ಕ್ರಿಸ್ ಮಸ್ ಎಂದರೆ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ತಾರೀಖಿನಂದು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು ಹಾಗೆ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು.
ಕ್ರಿಸ್‌ಮಸ್ ಎಂದರೆ ನೆನಪಾಗುವುದೇ ಸ್ವಾದಿಷ್ಟ ಕೇಕ್ . ಕೇಕ್ ಇಲ್ಲದೇ ಕ್ರಿಸ್ ಮಸ್ ಇಲ್ಲ. ನಗರದ ಹಲವೆಡೆ ಕೇಕ್ ಪ್ರದರ್ಶನಗಳು ಕೂಡ ನಡೆಯುತ್ತವೆ. ಕ್ರಿಸ್ ಮಸ್ ಹಬ್ಬ ಒಂದು ತಿಂಗಳು ಬಾಕಿ ಇರುವಾಗಲೇ ಕೇಕ್ ಗಳನ್ನು ತಯಾರಿಸುತ್ತಾರೆ. ಈ ಕೇಕ್ ಅನ್ನು ಹೇಗೆ ತಯಾರು ಮಾಡುತ್ತಾರೆ! ಅದರಲ್ಲೂ ಹಬ್ಬಕ್ಕೆಂದೇ ವಿಶಿಷ್ಟ ಬಗೆಯ ಕೇಕ್ ತಯಾರಿಸುವುದು ಹೇಗೆ ಎನ್ನುವ ಕುತೂಹಲ ಸಹಜ.
“ಹಿಡನ್ ಫ್ರುಟ್ ಕೇಕ್” ಎನ್ನುವುದು ಕ್ರಿಸ್‌ಮಸ್ ಹಬ್ಬಕ್ಕೆ ತಯಾರಿಸಲ್ಪಡುವ ಒಂದು ವಿಶೇಷ ಕೇಕ್ ಕ್ರಿಸ್ಮಸ್ ಹಬ್ಬದ ಕೇಕ್ ತಯಾರಿಕೆಗೆ ವಿವಿಧ ಬಗೆಯ ಹಣ್ಣುಗಳನ್ನು ಒಟ್ಟಿಗೆ ಸುರಿಯುವ ಮೂಲಕ ಕೇಕ್ ಮಿಕ್ಸಿಂಗ್ ಮಾಡುತ್ತಾರೆ ಮಿಕ್ಸಿಂಗ್ ನಲ್ಲಿ ಒಣ ಹಣ್ಣುಗಳು, ಕ್ಯಾಂಡಿಡ್ ಲೆಮೆನ್, ಕಿತ್ತಳೆಹಣ್ಣಿನ ಪೀಲ್, ದಾಲ್ಚಿನ್ನಿ, ಚೆರ್ರಿ ಹಣ್ಣುಗಳ ಜತೆಗೆ ದ್ರಾಕ್ಷಿ ಹಣ್ಣಿನ ವೈನ್, ರಮ್, ಜೇನುತುಪ್ಪ, ಬಾದಾಮಿ ತುಣುಕುಗಳನ್ನು ಹಾಕಿ ಮಾಡುತ್ತಾರೆ.
ಪ್ಲಮ್ ಕೇಕ್, ಸ್ಟೊಲೆನ್ ಕೇಕ್, ಚಾರ್ಬೆಲಿ, ಸ್ಪೆಕ್ಯುಲೂಸ್, ವೆನಿಲಾ ಕಿಪ್‌ಫೆರ್ಲ್, ಬಸ್ಲೆ ರ್ ಬ್ರುನ್ಸ್ಲಿ, ಸ್ಪಿಟ್ಸ್‌ಬುಬೆನ್, ಯೂಲೆ ಲಾಗ್ಸ್, ಮಿನ್ಸ್ ಪೀಸ್, ಕ್ಯಾಡಿಂಡ್ ಸ್ಟೋಲನ್ ಬ್ರೆಡ್, ಜಿಂಜರ್ ಹೌಸ್, ಸ್ಟೀಮ್ಡ್ ಪ್ಲಮ್ ಪಡ್ಡಿಂಗ್, ಆ್ಯಪಲ್ ಕ್ರೀಂ ಕೇಕ್. ಹೀಗೆ ತಮಗೆ ಇಷ್ಟವಾದ ಕೇಕುಗಳನ್ನು ತಂದು ಕ್ರಿಸ್‌ಮಸ್ ಸೆಲೆಬ್ರೇಷನ್ ಮಾಡ್ತಾರೆ. ಅದರಲ್ಲೂ ಸ್ಪೆಷಲಿ ಫ್ರೂಟ್ ಕೇಕ್ ಕೊಟ್ಟಿ ಆಚರಿಸುತ್ತಾರೆ. ಜೀಸಸ್ ಹುಟ್ಟಿದ ಖುಷಿಗೆ ಕ್ರಿಸ್‌ಮಸ್ ಕೇಕ್ ಕೊಟ್ಟು ಖುಷಿ ಹಂಚುತ್ತಾರೆ.
ಸಾನಿಯಾ. ಆರ್
ಎಸ್ ಡಿ ಯಂ ಕಾಲೇಜ್ ಉಜಿರೆ