ಬೆಂಗಳೂರಿನಲ್ಲಿ ಈಗ ಸಿರಿಧಾನ್ಯದ್ದೇ ಮಾತು. ಮುಂದಿನ ತಲೆಮಾರಿನ ಸ್ಮಾರ್ಟ್ ಆಹಾರದ ಬಗ್ಗೆ ರಾಜ್ಯ ಸರ್ಕಾರವೂ ಅತ್ತ ಕ್ಯಾಂಪೇನ್ ಕೈಗೊಂಡಿದೆ. ಕಳೆದೆರಡು ವರ್ಷಗಳಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿಯೇ ಈಗ “ಸಾವಯವ ಮತ್ತು ಸಿರಿಧಾನ್ಯ ಅಂತಾರಾಷ್ಟ್ರೀಯ ಮೇಳ’ ಆಯೋಜನೆಗೊಂಡಿದೆ.
ನಟ ಪುನೀತ್ ರಾಜ್‌ಕುಮಾರ್, ರಮೇಶ್, ನಟಿ ಪ್ರಿಯಾಂಕಾ ಉಪೇಂದ್ರ, ಹೃದಯ ತಜ್ಞ ಡಾ.ಸಿ.ಎನ್. ಮಂಜುನಾಥ್, ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಅಧ್ಯಕ್ಷ ಮೋಹನದಾಸ ಪೈ, ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮುಂತಾದ ಗಣ್ಯರು ಈ ಮೇಳಕ್ಕೆ ಬೆಂಬಲ ಸೂಚಿಸಿದ್ದು, ರಾಜಧಾನಿಯಲ್ಲಿ ಆಹಾರ ಜಾಗೃತಿ ಮೂಡಿಸುತ್ತಿದ್ದಾರೆ.
“ಸಿರಿಧಾನ್ಯಗಳು ಡಯಾಬಿಟೀಸ್ ನಿಯಂತ್ರಿಸಲು ಮತ್ತು ತಡೆಯಲು ನೆರವಾಗುತ್ತವೆ. ಭಾರತದಲ್ಲಿ ಶೇ.30ರಷ್ಟು ಜನರಿಗೆ ಅನೀಮಿಯಾ ಬಾಧಿಸುತ್ತಿದೆ. ಕಬ್ಬಿಣದ ಕೊರತೆಗೆ ಸಿರಿಧಾನ್ಯವು ಅತ್ಯಂತ ಪೂರಕ ಆಹಾರ. ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಕಣಜ’ ಎನ್ನುತ್ತಾರೆ ಸಂಗೀತಗಾರ ರಘು ದೀಕ್ಷಿತ್.
ನೀವಿಲ್ಲಿಗೆ ಹೋದರೆ, ಸಿರಿಧಾನ್ಯ ಕುರಿತು ಮಾಹಿತಿ ಪಡೆಯಬಹುದು. ನಿಮಗೆ ಯೋಗ್ಯವಾದುದನ್ನು ಖರೀದಿಸಬಹುದು. ಹಾಗೆ ಅತ್ತಿತ್ತ ನೋಡಿದರೆ, ಸೆಲೆಬ್ರಿಟಿಗಳೂ ಕಣ್ಣಿಗೆ ಬೀಳಬಹುದು. ಅಂದಹಾಗೆ, ಈ ಅಂತಾರಾಷ್ಟ್ರೀಯ ಮೇಳ ಈಗಾಗಲೇ ಶುಕ್ರವಾರವೇ ಶುರುವಾಗಿದ್ದು, ನಾಳೆ ಕೊನೆಗೊಳ್ಳಲಿದೆ.
ಯಾವಾಗ?: ಜ.20, 21, ಶನಿವಾರ- ಭಾನುವಾರ
ಎಲ್ಲಿ?: ಅರಮನೆ, ಪ್ಯಾಲೇಸ್ ಗುಟ್ಟಹಳ್ಳಿ