ನಂಜನಗೂಡು : ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನಂಜನಗೂಡು ತಾಲೂಕಿನ ನೆಲ್ಲಿತಾಳಪುರ ಗ್ರಾಮದ ಸತ್ಯ ಶನೇಶ್ವರ ಸ್ವಾಮಿ ದೇವಸ್ಥಾನದ ಗುಡ್ಡಪ್ಪ ಅವರನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ.
ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಇಟ್ಟು ಕೊಂಡಿದ್ದ ಶನೇಶ್ವರ ಸ್ವಾಮಿ ಗುಡ್ಡಪ್ಪ ಈಗ ಅಬಕಾರಿ ಪೊಲೀಸರ ಅತಿಥಿಯಾಗಿದ್ದಾರೆ.
ದೇವಾಲಯದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಕೊಠಡಿಯ ದಿವಾನ್ ಕಾಟ್ ನ ಕೆಳಗೆ ಬ್ಯಾಗ್ ನಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹ ಮಾಡಿ ಇಡಲಾಗಿತ್ತು ಎನ್ನಲಾಗಿದೆ. ಕೊಡಲೇ ಅಧಿಕಾರಿಗಳು ಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಮಾರಾಟ ಮಾಡುವ ಉದ್ದೇಶದಿಂದಲೇ ಗಾಂಜಾ ಸಂಗ್ರಹ ಮಾಡಿ ಇಡಲಾಗಿತ್ತೆಂದು ಗುಡ್ಡಪ್ಪ ವೆಂಕಟನಾಯಕ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ನ್ಯಾಯಾಂಗದಲ್ಲಿ 1 ಶೇಕಡಾ: ಅಭಿಷೇಕ್ ಬ್ಯಾನರ್ಜಿ ವಿರುದ್ಧದ ಪ್ರಕರಣ ವಜಾ
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 105ಗ್ರಾಂ ಒಣ ಗಾಂಜಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ವೆಂಕಟನಾಯಕ ವಿರುದ್ದ ಎಸ್.ಡಿ.ಪಿ.ಎಸ್.ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು. ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ…
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ವಿಕ್ರಂ ನಿರೀಕ್ಷಕರಾದ ದೀಪು ಎನ್ ಶಿವರಾಜು ಭಾಗಿಯಾಗಿದ್ದರು.