Advertisement

ಟೀಕೆಗಳು ಅಭಿವೃದ್ಧಿ ಕಾರ್ಯಕ್ಕೆ ಪೂರಕ: ಡಾ|ರಾಜೇಂದ್ರ ಕೆ.ವಿ.

12:29 AM Oct 30, 2022 | Team Udayavani |

ಮಂಗಳೂರು: ಯಾವುದೇ ಅಭಿವೃದ್ಧಿ ಕಾರ್ಯಗಳ ಸಂದರ್ಭ ಟೀಕೆ ಟಿಪ್ಪಣಿ ಬರುವುದು ಸಹಜ. ಸಮಾಜದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಇದು ಪೂರಕವಾಗುತ್ತದೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು.

Advertisement

ದ.ಕ. ಜಿ.ಪಂ.ನಲ್ಲಿ ಶನಿವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ತರಲು ಸಾಧ್ಯತೆಗಳಿವೆ. ಆದರೆ ಮಳೆ ಸಹಿತ ವಿವಿಧ ತಾಂತ್ರಿಕ ಕಾರಣದಿಂದ ಇವು ನಿರೀಕ್ಷಿತ ಮಟ್ಟಕ್ಕೆ ತಲುಪಲು ಸಾಧ್ಯವಾಗಿಲ್ಲ ಎಂಬ ಬೇಸರವೂ ನನಗಿದೆ ಎಂದರು.

ಕೊರೊನಾ, ಮಳೆ ಸಮಸ್ಯೆ ಹಾಗೂ ಕೋಮು ಗಲಭೆಯಂತಹ ಸಮಯದಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಅಧಿಕಾರಿಗಳು ಸಹಿತ ಎಲ್ಲ ಸ್ತರದ ನೌಕರರು ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಮಾಧ್ಯಮದವರು ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದಾರೆ ಎಂದರು.

ಹತ್ತಿರದ ವ್ಯಕ್ತಿ
ಪ್ರಭಾರ ಜಿಲ್ಲಾಧಿಕಾರಿ ಡಾ| ಕುಮಾರ್‌ ಮಾತನಾಡಿ, ಸರಕಾರಿ ಅಧಿಕಾರಿಗಳ ನಡುವೆ ಡಾ| ರಾಜೇಂದ್ರ ಅವರು ಎತ್ತರದ ವ್ಯಕ್ತಿಯಾಗಿರಲಿಲ್ಲ. ಬದಲಾಗಿ ಹತ್ತಿರದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ವರ್ಗಾವಣೆ ಎನ್ನುವುದು ಅನಿವಾರ್ಯ. ಯಾಕೆಂದರೆ ಒಳ್ಳೆಯ ಅಧಿಕಾರಿಯ ಸೇವೆ ಒಂದೇ ಕಡೆಗೆ ಇರಬಾರದು. ಇತರ ಕಡೆಗೂ ದೊರೆಯಬೇಕು ಎಂದರು.

ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ದ.ಕ. ಜಿ.ಪಂ. ಉಪ ಕಾರ್ಯದರ್ಶಿ ಆನಂದ್‌ ಕುಮಾರ್‌, ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್‌, ಜಿಲ್ಲಾ ಎಸ್ಪಿ ಹೃಷಿಕೇಶ್‌ ಸೋನಾವಣೆ, ಡಿಎಸ್ಪಿ , ಸಹಾಯಕ ಆಯುಕ್ತರಾದ ಮದನಮೋಹನ್‌, ಗೌರೀಶ್‌ ನಂದನ್‌, ಡಿಎಫ್‌ಒ ದಿನೇಶ್‌ ಕುಮಾರ್‌ ಉಪಸ್ಥಿತರಿದ್ದರು.ಎಡಿಸಿ ಕೃಷ್ಣಮೂರ್ತಿ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next