Advertisement

ಪೋಷಕರಿಂದ ದೂರ ಮಾಡಿದ ಪತ್ನಿ ಹತ್ಯೆಗೆ ಯತ್ನ

01:48 PM Jul 17, 2023 | Team Udayavani |

ಬೆಂಗಳೂರು: ಪತಿಗೆ ತಂದೆ, ತಾಯಿ ಬಿಟ್ಟು ಬದಕಲು ಆಗಲ್ಲ.. ಪತ್ನಿಗೆ ಪತಿಯೊಂದಿಗಿನ ಪ್ರತ್ಯೇಕ ಜೀವನವೇ ಬೇಕು.. ಗರ್ಭಿಣಿಯಾಗಿರುವ ಪತ್ನಿಯ ಈ ಆಸೆಯಿಂದ ಬೇಸತ್ತು ಆಕೆಯನ್ನು ಕೊಲೆಗೈಯಲು ಯತ್ನಿಸಿದ ಪತಿರಾಯ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಕಮ್ಮಸಂದ್ರ ನಿವಾಸಿ ಅರವಿಂದ(29) ಮತ್ತು ಆತನ ಸಹಚರ ಮಾದನಾಯಕನಹಳ್ಳಿ ನಿವಾಸಿ ಉದಯ್‌ ಕುಮಾರ್‌(27) ಬಂಧಿತರು.

ಆರೋಪಿಗಳು ಕಳೆದ ಜನವರಿ 1ರಂದು ಸಂಜೆ 6.30ರ ಸುಮಾರಿಗೆ ಬಾಗಲೂರಿನ ಕೆಐಡಿಬಿ ಲೇಔಟ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಚೈತನ್ಯಾ(23) ಎಂಬಾಕೆಗೆ ಕಾರು ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ಏರ್‌ಪೋರ್ಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ, ಗಾಯಾಳು ಚೈತನ್ಯಾ ಮತ್ತು ಆಕೆಯ ತಂದೆ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ಬಾಗಲೂರು ಠಾಣೆಗೆ ಪ್ರಕರಣ ವರ್ಗಾಯಿಸಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಪತಿಯ ಸುಪಾರಿ ಸಂಚು ಬಯಲಾಗಿದೆ.

ಪ್ರಕರಣದ ಹಿನ್ನೆಲೆ?: ಕಮ್ಮಸಂದ್ರ ನಿವಾಸಿ ಅರವಿಂದ ಮತ್ತು ಹೊಸಕೋಟೆಯ ಚೈತನ್ಯ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ಆರಂಭದಲ್ಲಿ ಅನ್ಯೂನ್ಯವಾಗಿದ್ದ ದಂಪತಿ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಜಗಳ ವಾಗುತ್ತಿತ್ತು. ಹೀಗಾಗಿ ಪ್ರತ್ಯೇಕವಾಗಿ ವಾಸಿಸುವಂತೆ ಪತಿಗೆ ದುಂಬಾಲು ಬಿದ್ದು ಪ್ರತ್ಯೇಕ ಮನೆ ಮಾಡಿಕೊಂಡು ದಂಪತಿ ವಾಸವಾಗಿದ್ದರು. ಆದರೆ, ಈ ವಿಚಾರ ದಂಪತಿ ನಡುವೆ ಇನ್ನಷ್ಟು ಬಿರುಕು ಮೂಡಲು ಕಾರಣವಾಯಿತು. ಅಲ್ಲದೆ, ತನಗೆ ವಿಚ್ಛೇದನ ಕೊಡುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದ. ಈ ಮಧ್ಯೆ ಚೈತನ್ಯಾ 4 ತಿಂಗಳ ಗರ್ಭಿಣಿಯಾ ಗಿದ್ದರಿಂದ ವಿಚ್ಛೇದನ ನೀಡಲು ನಿರಾ ಕರಿಸಿದ್ದಳು. ಇದೇ ವಿಚಾರವಾಗಿ ಅರ ವಿಂದ ಪತ್ನಿ ಜತೆಗೆ ಜಗಳವಾಡುತ್ತಿದ್ದ. ಕೊನೆಗೆ ಪತ್ನಿಯನ್ನು ಅಪಘಾತದ ನಾಟಕ ಮಾಡಿ ಕೊಲೆ ಮಾಡಲು ಸಂಚು ರೂಪಿಸಿದ್ದ ಎಂಬುದು ತನಿಖೆ ಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಜ.1ರಂದು ಚೈತನ್ಯಾ ಭರತ ನಾಟ್ಯ ತರಗತಿ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಬಾಗಲೂರಿನ ಕೆಐಡಿಬಿ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಬರುವಾಗ ಆರೋಪಿಗಳು ಟಾಟಾ ಸುಮೋದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಚೈತನ್ಯಾರಿಗೆ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಅದೃಷ್ಟವಶಾತ್‌ ಚೈತನ್ಯಾ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಗಂಭೀರ ಗಾಯಗಳಿಂದ ಬಳಲುತ್ತಿದ್ದರು. ಈ ಸಂಬಂಧ ಏರ್‌ಪೋರ್ಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ, ಚೈತನ್ಯಾ ಮತ್ತು ಅವರ ಪೋಷಕರು ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾಗಲೂರು ಠಾಣೆ ಪೊಲೀಸರು ಕೊಲೆಗೆ ಯತ್ನ ಪ್ರಕರಣ ದಾಖ ಲಿಸಿದ್ದರು. ಅಲ್ಲದೆ, ಖುದ್ದು ಚೈತನ್ಯಾ ಮತ್ತು ಆಕೆಯ ಪೋಷಕರು ಅರವಿಂದ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಹಿಂದೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದನ್ನು ಉಲ್ಲೇಖೀಸಿದ್ದರು.

Advertisement

ಕಾರಿನ ನೋಂದಣಿ ಸಂಖ್ಯೆ ನೀಡಿದ ಸುಳಿವು !: ಈ ಮಧ್ಯೆ ವಿಧಾನಸಭಾ ಚುನಾವಣೆ ಬಂದಿದ್ದರಿಂದ ತನಿಖೆ ಸ್ಥಗಿತಗೊಂ ಡಿತ್ತು. ಬಳಿಕ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಘಟನಾ ಸ್ಥಳ ಸುತ್ತಮುತ್ತಲ ಪ್ರದೇಶಗಳ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಅಪಘಾತ ಎಸೆಗಿದ್ದ ಟಾಟಾ ಸುಮೋ ಕಾರಿನ ಸುಳಿವು ಸಿಕ್ಕಿತ್ತು. ಆ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಕಾರಿನ ಮಾಲೀಕರನ್ನು ಸಂಪರ್ಕಿಸಿದಾಗ, ಆ ಕಾರು ಆರೋಪಿ ಉದಯ್‌ಗೆ ಮಾರಾಟವಾಗಿರುವ ವಿಚಾರ ಗೊತ್ತಾಗಿ ದೆ. ಬಳಿಕ ಮಾದನಾಯಕನಹಳ್ಳಿಯಲ್ಲಿ ಉದಯ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಪಘಾತದ ಹಿಂದಿನ ರಹಸ್ಯ ಬಯ ಲಾಗಿದೆ. ಬಳಿಕ ಈತ ನೀಡಿದ ಮಾಹಿತಿ ಮೇರೆಗೆ ಅರವಿಂದ್‌ ನನ್ನು ಬಂಧಿಸಲಾಗಿದೆ. ಉದಯ್‌ ಅಪಘಾತ ಎಸೆಗಿದ ಬಳಿಕ ಕಾರನ್ನು ಗ್ಯಾರೇಜ್‌ವೊಂದರಲ್ಲಿ ಬಿಟ್ಟಿದ್ದ. ಸದ್ಯ ಈ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

1.50 ಲಕ್ಷ ರೂ. ಸುಪಾರಿ: ಆರೋಪಿ ಅರವಿಂದಗೆ ಕೆಲ ವರ್ಷಗಳಿಂದ ಲಾರಿ ಚಾಲಕ ಉದಯ್‌ ಕುಮಾರ್‌ ಪರಿಚಯವಿತ್ತು. ಹೀಗಾಗಿ ಉದಯ್‌ನನ್ನು ಸಂಪರ್ಕಿಸಿದ ಆತ, ಪತ್ನಿ ಚೈತನ್ಯಾಳನ್ನು ಅಪಘಾತ ಮಾಡಿ ಕೊಲೆ ಮಾಡುವ ಉದ್ದೇಶ ತಿಳಿಸಿದ್ದ. ಅದಕ್ಕಾಗಿ ಉದಯ್‌ಗೆ ಒಂದೂವರೆ ಲಕ್ಷ ರೂ. ಸುಪಾರಿ ನೀಡಿದ್ದ. ಅಲ್ಲದೆ, ಪೂರ್ತಿ ಹಣ ಕೂಡ ಕೊಟ್ಟಿದ್ದ. ಅದರಂತೆ ಉದಯ್‌ 40 ಸಾವಿರ ರೂ. ಕೊಟ್ಟು ಹಳೇ ಟಾಟಾ ಸುಮೋ ಕಾರು ಖರೀದಿಸಿದ್ದ. ಬಳಿಕ ಆರೋಪಿಗಳಿಬ್ಬರೂ ಚೈತನ್ಯಾ ಓಡಾಡುವ ಸ್ಥಳಗಳ ಬಗ್ಗೆ ನಿಗಾವಹಿಸಿದ್ದರು. ಆ ಮಾರ್ಗದಲ್ಲಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇವೆ, ಇಲ್ಲ ಎಂಬುದನ್ನೂ ಗಮನಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next