Advertisement

Crime News; ಸುಳ್ಯ ಭಾಗದ ಅಪರಾಧ ಸುದ್ದಿಗಳು

11:58 PM Mar 16, 2024 | Team Udayavani |

ಕಾರು-ಬೈಕ್‌ ನಡುವೆ ಅಪಘಾತ
ಸುಳ್ಯ: ಎಲಿಮಲೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಪುತ್ತೂರಿನಿಂದ ಗುತ್ತಿಗಾರು ಕಡೆಗೆ ತೆರಳುತ್ತಿದ್ದ ಬೈಕ್‌ ಸೋಣಂಗೇರಿ-ಗುತ್ತಿಗಾರು ರಸ್ತೆಯ ಎಲಿಮಲೆ ಸಮೀಪದ ಜಬಳೆಯಲ್ಲಿ ಢಿಕ್ಕಿ ಹೊಡೆದು ಬೈಕ್‌ ಸವಾರರು ಗಾಯಗೊಂಡಿದ್ದಾರೆ. ವಾಹನಗಳು ಜಖಂಗೊಂಡಿವೆ. ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಸುಳ್ಯ: ಗಾಂಜಾ ಸಾಗಾಟ-ಬಂಧನ
ಸುಳ್ಯ: ನಗರದ ವಿಷ್ಣು ಸರ್ಕಲ್‌ ಪರಿಸರದಲ್ಲಿ ಅಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪದಲ್ಲಿ ಸುಳ್ಯದ ನಾವೂರು ನಿವಾಸಿ ಸಹಜಾದ್‌‌ನನ್ನು ಪೊಲೀಸರು ಸುಳ್ಯದಲ್ಲಿ ಶನಿವಾರ ಬಂಧಿಸಿದ್ದಾರೆ.

ಕಾರು ಅಪಘಾತ:
ಐವರಿಗೆ ಗಾಯ
ಸುಳ್ಯ: ಕೇರಳ ಭಾಗದಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬರೆಗೆ ಗುದ್ದಿದ ಪರಿಣಾಮ ಸುಳ್ಯದ ಎಂಜಿನಿಯರಿಂಗ್‌ ಕಾಲೇಜಿನ ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಾ. 16ರಂದು ಸುಳ್ಯದ ನಾಗಪಟ್ಟಣ ಬಳಿ ಸಂಭವಿಸಿದೆ. ಗಾಯಗಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳು ಮೈಸೂರು ಮೂಲದವರು.

ಕ್ಷುಲ್ಲಕ ವಿಚಾರಕ್ಕೆ ಹಲ್ಲೆ ಆರೋಪ
ಸುಳ್ಯ: ಕ್ಷಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರಿಗೆ ಇನ್ನೋರ್ವ ವ್ಯಕ್ತಿ ಹಲ್ಲೆ ನಡೆಸಿದ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೋಜಪ್ಪ ನಾಯ್ಕ (61) ಅವರು ಮಾ. 15ರ ರಾತ್ರಿ ಜಾಲ್ಸೂರು ಗ್ರಾಮದ ಅಡ್ಕಾರು ವಿನೋಬನಗರದ ದಿನಸಿ ಅಂಗಡಿ ಬಳಿಯಿದ್ದಾಗ ಜಾಲ್ಸೂರು ಗ್ರಾಮದ ದೀಕ್ಷಿತ್‌ ಎಂಬಾತ ಬಂದು ಕ್ಷುಲ್ಲಕ ವಿಚಾರವಾಗಿ ಕೈಯಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

Advertisement

ಲೈಂಗಿಕ ದೌರ್ಜನ್ಯ: ವ್ಯಕ್ತಿಯ ಬಂಧನ
ಸುಳ್ಯ: ಯುವತಿ ಯೋರ್ವಳನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿ ವೀಡಿಯೋ ಮಾಡಿಕೊಂಡು ಬ್ಲಾಕ್‌ವೆುàಲ್‌ ಮಾಡುತ್ತಿರುವ ಆರೋಪದಲ್ಲಿ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಸಂಪಾಜೆಯ ಸಿರಾಜುದ್ದೀನ್‌ ಬಂಧಿತ ವ್ಯಕ್ತಿ.

Advertisement

Udayavani is now on Telegram. Click here to join our channel and stay updated with the latest news.

Next