Advertisement
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೀದರ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಹಾನಿ ಕುರಿತು ವಿವರಣೆ ಪಡೆದು ಮಾತನಾಡಿದ ಅವರು, ಬೆಳೆ ಹಾನಿಗೆ ಒಳಗಾಗಿರುವ ಯಾವುದೇ ರೈತರು ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
Related Articles
Advertisement
ಬೀದರ-ಕಮಲನಗರ ಹೆದ್ದಾರಿ ಕಾಮಗಾರಿಯನ್ನು ಬರುವ ಡಿಸೆಂಬರ್ ಕೊನೆಯ ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಇದೆ ವೇಳೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಗಡುವು ವಿಧಿಸಿದರು. ಬೀದರ-ಹುಮನಾಬಾದ್ ಹಾಗೂ ಬೀದರ-ಔರಾದ್ ಹೆದ್ದಾರಿ ಕಾಮಗಾರಿಗಳನ್ನು ಕೂಡ ತ್ವರಿತಗತಿಯಲ್ಲಿ ನಡೆಸಲು ತಿಳಿಸಿದರು.
ಬೀದರ ಜಿಲ್ಲೆಯಲ್ಲಿ ವಿಪರೀತ ಮಳೆ ಬಿದ್ದಿದ್ದರೂ ಎಲ್ಲೂ ಕೆರೆಗಳು ಒಡೆದ ಬಗ್ಗೆ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 82 ಕೆರೆಗಳು ಭರ್ತಿಯಾಗಿವೆ. 17 ಕೆರೆಗಳು ಶೇ. 50ರಷ್ಟು ಭರ್ತಿಯಾಗಿವೆ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಮೇಧಾ ಅವರು ಸಭೆಗೆ ಮಾಹಿತಿ ನೀಡಿದರು.
ಬೀದರ ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ 81.5 ಕಿ.ಮೀ ರಸ್ತೆ ಹಾಳಾಗಿದ್ದು, ಇದರ ದುರಸ್ತಿಗೆ 137 ಲಕ್ಷ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. 89 ಅಂಗನವಾಡಿ ಕಟ್ಟಡಗಳು ಹಾಳಾಗಿದ್ದು, ಇವುಗಳ ದುರಸ್ತಿಗೆ 168 ಲಕ್ಷ ರೂ.ಗಳು, ಅದೇ ರೀತಿ 261 ಶಾಲಾ ಕೊಠಡಿಗಳು ಕೂಡ ಹಾಳಾಗಿದ್ದು, ಇವುಗಳ ದುರಸ್ತಿಗೆ 217 ಲಕ್ಷ ರೂ. ಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಪಂಚಾಯತ್ ರಾಜ್ಯ ಇಂಜಿನಿಯರಿಂಗ್ ಇಲಾಖೆ ಅಭಿಯಂತರರು ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಜಿಪಂ ಸಿಇಒ ಜಹೀರಾ ನಸೀಮ್, ಎಸ್ಪಿ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ಬಿ. ಬಾಬುರೆಡ್ಡಿ, ಸಹಾಯಕ ಆಯುಕ್ತರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು