Advertisement

ಚೀನಾ ಅಂತರ್ಜಾಲ ತಾಣಗಳಲ್ಲಿ ಫ‌ುಟ್ಬಾಲಿಗ ರೊನಾಲ್ಡೋ ಭಾರೀ ಜನಪ್ರಿಯ

10:13 AM Feb 25, 2017 | Team Udayavani |

ನವದೆಹಲಿ: ಪೋರ್ಚುಗಲ್‌ ರಾಷ್ಟ್ರೀಯ ತಂಡ ಮತ್ತು ರಿಯಲ್‌ ಮ್ಯಾಡ್ರಿಡ್‌ ಫ‌ುಟ್‌ಬಾಲ್‌ ಕ್ಲಬ್‌ನ ಸ್ಟಾರ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೋ ಚೀನಾ ಅಂತರ್ಜಾಲ ತಾಣಗಳಲ್ಲಿ ಭಾರೀ ಜನಪ್ರಿಯತೆಗಳಿಸಿದ್ದಾರೆ. ಜಗತ್ತಿನಲ್ಲಿಯೇ ಚೀನಾದಲ್ಲಿ ಅತೀ ಹೆಚ್ಚಿನ ಅಂತರ್ಜಾಲ ಬಳಕೆದಾರರು ಇದ್ದು, ಸಾಮಾಜಿಕ ಜಾಲತಾಣ, ಇ-ಕಾಮರ್ಸ್‌ ಕಂಪನಿಗಳಲ್ಲಿ ರೊನಾಲ್ಡೋ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ. 

Advertisement

ಉಳಿದಂತೆ ಫ‌ುಟ್‌ಬಾಲ್‌ ಆಟಗಾರರಾದ ಮೆಸುಟ್‌ ಓಜಿಲ್‌ 2ನೇ ಸ್ಥಾನದಲ್ಲಿ. ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ನ ಗ್ಯಾರೆತ್‌ ಬೇಲ್‌ ಮೂರನೇ ಸ್ಥಾನದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚೀನಾ ಫ‌ುಟ್‌ಬಾಲ್‌ ತಂಡ ಕೂಡ ಬಲಿಷ್ಠವಾಗುತ್ತಿದೆ. ಫ‌ುಟ್‌ಬಾಲ್‌ ಅಭಿಮಾನಿಗಳ ಸಂಖ್ಯೆ ಕೂಡ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳು ಅನ್ಯದೇಶದ ಫ‌ುಟ್‌ಬಾಲ್‌ ತಾರೆಯರನ್ನು ರಾಯಭಾರಿಗಳಾಗಿ ನೇಮಕ ಮಾಡಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next