ರಾಯಚೂರು: ಭತ್ತ ಬೆಳೆಗಾರರಿಗೆ ಒಂದೆಡೆ ಬೆಲೆ ಕುಸಿತ ಸಮಸ್ಯೆ ಎದುರಾದರೆ, ಮತ್ತೂಂದೆಡೆ ಖರೀದಿ ಕೇಂದ್ರಗಳಲ್ಲಿ ಗುಣಮಟ್ಟ ಪರೀಕ್ಷೆ ಎದುರಿಸುವ ಸವಾಲು ಕಗ್ಗಂಟಾಗಿ ಪರಿಣಮಿಸಿದೆ.
ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, ಜೂ.30ರವರೆಗೆ ನೋಂದಣಿಗೆ ಅವಕಾಶ ನೀಡಿದೆ. ಆದರೆ, ನೋಂದಣಿ ವೇಳೆ ಗುಣಮಟ್ಟ ಪರೀಕ್ಷೆ ನಡೆಯುತ್ತಿದ್ದು, ಮಾನದಂಡಗಳ ಪ್ರಕಾರ ಇಲ್ಲವಾದರೆ ಅಂಥ ಭತ್ತವನ್ನು ಸಾರಾಸಗಟಾಗಿ ತಿರಸ್ಕರಿಸಲಾಗುತ್ತಿದೆ.
ಮುಕ್ತ ಮಾರುಕಟ್ಟೆಯಲ್ಲಿ ಸೂಕ್ತ ದರವಿಲ್ಲ, ಖರೀದಿ ಕೇಂದ್ರಗಳಲ್ಲಿ ಮನ್ನಣೆ ಇಲ್ಲದೆ ಅನ್ನದಾತರ ಪಾಡು ಅಡಕತ್ತರಿಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಕಳೆದ ವರ್ಷ 1400 ರೂ.ವರೆಗೆ ಇದ್ದ ದರ ಈ ಬಾರಿ 700-800 ರೂ. ಇದೆ. ಜಿಲ್ಲೆಯಲ್ಲಿ ಬೇಸಿಗೆ ಬೆಳೆಯಲ್ಲಿ ಸುಮಾರು 90 ಹೆಕ್ಟೇರ್‌ಗೂ ಅಧಿ ಕ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, 4 ಲಕ್ಷ ಕ್ವಿಂಟಲ್‌ಗೂ ಅಧಿ ಕ ಇಳುವರಿ ನಿರೀಕ್ಷಿಸಲಾಗಿತ್ತು. ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸಿದ ಭತ್ತವನ್ನು ಹಲ್ಲಿಂಗ್ ಮಾಡಿಸಿ ಪುನಃ ಆಹಾರ ಇಲಾಖೆಯಿಂದ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.
ಆದರೆ, ಖಾಸಗಿ ಮಿಲ್‌ಗಳಿಗೆ ಹಲ್ಲಿಂಗ್‌ಗೆ ನೀಡಿರುವ ಕಾರಣ ಅವರ ಬೇಡಿಕೆಗೆ ತಕ್ಕಂತ ಅಕ್ಕಿ ನೀಡದಿದ್ದರೆ ನಾವು ಹಲ್ಲಿಂಗ್ ಮಾಡುವುದಿಲ್ಲ ಎನ್ನುತ್ತಿದ್ದಾರೆ ಎಂಬುದು ಅಧಿ ಕಾರಿಗಳ ವಾದ. ಕೇಂದ್ರ ಸರ್ಕಾರ ಗುಣಮಟ್ಟದಲ್ಲಿ ರಾಜಿ ಆಗದಂತೆ ತಿಳಿಸಿದೆ. ತೇವಾಂಶ, ಸ್ವತ್ಛತೆ, ತೂಕ ಜತೆಗೆ ಕ್ವಿಂಟಲ್ ಭತ್ತ ಹಲ್ಲಿಂಗ್ ಮಾಡಿದಾಗ ಕನಿಷ್ಟ ಶೇ.67ರಷ್ಟು ಅಕ್ಕಿ ಬರಬೇಕು ಎಂಬ ಷರತ್ತು ವಿ ಧಿಸಲಾಗಿದೆ. ನಾವು ಆರ್ ಎನ್‌ಆರ್ ತಳಿ ಅಕ್ಕಿ ಬೆಳೆದಿದ್ದು, ಈ ಅಕ್ಕಿ ಅಷ್ಟೊಂದು ಪ್ರಮಾಣದಲ್ಲಿ ತೂಗುವುದಿಲ್ಲ ಎಂದು ರೈತರೇ ಹೇಳುತ್ತಿದ್ದಾರೆ. ಈ ಕಾರಣಕ್ಕೂ ಖರೀದಿ ಕೇಂದ್ರಗಳಲ್ಲಿ ಭತ್ತ ತಿರಸ್ಕಾರವಾಗುತ್ತಿದೆ