Advertisement

ಸಂಶೋಧನಾ ಕೇಂದ್ರದಲ್ಲಿ  ದೈತ್ಯ ಮೊಸಳೆಗೆ ಆಹಾರವಾದ ಮಹಿಳಾ ವಿಜ್ಞಾನಿ 

02:14 PM Jan 16, 2019 | |

ಸುಲಾವೇಸಿ: 37 ರ ಹರೆಯದ ಮಹಿಳಾ ವಿಜ್ಞಾನಿಯೊಬ್ಬರು ಮೊಸಳೆಗೆ ಆಹಾರವಾದ ಭಯಾನಕ ಘಟನೆ ಇಂಡೋನೇಷ್ಯಾದ ಸಂಶೋಧನಾ ಕೇಂದ್ರವೊಂದರಲ್ಲಿ  ನಡೆದಿದೆ.

Advertisement

ಸುಲಾವೇಸಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮೇರಿ ಎಂಬ ಹೆಸರಿನ 17 ಅಡಿ ಉದ್ದದ ದೈತ್ಯ ಮೊಸಳೆ ಸಂಶೋಧನಾ ವಿಜ್ಞಾನಿ ಡೇಸಿ ಟುವೋರನ್ನು ಜೀವಂತವಾಗಿ ತಿಂದಿದೆ. 

ಡೇಸಿ ಅವರ ಅರ್ಧ ದೇಹವನ್ನು ಮೊಸಳೆ ಕ್ಷಣದಲ್ಲಿ ತಿಂದು ಹಾಕಿದ್ದು, ಭಯಾನಕ ದೃಶ್ಯ ಕಂಡು ಸಹುದ್ಯೋಗಿಗಳಿಬ್ಬರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

8 ಅಡಿ ಎತ್ತರದ ಗೋಡೆ ಹಾರಿ ಟುವೋ ಅವರನ್ನು ಮೊಸಳೆ ತಿಂದಿದೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗಾಗಿ ಮೊಸಳೆಯನ್ನು ಒಯ್ಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next