Advertisement

ಎ.30ಕ್ಕೆ ‘ಕ್ರಿಟಿಕಲ್ ಕೀರ್ತನೆಗಳು’ ಟ್ರೇಲರ್ 

03:58 PM Apr 29, 2022 | Team Udayavani |

ಈಗಾಗಲೇ ತನ್ನ ಟೈಟಲ್‌, ಟೀಸರ್‌ ಮತ್ತು ಹಾಡಿನಿಂದ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ “ಕ್ರಿಟಿಕಲ್‌ ಕೀರ್ತನೆಗಳು’ ಸಿನಿಮಾದ ಟ್ರೇಲರ್‌ ಏ. 30ಕ್ಕೆ ಬಿಡುಗಡೆಯಾಗುತ್ತಿದೆ. ಐಪಿಎಲ್‌ ಬೆಟ್ಟಿಂಗ್‌ ಕಥಾಹಂದರ ಹೊಂದಿರುವ “ಕ್ರಿಟಿಕಲ್‌ ಕೀರ್ತನೆಗಳು’ ಚಿತ್ರಕ್ಕೆ ಈ ಹಿಂದೆ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರವನ್ನು ನಿರ್ದೇಶಿಸಿದ್ದ ಕುಮಾರ್‌. ಎಲ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

“ನಮ್ಮ ಸುತ್ತಮುತ್ತ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಅದನ್ನು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಮೂಲಕ ಈ ಸಿನಿಮಾದಲ್ಲಿ ಹೇಳಿದ್ದೇವೆ. ಕಾಮಿಡಿ, ಸೆಂಟಿಮೆಂಟ್‌, ಮೆಸೇಜ್‌ ಎಲ್ಲವನ್ನೂ ಸಿನಿಮಾದಲ್ಲಿ ಕಾಣಬಹುದು. ಸದ್ಯ ಎಲ್ಲ ಕಡೆ ಐಪಿಎಲ್‌ ಹಂಗಾಮ ಜೋರಾಗಿದೆ. ಈ ಸಿನಿಮಾ ಕೂಡ ಐಪಿಎಲ್‌ ಕುರಿತಾಗಿಯೇ ಇದೆ. ಇಂದಿನ ಜನರೇಶನ್‌ಗೆ ಕನೆಕ್ಟ್ ಆಗುವಂಥ ಸಬ್ಜೆಕ್ಟ್ ಅನ್ನು ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವಂತೆ ಹೇಳುವ ಪ್ರಯತ್ನ ಮಾಡಿದ್ದೇವೆ. ಈಗಾಗಲೇ ಸಿನಿಮಾದ ಟೀಸರ್‌, ಸಾಂಗ್ಸ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಸಿನಿಮಾದ ಟ್ರೇಲರ್‌ ಕೂಡ ಬಿಡುಗಡೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಕುಮಾರ್‌.

“ಕ್ರಿಟಿಕಲ್‌ ಕೀರ್ತನೆಗಳು’ ಚಿತ್ರದಲ್ಲಿ ತಬಲ ನಾಣಿ, ಸುಚೇಂದ್ರ ಪ್ರಸಾದ್‌, ರಾಜೇಶ್‌ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್‌, ಅರುಣಾ ಬಾಲರಾಜ್‌, ಧರ್ಮ, ದಿನೇಶ್‌ ಮಂಗಳೂರು, ರಘು ಪಾಂಡೇಶ್ವರ, ಯಶಸ್‌ ಅಭಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಕೇಸರಿ ಫಿಲಂಸ್‌ ಕ್ಯಾಪcರ್‌’ ಲಾಂಛನದಲ್ಲಿ ಕುಮಾರ್‌ ಮತ್ತು ಸ್ನೇಹಿತರು ಸೇರಿ ನಿರ್ಮಿಸಿರುವ “ಕ್ರಿಟಿಕಲ್‌ ಕೀರ್ತನೆಗಳು’ ಚಿತ್ರಕ್ಕೆ ಶಿವಸೇನ ಮತ್ತು ಶಿವಶಂಕರ್‌ ಛಾಯಾಗ್ರಹಣವಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಚಿತ್ರದ ಹಾಡುಗಳಿಗೆ ವೀರ್‌ ಸಮರ್ಥ್ ಸಂಗೀತವಿದೆ. ಸಿನಿಮಾ ಇದೇ ಮೇ. 13 ರಂದು ತೆರೆಗೆ ಬರುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next