ಮೊಸಳೆ ಬಾಯಿಗೆ ಸಿಕ್ಕರೆ ಬಚಾವಾಗುವುದು ಅಷ್ಟು ಸುಲಭದ ಮಾತಲ್ಲ, ಆದರೆ ಇಲ್ಲೊಂದು ಜಿಂಕೆ ಹೊಳೆ ದಾಟಲು ಹೋಗಿ ಮೊಸಳೆ ದಾಳಿಗೆ ಸಿಲುಕಿ ಅಲ್ಲಿಂದ ತಪ್ಪಿಸಿಕೊಂಡು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದೆ.
ಈ ಜಿಂಕೆ ಮೊಸಳೆ ಬಾಯಿಯಿಂದ ಬಚಾವಾಗಿ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ದಡ ಸೇರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಜಿಂಕೆಯೊಂದು ನದಿಯಲ್ಲಿ ತನ್ನ ಪ್ರಾಣ ಉಳಿಸಿಕೊಳ್ಳಲು ಈಜುತ್ತಿರುವುದು ಕಾಣುತ್ತದೆ ಅದರ ಬೆನ್ನಲ್ಲೇ ಮೊಸಳೆಯೊಂದು ಜಿಂಕೆಯನ್ನು ಬೇಟೆಯಾಡಲು ಬೆನ್ನಹಿಂದೆಯೇ ಬರುತ್ತಿದೆ, ಜಿಂಕೆ ತನ್ನ ಜೀವವನ್ನು ಉಳಿಸಲು ತನ್ನೆಲ್ಲಾ ಶಕ್ತಿಯನ್ನು ಬಳಸಿ ನದಿ ದಾಟಲು ಯತ್ನಿಸುತ್ತಿದೆ ಆದರೆ ಮೊಸಳೆಗಳಿಗೆ ನದಿಯಲ್ಲಿ ಈಜಿ ಅಭ್ಯಾಸವಾಗಿರುವುದರಿಂದ ಹೆಚ್ಚಿನ ವೇಗದಲ್ಲಿ ಈಜುತ್ತವೆ ಆದರೆ ಕೊನೆಯಲ್ಲಿ ಮೊಸಳೆ ಜಿಂಕೆ ಬಳಿಗೆ ಬಂದು ಇನ್ನೇನು ದಾಳಿ ಮಾಡಿತು ಎನ್ನುವಷ್ಟರಲ್ಲಿ ಜಿಂಕೆ ಮತ್ತೆ ತನ್ನ ಬಲ ಪ್ರದರ್ಶನ ಮಾಡಿ ಮೊಸಳೆ ಬಾಯಿಯಿಂದ ತಪ್ಪಿಸಿಕೊಂಡು ದಡ ಸೇರಿದೆ.
ನದಿಯಲ್ಲಿ ಜಿಂಕೆಗೆ ಈಜಿ ದಡ ಸೇರುವುದು ಅಷ್ಟು ಸುಲಭವಾಗಿರಲಿಲ್ಲ ಆದರೂ ಛಲ ಬಿಡದ ಜಿಂಕೆ ತನ್ನೆಲ್ಲ ಬಲವನ್ನು ಹಾಕಿ ಈಜಿ ಮೊಸಳೆ ಬಾಯಿಯಿಂದ ತಪ್ಪಿಸಿಕೊಂಡು ದಡ ಸೇರಿರುವುದು ಮಾತ್ರ ನಿಜಕ್ಕೂ ಆಶ್ಚರ್ಯ.