕರ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆಸನ್ಮಾನಿಸಿ ಮಾತನಾಡಿದರು. ಬಿಜೆಪಿ ವಿಭಾಗಿಯ ಸಹ ಪ್ರಭಾರಿ ಈಶ್ವರಸಿಂಗ್‌ ಠಾಕೂರ್‌ ಮಾತನಾಡಿ, ಯಾವುದೇ ಜಾತಿ, ಭೇದವಿಲ್ಲದೆ ಹೋರಾಡುವ ನಮ್ಮ ವೀರ ಯೋಧರಿಗೆ ಗೌರವ ಕೊಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು. ನಿವೃತ್ತಿಯಾಗಿ ಮನೆಗೆ ಬಂದ ಸೈನಿಕ ಅವನು ಕೇವಲ ಕುಟುಂಬದ ಮಗನಲ್ಲ. ಇಡೀ ಸಮಾಜದ ಮಗನಾಗುತ್ತಾನೆ ಎಂದರು.

ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ಮಾತನಾಡಿ, ಒಬ್ಬ ಸರ್ಕಾರಿ ಅಧಿಕಾರಿ ನಿವೃತ್ತಿಯಾದರೆ ಅಥವಾವರ್ಗಾವಣೆಯಾದರೆ ಸಾವಿರಾರು ಜನ ಸೇರಿ ಸನ್ಮಾನಿಸುತ್ತಾರೆ. ಆದರೆ ಯೋಧರ ಕಾರ್ಯಕ್ರಮದಲ್ಲಿ ಹಿಂಜರಿಯುತ್ತಾರೆ. ಒಬ್ಬ ಯೋಧ ನಿವೃತ್ತಿಯಾಗಿ ಪುನಃ ಜನಸೇವೆಗೆ ಸಿದ್ಧವಾದರೆ ಕೀಳುಮಟ್ಟದ ಕೆಲಸ ನೀಡುವ ವ್ಯವಸ್ಥೆ ತೊಲಗಬೇಕಿದೆ ಎಂದರು.

ವಿನೋದ ಹೊನ್ನಾ ಮತ್ತು ಶ್ರೀಕಾಂತ ಸ್ವಾಮಿ ಮಾತನಾಡಿದರು. ನಿವೃತ್ತ ಯೋಧರಾದ ಬಸವಯ್ಯ ಸ್ವಾಮಿ, ದಿಗಂಬರ, ದತ್ತು ರಾಜಪೂತ, ಶರಣಪ್ಪ, ಮಾರುತಿ, ಸಿದ್ದಯ್ಯ ಸ್ವಾಮಿ, ರಾಮಣ್ಣಮೇತ್ರೆ, ಮಲ್ಲಿಕಾರ್ಜುನ ಮದನೂರ್‌,ಸುಭಾಷ ಅಲ್ಲೂರೆ, ಕಲ್ಯಾಣರಾವ ಅವರನ್ನುಗೌರವಿಸಲಾಯಿತು. ಏಕತಾ ಫೌಂಡೇಶನ್‌ ಅಧ್ಯಕ್ಷ ರವಿಂದ್ರ ಸ್ವಾಮಿ, ತಾಪಂ ಸದಸ್ಯಮಾದಪ್ಪ ಮಿಠಾರೆ ಮತ್ತಿತರರು ಇದ್ದರು. ಮಹೇಶ್ವರ ಸ್ವಾಮಿ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next