ಫರೊ: ಕಾಲ್ಚೆಂಡು ಆಟದ ದಿಗ್ಗಜ, ಪೋರ್ಚುಗಲ್ ನ ಸೂಪರ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಫುಟ್ ಬಾಲ್ ಪಂದ್ಯಗಳಲ್ಲಿ ಅತೀ ಹೆಚ್ಚು ಗೋಲು ಗಳಿಸಿದ ಕೀರ್ತಿಗೆ ರೊನಾಲ್ಡೊ ಪಾತ್ರರಾಗಿದ್ದಾರೆ.
ಬುಧವಾರ ಫರೋದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಈ ದಾಖಲೆ ಬರೆದರು. 89ನೇ ನಿಮಿಷದಲ್ಲಿ ಹೆಡರ್ ಮೂಲಕ ಗೋಲು ಗಳಿಸಿದ ರೊನಾಲ್ಡೊ ಪೋರ್ಚುಗಲ್ 110 ಗೋಲು ಬಾರಿಸಿದ ಸಾಧನೆ ಮಾಡಿದರು.
ಇದರೊಂದಿಗೆ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ ಬಾಲ್ ಪಂದ್ಯಗಳಲ್ಲಿ ಅತೀ ಹೆಚ್ಚು ಗೋಲು ದಾಖಲಿಸಿದ್ದ ಇರಾನ್ ನ ಆಟಗಾರ ಅಲಿ ದಯಾಯಿ ಅವರ ದಾಖಲೆಯನ್ನು ಮುರಿದರು. ಇರಾನಿಯನ್ ಆಟಗಾರ 109 ಗೋಲು ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಇದನ್ನೂ ಓದಿ:ಮೈಸೂರು: ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ?
“ತುಂಬಾ ಸಂತೋಷವಾಗಿದೆ. ದಾಖಲೆ ಮುರಿದ ಕಾರಣಕ್ಕಿಂತ ಈ ವಿಶೇಷ ಕ್ಷಣಕ್ಕಾಗಿ ಬಹಳ ಸಂತೋಷವಾಗಿದೆ” ಎಂದು ರೊನಾಲ್ಡೊ ಪಂದ್ಯದ ಬಳಿಕ ಸಂತಸ ವ್ಯಕ್ತಪಡಿಸಿದ್ದಾರೆ.
36 ವರ್ಷದ ರೊನಾಲ್ಡೊ ಕಳೆದ ವಾರವಷ್ಟೇ ತಮ್ಮ ಲೀಗ್ ಜ್ಯುವೆಂಟಸ್ ಬಿಟ್ಟು ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಸೇರಿದ್ದರು.