Advertisement

Kampli: ಅರಣ್ಯ ಇಲಾಖೆಯ ಬಲೆಗೆ ಬೀಳದ ಮೊಸಳೆ ಮಿನುಗಾರರ ಬಲೆಗೆ ಬಿತ್ತು…

10:16 AM Jun 28, 2024 | Team Udayavani |

ಕಂಪ್ಲಿ: ಪಟ್ಟಣದ ಐತಿಹಾಸಿಕ ಸೋಮಪ್ಪನ ಕೆರೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.ಈ ಬಗ್ಗೆ ಪುರಸಭೆಯವರು ಕೆರೆಯಲ್ಲಿ ಮೊಸಳೆಯೊಂದು ಇದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಬ್ಯಾನರ್ ಅಳವಡಿಸಿದ್ದರು. ಜೊತೆಗೆ ಅರಣ್ಯ ಇಲಾಖೆಗೆ ಮೊಸಳೆ ಸೆರೆಗೆ ಮನವಿ ಮಾಡಿದ್ದರು.

Advertisement

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೊಸಳೆ ಸೆರೆಗೆ ಬಲೆ ಮತ್ತು ದಂಡೆಯಲ್ಲಿ ಸತ್ತ ಕೋಳಿಗಳನ್ನು ಹಾಕಿ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಎರಡು ದಿನಗಳಾದರು ಮೊಸಳೆ ಸೆರೆಯಾಗಿರಲಿಲ್ಲ. ಇಂದು ಕಂಪ್ಲಿ ಕೋಟೆಯ ಮೀನುಗಾರ ಸಹಕಾರ ಸಂಘದವರು ಕೆರೆಯಲ್ಲಿನ ಮೀನುಗಳನ್ನು ಹಿಡಿಯಲು 15ಕ್ಕೂ ಅಧಿಕ ಹರಗೋಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬಲೆಗಳನ್ನು ಬಳಸಿದ್ದರಿಂದ ಮೊಸಳೆ ಬಲೆಗೆ ಬಿದಿದ್ದು, ನಂತರ ಮೊಸಳೆಯನ್ನು ಹಗ್ಗದಿಂದ ಬಂಧಿಸಿ ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಬಿ.ರಾಘವೇಂದ್ರ ಮತ್ತು ಬಿ.ನಾಗರಾಜ ಅವರಿಗೆ ಒಪ್ಪಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಮೊಸಳೆಯನ್ನು ಕಮಲಾಪುರ ಅಟಲ್ ಬಿಹಾರಿ ವಾಜಪೇಯಿ ಜುಯಲಾಜಿಕಲ್ ಪಾಕ್೯ಗೆ ಸ್ಥಳಾಂತಿಸಿದರು. ಮೊಸಳೆಯನ್ನು ನೋಡಲು ನೂರಾರು ಸಾರ್ವಜನಿಕರು ಆಗಮಿಸಿದ್ದು, ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಇದನ್ನೂ ಓದಿ: Kalasa: ತಡವಾಗಿ ಘೋಷಣೆಯಾದ ರಜೆ… ಶಾಲೆಗೆ ಹೋಗಿ ವಾಪಸ್ಸಾದ ವಿದ್ಯಾರ್ಥಿಗಳು

Advertisement

Udayavani is now on Telegram. Click here to join our channel and stay updated with the latest news.

Next