Advertisement
ಸುರೇಶ್ ಜೀವನ ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದರು. ಇವರು ಲಕ್ಷ್ಮೀ ಎಂಬುವರನ್ನು ವಿವಾಹವಾಗಿ ಸಂಪಂಗಿರಾಮನಗರದಲ್ಲಿ ವಾಸವಾಗಿದ್ದರು. ಈ ದಂಪತಿಗೆ ಬುದ್ಧಿಮಾಂದ್ಯ ಮಗು ಜನಿಸಿತ್ತು. ಆದರೆ, ಮಗುವಿಗೆ ಕಣ್ಣು ಕಾಣುತ್ತಿರಲಿಲ್ಲ, ಕಿವಿಯೂ ಸಹ ಕೇಳುತ್ತಿರಲಿಲ್ಲ. ಹೀಗಾಗಿ, ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು.
Related Articles
Advertisement
ಪತ್ನಿಗೆ ಎಚ್ಚರವಾದಾಗ ಪತಿ ಹಾಗೂ ಮಗು ಕಾಣಿಸಿರಲಿಲ್ಲ. ನೆರೆ-ಹೊರೆಯವರ ಸಹಾ ಯದೊಂದಿಗೆ ಮನೆಯ ಸುತ್ತ-ಮುತ್ತ ಹುಡುಕುತ್ತಿದ್ದರು. ಅನುಮಾನದ ಮೇರೆಗೆ ಸಂಪ್ ತೆಗೆದು ನೋಡಿದಾಗ ಸಾಯಿರಾಂ ಶವ ತೇಲುತ್ತಿರುವುದು ಕಂಡು ಬಂದಿತ್ತು. ಈ ಸಂಬಂಧ ಎಸ್.ಆರ್ ನಗರ ಠಾಣೆಯಲ್ಲಿ ಸುರೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸುರೇಶ್‌ಗಾಗಿ ಶೋಧ ನಡೆಸುತ್ತಿದ್ದರು. ಅಷ್ಟರಲ್ಲಾಗಲೇ ಸೋಮವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ಶೇಷಾದ್ರಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೆ ಹಳಿಯ ಪಕ್ಕದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತ್ತು.
ಈ ಬಗ್ಗೆ ಶೇಷಾದ್ರಿಪುರಂ ಪೊಲೀಸರು ಸಂಪಂಗಿ ರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಸುರೇಶ್ ಫೋಟೋ ಕಳುಹಿಸಿದ್ದರು. ಎಸ್.ಆರ್ ನಗರ ಪೊಲೀಸರು ಇದನ್ನು ಸುರೇಶ್ ಪತ್ನಿಗೆ ತೋರಿಸಿದಾಗ ಇದು ತನ್ನ ಪತಿ ಎಂಬುದನ್ನು ಗುರುತಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.