Advertisement

ತಿಮಿಂಗಲ ವಾಂತಿ ಅಂಬರ್ಗ್ರಿಸ್ ಮಾರಾಟ ಯತ್ನ ; ಮೂವರ ಬಂಧನ

11:19 PM Apr 11, 2022 | Team Udayavani |

ಸಾಗರ: ಬೆಲೆಬಾಳುವ ತಿಮಿಂಗಲ ವಾಂತಿ ಅಂಬರ್ಗ್ರಿಸ್ ಮಾರಾಟಕ್ಕಾಗಿ ಸಾಗಣೆಗೆ ಯತ್ನಿಸುತ್ತಿದ್ದ ಸಂದರ್ಭ ಇಲ್ಲಿನ ಮೂವರನ್ನು ನಗರ ಠಾಣೆ ಪೊಲೀಸರು ಭಾನುವಾರ ಮಾಲು ಸಮೇತ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಶಿವಮೊಗ್ಗ ಜಿಲ್ಲಾ ಪೊಲೀಸರ ಮಾರ್ಗದರ್ಶನದಲ್ಲಿ ಇಲ್ಲಿನ ಪೊಲೀಸರು ರೈಲ್ವೆ ನಿಲ್ದಾಣದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ತಿಮಿಂಗಿಲ ವಾಂತಿ ಅಕ್ರಮವಾಗಿ ಮಾರಾಟ ಮಾಡುವ ಜಾಲವನ್ನು ಬೇಧಿಸಿದ್ದಾರೆ. ಸ್ಥಳೀಯರಾದ ಅಬ್ದುಲ್ ಯಾನೆ ರಾಮಪ್ಪ(40) ಸಂದೀಪ್ ಜಾನ್ (49)ಮತ್ತು ವಿ.ಜೆ.ರೋಹಿತ್ (42) ಬಂಧಿತ ಆರೋಪಿಗಳು. ಅಕ್ರಮದಲ್ಲಿ ಭಾಗಿಯಾದವರಿಂದ ಮಾಹಿತಿಯನ್ನು ಆಧರಿಸಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ತಿಮಿಂಗಲದ ಕರುಳಿನಲ್ಲಿ ಹುಟ್ಟುವ ಘನ ಮೇಣದಂತಹ ಅಂಬರ್ಗ್ರಿಸ್‌ನ್ನು ಸುಗಂಧ ದ್ರವ್ಯ ಹಾಗೂ ಮಾದಕ ವಸ್ತು ತಯಾರಿಕೆಗೆ ಬಳಸಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಬಾಳುವ ವಸ್ತು ಇದಾಗಿದ್ದು. ಅರಣ್ಯ ಕಾಯಿದೆ ಅಡಿ ತಿಮಿಂಗಲ ವಾಂತಿ ಮಾರಾಟ ಅಪರಾಧವಾಗಿದೆ.

ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಿಪ್ರಸಾದ್, ಎಎಸ್‌ಪಿ ವಿಕ್ರಮ ಅಮಾಟೆ ಮಾರ್ಗದರ್ಶನದಲ್ಲಿ ಎಎಸ್‌ಪಿ ರೋಹನ್ ಜಗದೀಶ್, ನಗರ ಪೊಲೀಸ್ ಠಾಣಾ ಸಿಪಿಐ ಕೃಷ್ಣಪ್ಪ, ಕಾರ್ಗಲ್ ಪೊಲೀಸ್ ಇನ್‌ಸ್ಪೆಕ್ಟರ್ ತಿರುಮಲೇಶ್, ಪಿಎಸ್‌ಐ ಟಿ. ಡಿ. ಸಾಗರಕರ್, ಪೊಲೀಸ್ ಅಪರಾಧ ವಿಭಾಗದ ಸಹ ಸಿಬ್ಬಂದಿ ರತ್ನಾಕರ, ಸಂತೋಷ ನಾಯ್ಕ್, ಪ್ರವೀಣ್ ಕುಮಾರ್, ಹಝರತ್ ಅಲಿ, ಶ್ರೀಧರ್, ಹಜರತ್ ಅಲಿ, ಮಲ್ಲೇಶ್, ಈ ಮಿಂಚಿನ ಪೊಲೀಸರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ : ಯಾರಿದು… ರಾಜಸ್ಥಾನವನ್ನು ವಿನ್‌ ಮಾಡಿಸಿದ ಕುಲದೀಪ್‌ ಸೇನ್‌?

Advertisement

Udayavani is now on Telegram. Click here to join our channel and stay updated with the latest news.

Next