Advertisement
ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧವೇ ಮಾತುಗಳನ್ನಾಡಿದ ಪ್ರಧಾನಿ ಮೋದಿ, “ನಾನು ವಿಶ್ವಬ್ಯಾಂಕ್ ಪ್ರಧಾನ ಕಚೇರಿಯ ಕಟ್ಟಡವನ್ನೇ ನೋಡಿಲ್ಲ. ಆದರೆ ನಮ್ಮ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ನಂಬಿಕೆ ನನ್ನದು. ನಾವು ಈಗ ಮಾಡಿದ ಕೆಲಸವನ್ನು ಅವರೇ(ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ) ಮಾಡಿದ್ದರೆ, ಈಗ ನಮಗೆ ಸಿಕ್ಕಿರುವ ಹೆಗ್ಗಳಿಕೆ ಅವರ ಅವಧಿಯಲ್ಲಿಯೇ ಸಿಕ್ಕಿರುತ್ತಿತ್ತು’ ಎಂದು ಟೀಕಿಸಿದರು.
Related Articles
Advertisement
ಮತ್ತಷ್ಟು ಸರಳ?: ಇದೇ ಸಂದರ್ಭದಲ್ಲಿ ಜಿಎಸ್‌ಟಿ ಬಗ್ಗೆ ಪ್ರಸ್ತಾಪಿಸಿದ ಮೋದಿ, ಸಣ್ಣ ಉದ್ದಿಮೆದಾರರಿಗೆ ತೊಡಕಾಗಿರುವ ಜಿಎಸ್‌ಟಿಯಲ್ಲಿನ ಅಂಶಗಳ ನಿವಾರ ಣೆಗೆ ರಾಜ್ಯ ಹಣಕಾಸು ಸಚಿವರ ಸಮಿತಿ ಒಪ್ಪಿಕೊಂಡಿದೆ. ನ.9, 10ರಂದು ಗುವಾಹಟಿಯಲ್ಲಿ ನಡೆಯಲಿರುವ ಸಮಿತಿ ಸಭೆಯಲ್ಲಿ ಅದನ್ನು ಅನುಮೋದಿಸುವ ಸಾಧ್ಯತೆ ಇದೆ ಎಂದರು. 2017ರ ವರದಿಯಲ್ಲಿ ಮೇ 2016ರ ವರೆಗೆ ಇರುವ ಅಂಶಗಳು ಸೇರಿಕೊಂಡಿವೆ. ಜಿಎಸ್‌ಟಿ ಸುಧಾರಣೆಯಿಂದ ಉಂಟಾ ಗಿರುವ ಪ್ರಭಾವ ಮುಂದಿನ ವರ್ಷದ ವಿಶ್ವಬ್ಯಾಂಕ್ ವರದಿಯಲ್ಲಿ ಸೇರಿಕೊಳ್ಳಲಿದೆ ಎಂದರು ಪ್ರಧಾನಿ.
ಪ್ರಮುಖ ಸಾಧನೆ: ಇದೇ ಕಾರ್ಯಕ್ರಮದಲ್ಲಿ ಮಾತ ನಾಡಿದ ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ, ಪಟ್ಟಿಯಲ್ಲಿ ಭಾರತ 40 ಸ್ಥಾನಗಳಷ್ಟು ಮೇಲಕ್ಕೇರಿರು ವುದು ಅತ್ಯಂತ ಅಪರೂಪದ ಬೆಳವಣಿಗೆ. ಜಿಎಸ್‌ಟಿ ಮತ್ತು ಇತರ ಸುಧಾರಣಾ ಕ್ರಮಗಳಿಂದ 2047ರ ಒಳ ಗಾಗಿ ದೇಶವು ಮೇಲ್ ಮಧ್ಯಮ ಆದಾಯದ ಆರ್ಥಿ ಕತೆಯಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧದ ಸಮರ ನಿಲ್ಲದುತಮ್ಮ ಪ್ರತಿಕೃತಿ ದಹನ, ಮೊಂಬತ್ತಿ ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳನ್ನು ಕಾಂಗ್ರೆಸ್ ಕೈಗೊಂಡರೂ ಭ್ರಷ್ಟಾಚಾರ ವಿರುದ್ಧದ ನನ್ನ ಸಮರ ನಿಲ್ಲದು ಎಂದಿದ್ದಾರೆ ಪ್ರಧಾನಿ ಮೋದಿ. ಹಿಮಾಚಲದ ಕಾಂಗ್ರಾ, ಸುರೇಂದ್ರನಗರ್ ಎಂಬಲ್ಲಿ ಶನಿವಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಬೇನಾಮಿ ಆಸ್ತಿ ಹೊಂದಿದವರ ವಿರುದ್ಧ ಕ್ರಮ ಖಂಡಿತ ಎಂದರು. ತನ್ನ ನಾಯಕರು ಹೊಂದಿದ ಆಕ್ರಮ ಆಸ್ತಿ ಕೂಡ ಇದರಿಂದ ಸರ್ಕಾ ರದ ವಶವಾಗಲಿದೆ ಎನ್ನುವುದು ಕಾಂಗ್ರೆಸ್ ಆತಂಕ ಎಂದು ಲೇವಡಿ ಮಾಡಿದರು. ನ.8 ಅನ್ನು ಕರಾಳ ದಿನ ಎಂದು ಆಚರಿಸುವ ಪ್ರತಿಪಕ್ಷಗಳನ್ನು ಟೀಕಿಸಿದ ಅವರು, ಆ ದಿನ ಕಪ್ಪುಹಣದ ದಿನ ಎಂದು ಆಚರಿಸ ಬೇಕು. ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟ ದಿಂದ ಕೋಪಗೊಂಡಿರುವ ಕಾಂಗ್ರೆಸ್, ನ.8ರಂದು ನನ್ನ ಪ್ರತಿಕೃತಿ ದಹನ ಮಾಡಬಹುದು. ಆದರೆ, ನಾನು ಸರ್ದಾರ್ ಪಟೇಲ್ ಅವರ ಹಿಂಬಾಲಕ. ನಾನು ಯಾವುದಕ್ಕೂ ಬಗ್ಗುವುದಿಲ್ಲ ಎಂದರು.