Advertisement

ಪೊಲೀಸರಿಗೆ ಗುರುತಿನ ಬಲ; ಲೋಕಸಭೆಯಲ್ಲಿ ಅಪರಾಧ ಪ್ರಕ್ರಿಯೆ ವಿಧೇಯಕ ಅಂಗೀಕಾರ

12:14 AM Apr 05, 2022 | Team Udayavani |

ಹೊಸದಿಲ್ಲಿ: ಪ್ರತಿಪಕ್ಷಗಳ ಆಕ್ಷೇಪಕ್ಕೆ ಕಾರಣವಾಗಿದ್ದ ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ವಿಧೇಯಕಕ್ಕೆ ಸೋಮವಾರ ಲೋಕಸಭೆ ಅಂಗೀಕಾರ ನೀಡಿದೆ. ಸದನದಲ್ಲಿ ನಡೆದ ಚರ್ಚೆಗೆ ಉತ್ತರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹೊಸ ವ್ಯವಸ್ಥೆಯಿಂದ ಪೊಲೀಸರು ಕುಕೃತ್ಯ ಎಸಗುವವರಿಗಿಂತ ಹೆಚ್ಚು ಆಧುನಿಕವಾಗಿ ಯೋಚಿಸಲು ಸಾಧ್ಯವಾಗುತ್ತದೆ.

Advertisement

ಜತೆಗೆ ಅಪರಾಧಿಗಳಿಗಿಂತ ಹೆಚ್ಚು ಚಾಣಾಕ್ಷರಾಗಿ ಯೋಚಿಸಲು ನೆರವು ನೀಡಲಿದೆ ಎಂದರು. “ಅಪರಾಧಿಗಳ ಗುರುತು ದಾಖಲಿಸುವ ಕುರಿತಂತೆ ಹಳೇಯ ಕಾಲದ ವ್ಯವಸ್ಥೆ ಕೈಬಿಟ್ಟು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದಿರುವಂಥ, ನೂತನ ತಂತ್ರಜ್ಞಾನಾ ಧಾರಿತ ವ್ಯವಸ್ಥೆಯನ್ನು ಈ ವಿಧೇಯಕದ ಮೂಲಕ ನಾವು ಅಳವಡಿಸಿಕೊಳ್ಳಲಿದ್ದೇವೆ’ ಎಂದು ಅಮಿತ್‌ ಶಾ ಹೇಳಿದರು.

ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ

ಹೊಸ ವಿಧೇಯಕ ಮಾನವ ಹಕ್ಕುಗಳ ರಕ್ಷಕನಾಗಿಯೂ ಕೆಲಸ ಮಾಡಲಿದೆ ಎಂದೂ ಹೇಳಿದ್ದಾರೆ ಅಮಿತ್‌ ಶಾ. ಸಂಗ್ರಹಿಸಲಾಗಿರುವ ಅಪರಾಧಿಗಳ ಮಾಹಿತಿ ವಿವರ ದುರುಪಯೋಗವಾಗಲಿದೆ ಎಂಬ ಕಳವಳಕ್ಕೆ ಉತ್ತರಿಸಿದ ಅವರು, ಜಗತ್ತಿ  ನಲ್ಲಿಯೇ ಮಾಹಿತಿ ಸಂಗ್ರಹವನ್ನು ಬಳಕೆ ಮಾಡುತ್ತಿದೆ. ಅದೇ ವಿಚಾರವನ್ನೂ ದೇಶದಲ್ಲೂ ಅಳವಡಿಸಲಾಗುತ್ತದೆ. ಎರಡೂವರೆ ವರ್ಷಗಳಿಂದ ಅದು ಬಳಕೆಯಲ್ಲಿದೆ ಎಂದರು. ಹೊಸ ವಿಧೇಯಕ 1920ರಲ್ಲಿ ಜಾರಿಗೆ ಬಂದ ಖೈದಿಗಳನ್ನು ಗುರುತಿಸುವಿಕೆ ಕಾಯ್ದೆಯ ಸ್ಥಾನದಲ್ಲಿ ಜಾರಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next